ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಈಗಾಗಲೇ 2 ಲಕ್ಷ ಅನುದಾನ ನೀಡಿದ್ದೇನೆ. ಮುಂಬರುವ ಏಪ್ರಿಲ್ ನಂತರ ದೇವಾಲಯದ ಕಾಂಪೌಂಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಹೋಬಳಿ ಕೇಂದ್ರದ ತಿಪಟೂರು ರಸ್ತೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೀರ್ಣೋದ್ಧಾರಗೊಳ್ಳುತ್ತಿರುವ ದೇವಾಲಯದ ಕಾಮಗಾರಿಗಳ ಬಗ್ಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಾಹಿತಿ ಪಡೆದು ಮಾತನಾಡಿದರು.
ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಕಳೆದ ಅನೇಕ ವರ್ಷಗಳ ವರ್ಷಗಳ ಹಿಂದೆ ಈ ದೇವಾಲಯದ ಆವರಣದಲ್ಲಿ ದನಗಳ ಜಾತ್ರೆ ನಡೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಾತ್ರೆ ಸೇರುತ್ತಿಲ್ಲ. ಈ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯ ಎನ್ ಎಸ್ ಮಂಜುನಾಥ್ ಮಾತನಾಡಿ, ಶಾಸಕರು ಶ್ರೀ ಚಂದ್ರಮೌಳೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ. ಮುಂದಿನ ಫೆಬ್ರವರಿ ತಿಂಗಳ 23, 24ರಂದು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಗಂಗಾಧರ್ ( ನಿವೃತ್ತ ಅರೆ ಸೈನಿಕ ), ಉಪಾಧ್ಯಕ್ಷ ದೇವರಾಜ್, ಖಜಾಂಚಿ ರಂಗಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯೆ ಶಬಿನ್ ತಾಜ್ ಸಾಧಿಕ್ ಪಾಷಾ, ಮುಖಂಡರಾದ ಪುಟ್ಟಸ್ವಾಮಿ, ಗುಂಡಣ್ಣ, ದಿನೇಶ್ ಬಾಬು, ದೇವಾಲಯದ ಟ್ರಸ್ಟಿಗಳಾದ ವಿನಯ್ ಕುಮಾರ್, ರಕ್ಷಿತ್, ಸ್ವಾಮಿ, ಅಶೋಕ್ ಕುಮಾರ್, ರವಿ, ಚಿರಂಜೀವಿ, ರೂಪೇಶ್, ಸೇರಿದಂತೆ ಟ್ರಸ್ಟ್ ಎಲ್ಲಾ ಸದಸ್ಯರು, ಜಿ ಎನ್ ಕೊಪ್ಪಲು ಗ್ರಾಮಸ್ಥರು ಹಾಜರಿದ್ದರು.ಫೋಟೋ : ನುಗ್ಗೇಹಳ್ಳಿ ಹೋಬಳಿ ಕೇಂದ್ರದ ತಿಪಟೂರು ರಸ್ತೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ಶಾಸಕ ಸಿ ಎನ್ ಬಾಲಕೃಷ್ಣ ಭೇಟಿ ನೀಡಿ ಜೀರ್ಣೋದ್ಧಾರಗೊಳ್ಳುತ್ತಿರುವ ದೇವಾಲಯದ ಕಾಮಗಾರಿಗಳ ಬಗ್ಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಾಹಿತಿ ಪಡೆದು ಮಾತನಾಡಿದರು.