ಕನ್ನಡಪ್ರಭ ವಾರ್ತೆ ಮೇಲುಕೋಟೆ
ಭಾನುವಾರ ಮೇಲುಕೋಟೆಯ ಅನ್ನದಾನ ಭವನಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲೇ ತಯಾರಿಸಿದ ಪ್ರಸಾದವನ್ನು ಸ್ವೀಕರಿಸಿ ಸಿಬ್ಬಂದಿಯೊಡನೆ ಮಾಹಿತಿ ಪಡೆದರು.
ಸ್ವಚ್ಛತೆ ಹಾಗೂ ಅನ್ನದಾನ ನಿರ್ವಹಣೆ ಪ್ರಸಾದದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿ.ಎಸ್.ಪಿ ಪತ್ರಕರ್ತರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ವಿಶೇಷ ಅನುದಾನದಲ್ಲಿ ನನ್ನ ಅವಧಿಯಲ್ಲೇ ನಿರ್ಮಾಣಗೊಂಡು ಮುಖ್ಯಮಂತ್ರಿಗಳಿಂದ ವೈರಮುಡಿ ಉತ್ಸವದಂದೇ ಉದ್ಘಾಟಿಸಲಾಗಿತ್ತು ಎಂದರು.ಆದರೆ, ಕಾರಣಾಂತರದಿಂದ ನಿತ್ಯ ಅನ್ನದಾನ ಆರಂಭಿಸಲಾಗಿರಲಿಲ್ಲ. ಇದೀಗ ಅನ್ನದಾನ ಭವನ ವಾರಕ್ಕೆರಡು ದಿನ ಭಕ್ತರ ಉಪಯೋಗಕ್ಕೆ ದೊರೆಯುತ್ತಿರುವುದು ಸ್ವಾಗತಾರ್ಹ. ಮೇಲುಕೋಟೆಯಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸುವ ಮತ್ತು ಅನ್ನದಾನ ಭವನ ನಿರ್ವಹಣೆಯಲ್ಲಿ ಯಾರೂ ರಾಜಕೀಯ ಮಾಡಬಾರದು. ನಾನೂ ಸಹ ನಿರ್ವಹಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಈ ವೇಳೆ ಮೇಲುಕೋಟೆ ಯುವ ಮುಖಂಡರಾದ ಈಶಮುರುಳಿ ಪುಳಿಯೋಗರೆ ರವಿ, ದೇವಾಲಯದ ಸಿಬ್ಬಂದಿ ಹಾಜರಿದ್ದರು.ಅನಧಿಕೃತವಾಗಿ ಮನೆ ಕಟ್ಟಡ ನಿರ್ಮಾಣ: ಗ್ರಾಮಸ್ಥರ ಪ್ರತಿಭಟನೆ
ಅನಧಿಕೃತ ಮನೆ ಕಟ್ಟಡ ನಿರ್ಮಾಣ ವಿರೋಧಿಸಿ ತಾಲೂಕಿನ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಕಳೆದ ವಾರವಷ್ಟೇ ಸ್ಥಳೀಯ ಶಾಸಕರಿಗೂ ಮನವಿ ಮಾಡಲಾಗಿ ಅವರು ಸಹ ಕ್ರಮ ತೆಗೆದುಕೊಂಡಿಲ್ಲ. ಈಗ ನಿರ್ಮಿಸುತ್ತಿರುವ ಕಟ್ಟಡವು ಕಂಬದಹಳ್ಳಿ ಗ್ರಾಪಂ ವ್ಯಾಪ್ತಿಯ ನರಗಲು ಗ್ರಾಮ ಠಾಣಾ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕ ಉದ್ದೇಶಕ್ಕೆಂದು ಈ ಸ್ಥಳ ಬಳಸಿಕೊಂಡರೆ ತೊಂದರೆ ಆಗುವುದಿಲ್ಲ. ಆದರೆ, ಅತಿಕ್ರಮ ಪ್ರವೇಶ ಮಾಡಿ ತೊಂದರೆ ಕೊಡಲೆಂದೇ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.