ಚನ್ನಕೇಶವ ದೇವಾಲಯದ ಬಳಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶೆ ಎಂ ಎಸ್ ಶಶಿಕಲಾ, ಸರ್ಕಾರ ರಸ್ತೆ ಸುರಕ್ಷತಾ ಬಗ್ಗೆ ಹತ್ತು ಹಲವಾರು ನಿರ್ಣಯ ಕೈಗೊಂಡಿದೆ. ಆದರೆ ಬುದ್ಧಿವಂತರೇ ಇಂದು ರಸ್ತೆ ಜಾಗೃತಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ವಿಪರ್ಯಾಸ. ಪ್ರತಿಯೊಬ್ಬರಿಗೂ ಕಷ್ಟದ ಸಮಯದಲ್ಲಿ ಅವರ ಸುರಕ್ಷತೆಗೆ ಪೊಲೀಸರ ಅವಶ್ಯಕತೆ ಬೇಕು. ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದಾಗ ನಿಮಗೆ ದಂಡ ಹಾಕುವಾಗ ಬುದ್ಧಿವಂತರಾದ ತಾವೆ ಆ ಇಲಾಖೆ ವಿರುದ್ಧ ತಿರುಗಿ ನಿಲ್ಲುವುದು ವಿಪರ್ಯಾಸ. ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಅದು ಕುಟುಂಬದ ಜವಾಬ್ದಾರಿಯಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ನ್ಯಾಯಾಂಗ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಪ್ರಾಹದ ಅಂಗವಾಗಿ ಬೀದಿ ನಾಟಕದ ಜೊತೆಗೆ ಸಾರ್ವಜನಿಕರಿಗೆ ಹೆಲ್ಮೆಟ್ ಕಡ್ಡಾಯದ ಜಾಗೃತಿ ಜಾಥವನ್ನು ಪಟ್ಟಣದಲ್ಲಿ ನಡೆಸಲಾಯಿತು.ಚನ್ನಕೇಶವ ದೇವಾಲಯದ ಬಳಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶೆ ಎಂ ಎಸ್ ಶಶಿಕಲಾ, ಸರ್ಕಾರ ರಸ್ತೆ ಸುರಕ್ಷತಾ ಬಗ್ಗೆ ಹತ್ತು ಹಲವಾರು ನಿರ್ಣಯ ಕೈಗೊಂಡಿದೆ. ಆದರೆ ಬುದ್ಧಿವಂತರೇ ಇಂದು ರಸ್ತೆ ಜಾಗೃತಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ವಿಪರ್ಯಾಸ. ಪ್ರತಿಯೊಬ್ಬರಿಗೂ ಕಷ್ಟದ ಸಮಯದಲ್ಲಿ ಅವರ ಸುರಕ್ಷತೆಗೆ ಪೊಲೀಸರ ಅವಶ್ಯಕತೆ ಬೇಕು. ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದಾಗ ನಿಮಗೆ ದಂಡ ಹಾಕುವಾಗ ಬುದ್ಧಿವಂತರಾದ ತಾವೆ ಆ ಇಲಾಖೆ ವಿರುದ್ಧ ತಿರುಗಿ ನಿಲ್ಲುವುದು ವಿಪರ್ಯಾಸ. ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಅದು ಕುಟುಂಬದ ಜವಾಬ್ದಾರಿಯಾಗಿದೆ. ಇದರ ಜೊತೆಯಲ್ಲಿ ಇತ್ತೀಚೆಗೆ ವಾಹನ ಓಡಿಸುತ್ತ ಮೊಬೈಲ್‌ನಲ್ಲಿ ಮಾತಾನಾಡುವುದು ಅಪರಾಧ. ಅಲ್ಲದೆ ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡುವುದು ಅದು ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಇದೆ. ಆದರೂ ಇಷ್ಟೆಲ್ಲಾ ಕಾನೂನಿದ್ದರೂ ಸಹ ಇತ್ರೀಚಿಗೆ ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಲು ನೀಡಿ ದಂಡ ಕಟ್ಟಿರುವುದಲ್ಲದೆ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ ಎಂದರು. ಆಟೋ ಚಾಲಕರಾಗಲಿ ದ್ವಿಚಕ್ರ ವಾಹನ ಸವಾರರಾಗಲಿ ಯಾವುದೇ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದ ಅವರು ವಾಹನ ಚಾಲನೆ ಮಾಡುವ ಮುಂಚೆ ಕಡ್ಡಾಯಾವಾಗಿ ಎಲ್ಲಾ ದಾಖಲಾತಿ ಇಟ್ಟು ಚಾಲನೆ ಮಾಡಬೇಕು. ನಿಮ್ಮ ಜೀವಕ್ಕೆ ಏನಾದರೂ ಅಪಘಾತದಿಂದ ತೊಂದರೆಯಾದರೆ ನಿಮ್ಮ ಕುಟುಂಬ ಬೀದಿಗೆ ಬರುತ್ತದೆ ಎಂದು ಹೇಳಿದರು.ರೇವಣ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಸಂಚಾರ ನಿಯಮ ಉಲ್ಲಂಘನೆ ಆಗುತ್ತಿದೆ. ತಾಲೂಕಿನಲ್ಲಿ ಕಳೆದ ೫ ವರ್ಷಗಳ ಈಚೆಗೆ ೯೧ ಅಪಘಾತವಾಗಿದ್ದು, ೩೭೦ ಪ್ರಕರಣ ದಾಖಲಾಗುದ್ದು ಇದರಲ್ಲಿ ೯೩ ಜನ ಸಾವನ್ನಪ್ಪಿರುವುದು ದುರ್ದೈವ. ಇದರಲ್ಲಿ ೪೩೦ ಜನರಿಗೆ ಗಾಯಗಳಾಗಿದ್ದು ಇಲ್ಲಿವರೆಗೂ ೨೦೨೫ ರ ಹೊರಗೆ ೭೦೦೩ ಪ್ರಕರಣ ದಾಖಲಾಗಿದ್ದು ೩೦, ಲಕ್ಷದ ೭೭,ಸಾವಿರ ದಂಡ ವಿಧಿಸಿದೆ. ಆದರೂ ಸಹ ಇದರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಬಿಜಿಎಸ್ ಪ್ರಾಂಶುಪಾಲ ದಿವ್ಯ ಕುಮಾರ್ ಮಾತನಾಡಿ ಇಂತಹ ಜಾಗೃತಿಗಳನ್ನು ಇಲಾಖೆಗಳು ಮಾಡಿದರೆ ಸಾಲದು .ಇದಕ್ಕೆ ಸಂಪೂರ್ಣ ಸಹಕಾರವನ್ನು ಸಾರ್ವಜನಿಕರು ನಾವು ಮಾಡಿದಾಗ ಮಾತ್ರ ಇಲಾಖೆ ಮಾಡುವ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಕೇವಲ ನೋಡಿದರೆ ಸಾಲದು ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು ಎಂದರು.ಈ ಸಂದರ್ಭದಲ್ಲಿ ಪಿಎಸ್ಐ ಎಸ್ ಜಿ ಪಾಟೀಲ್,ಶಂಕರಪ್ಪ ಪೊಲೀಸ್ ಇಲಾಖೆ ಸಿಬ್ಬಂದಿಗಳು ಆಟೋ ಚಾಲಕರ ಸಂಘದ ದೀಪು ಸೇರಿದಂತೆ ಇತರರು ಇದ್ದರು. ಇದೇ ವೇಳೆ ಪತ್ರಕರ್ತ ಮಹೇಶ್ ಗೌಡ ಯಮನ ಪಾತ್ರದಲ್ಲಿ ಹಾಗೂ ಚಿತ್ರಗುಪ್ತ ಪಾತ್ರದಲ್ಲಿ ಎಎಸ್ ಐ ಸೋಮಶೇಖರ್ ವಿಶೇಷವಾಗಿ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.