ದಿ ಟೌನ್ ಜನರಲ್ ಸ್ಟೋರ್ಸ್ ಕೊ ಆಪರೇಟಿವ್ ಸೊಸೈಟಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ
ಪಟ್ಣಣದ ದಿ ಟೌನ್ ಜನರಲ್ ಸ್ಟೋರ್ಸ್ ಕೋ ಅಪರೇಟಿವ್ ಸೊಸೈಟಿ ನೂತನ ಕಟ್ಟಡ ನಿರ್ಮಾಣಕ್ಕೆ ತಾವು ಪೂರ್ಣ ಸಹಕಾರ ನೀಡುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಭಾನುವಾರ ಪಟ್ಟಣದ ದಿ ಟೌನ್ ಜನರಲ್ ಸ್ಟೋರ್ಸ್ ಕೊ ಆಪರೇಟಿವ್ ಸೊಸೈಟಿಯಿಂದ ನಡೆದ ಸೊಸೈಟಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ನಂತರ ಸಭೆಯಲ್ಲಿ ಮಾತನಾಡಿದರು. ನೂತನ ಕಟ್ಟಡದಲ್ಲಿ ಅಲ್ಪಸಂಖ್ಯಾತರ ಬ್ಯಾಂಕ್ ನಡೆಸಲು ಸರ್ಕಾರದಿಂದ ಅನುಮತಿ ನೀಡುವ ಬಗ್ಗೆ ಅಧಿಕಾರಿಗಳು ಪೂರ್ಣ ಸಹಕರಿಸಲು ಸೂಚಿಸುವುದಾಗಿಯೂ ಹೇಳಿದರು.ದಿ ಟೌನ್ ಜನರಲ್ ಸ್ಟೋರ್ಸ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಆರ್.ಆನಂದ ಕುಮಾರ್ (ಟಿ.ಡಿ.ಆರ್.ಬಾಬು) ಮಾತನಾಡಿ, ಪಟ್ಟಣದಲ್ಲಿ 1942ರಲ್ಲಿ ಸೊಸೈಟಿ ಸ್ಥಾಪನೆಯಾಗಿದ್ದು, ಸೊಸೈಟಿ ಸಗಟು ವ್ಯಾಪಾರ ಕೇಂದ್ರವಾಗಿದ್ದು, ಕಬ್ಬಿಣ, ತಗಡು, ಕೃಷಿ ಉಪಕರಣಗಳು, ಬಟ್ಟೆ ವ್ಯಾಪಾರ, ದಿನಸಿ, ನಿತ್ಯೋಪಯೋಗಿ ಪದಾರ್ಥ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಜಿ.ಶಶಾಂಕ, ಸೊಸೈಟಿ ಉಪಾಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಕಾಂತರಾಜ್, ಸೋಸೈಟಿ ನಿರ್ದೇಶಕರು ಮತ್ತಿತರರು ಭಾಗವಹಿಸಿದ್ದರು.
-31ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ದಿ ಟೌನ್ ಜನರಲ್ ಸ್ಟೋರ್ಸ್ ಕೊ ಆಪರೇಟಿವ್ ಸೊಸೈಟಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಸೊಸೈಟಿ ಅಧ್ಯಕ್ಷ ಟಿ.ಆರ್.ಆನಂದ ಕುಮಾರ್ (ಟಿ.ಡಿ.ಆರ್.ಬಾಬು) ನಿರ್ದೇಶಕರು, ಪುರಸಭೆ ಸದಸ್ಯ ಟಿ.ಜಿ.ಶಶಾಂಕ ಮತ್ತಿತರರು ಇದ್ದರು.