ಸಮೃದ್ಧ ಪಟ್ಟಣ ನಿರ್ಮಾಣಕ್ಕೆ ಸಹಕಾರ ಅಗತ್ಯ: ಯು.ಬಿ. ಬಣಕಾರ

KannadaprabhaNewsNetwork |  
Published : Oct 03, 2024, 01:24 AM IST
15.ನೇ ಹಣಕಾಸಿನ ಯೋಜನೆಯಡಿ 3 ಆಟೋ ಟಿಪ್ಪರನ್ನು ಶಾಸಕ ಯು.ಬಿ ಬಣಕಾರ ಬುಧವಾರ ಲೋಕಾರ್ಪಣೆಗೋಳಿಸಲಾಯಿತು. | Kannada Prabha

ಸಾರಾಂಶ

15ನೇ ಹಣಕಾಸಿನ ಯೋಜನೆಯಡಿ 8 ಲಕ್ಷ ವೆಚ್ಚದಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಿ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ರಟ್ಟೀಹಳ್ಳಿ: ಪಟ್ಟಣ ಪಂಚಾಯಿತಿ ವತಿಯಿಂದ 2021-22ನೇ ಸಾಲಿನ 15ನೇ ಹಣಕಾಸಿನ ಯೋಜನೆಯಡಿ 3 ಆಟೋ ಟಿಪ್ಪರ್‌ಗಳನ್ನು ಶಾಸಕ ಯು.ಬಿ. ಬಣಕಾರ ಬುಧವಾರ ಲೋಕಾರ್ಪಣೆಗೋಳಿಸಿದರು.

ನಂತರ ಮಾತನಾಡಿದ ಅವರು, ಗಾಂಧಿ ಜಯಂತಿಯಂದು ಪಟ್ಟಣದ ಸ್ವಚ್ಛತೆಗಾಗಿ 3 ಆಟೋ ಟಿಪ್ಪರ್ ಲೋಕಾರ್ಪಣೆಗೊಳಿಸಿದ್ದು, ಪಪಂ ಸಿಬ್ಬಂದಿ, ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಆ ಮೂಲಕ ಸಮೃದ್ಧ ಪಟ್ಟಣ ನಿರ್ಮಾಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಮಾತನಾಡಿ, ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಬಾಡಿಗೆ ಟ್ರ್ಯಾಕ್ಟರ್ ಪಡೆದು ಪಟ್ಟಣದ ಕಸ ವಿಲೇವಾರಿ ಮಾಡಲಾಗುತ್ತಿದ್ದು, ವಿಲೇವಾರಿಗೆ ಸಾಕಷ್ಟು ಅನಾನುಕೂಲ ಉಂಟಾಗಿತ್ತು. ಇದನ್ನು ಮನಗಂಡು ಕಳೆದ ಆಗಸ್ಟ್‌ 15ರಂದು 15ನೇ ಹಣಕಾಸಿನ ಯೋಜನೆಯಡಿ 8 ಲಕ್ಷ ವೆಚ್ಚದಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿರುವ ಕಾರಣ ಕಸ ವಿಲೇವಾರಿಗೆ ವಾಹನಗಳ ತೊಂದರೆಯಾಗುತ್ತಿದ್ದು, ಇಂದು ಶಾಸಕರು ಇನ್ನೂ 3 ಆಟೋ ಟಿಪ್ಪರ್ ಲೋಕಾರ್ಪಣೆಗೊಳಿದ್ದು ಕಸ ವಿಲೇವಾರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.ಪಟ್ಟಣದ ಜನತೆ ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡದೆ ಹಸಿ ಮತ್ತು ಒಣ ಕಸ ವಿಂಗಡನೆ ಮಾಡಿ ಶೇಖರಿಸಿಟ್ಟುಕೊಳ್ಳಬೇಕು. ಪ್ರತಿದಿನ ಪಪಂ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುವರು. ಅಂಗಡಿ ಮಾಲೀಕರು, ಹಣ್ಣಿನ ವ್ಯಾಪಾರಿಗಳು, ಎಗ್ಗ್‌ರೈಸ್ ಅಂಗಡಿಯವರು, ಮಾಂಸ ವ್ಯಾಪಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಸ ಹಾಕುತ್ತಿದ್ದಾರೆ. ಇನ್ಮುಂದೆ ತಮ್ಮ ಬಾಗಿಲಿಗೆ ಬರುವ ಕಸ ವಿಲೆವಾರಿ ಗಾಡಿಗಳಿಗೆ ನೀಡಬೇಕು. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಗಾಂಧಿ ನಡಿಗೆ ಪಾದಯಾತ್ರೆ

ಶಾಸಕ ಯು.ಬಿ. ಬಣಕಾರ ಹಾಗೂ ಅಪಾರ ಬೆಂಬಲಿಗರೊಂದಿಗೆ ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಮಾರು 2 ಕಿ.ಮೀ ವರೆಗೆ ಗಾಂಧಿ ನಡಿಗೆ ಪಾದಯಾತ್ರೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಶಾಸಕ ಯ.ಬಿ. ಬಣಕಾರ ಮಾತನಾಡಿ, ಮಹಾತ್ಮ ಗಾಂದೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅಹಿಂಸೆಯ ಮೂಲಕ ದೇಶಕ್ಕೆ ಸ್ವತಂತ್ರ್ಯ ತಂದುಕೊಡುವಲ್ಲಿ ಅವರ ಪಾತ್ರ ಅನನ್ಯ. ಅಂತಹ ಮಹಾನ್ ದೇಶ ಭಕ್ತ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ 100ನೇ ವರ್ಷದ ಸಂಭ್ರಮ ಆಚರಿಸುವ ಮೂಲಕ ಸುಮಾರು 2ಕಿಮೀ ವರೆಗೆ ಗಾಂಧಿ ನಡಿಗೆ ನಡೆದು ಸಂಭ್ರಮಿಸಲಾಯಿತು ಎಂದರು.

ಇದೇ ಸಂದರ್ಭದಲ್ಲಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತಹಸೀಲ್ದಾರ್ ಕೆ.ಗುರು ಬಸವರಾಜ, ಪಿ.ಡಿ. ಬಸನಗೌಡ್ರ, ಹನುಮಂತಗೌಡ ಭರಮಣ್ಣನವರ, ಪ್ರಕಾಶ ಬನ್ನಿಕೋಡ, ರವೀಂದ್ರ ಮುದಿಯಪ್ಪನವರ, ಮಹೇಶ ಗುಬ್ಬಿ, ವೀರನಗೌಡ ಪ್ಯಾಟಿಗೌಡ್ರ, ರಮೇಶ ಭೀಮಪ್ಪನವರ, ನಿಂಗಪ್ಪ ಚಳಗೇರಿ, ಸುನಿತಾ ದ್ಯಾವಕ್ಕಳವರ, ಬಾಬುಸಾಬ ಜಡದಿ, ಅಬ್ಬಾಸ ಗೋಡಿಹಾಳ, ಮಕ್ಬೂಲ್ ಸಾಬ್ ಗೋಡಿಹಾಳ, ವಸಂತ ದ್ಯಾವಕ್ಕಳವರ, ನಾಗರಾಜ ಕೋಣ್ತಿ, ಮಂಜು ಮಾಸೂರ, ಶಂಕರ ಬಿದರಿ, ಪಪಂ ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಮಲ್ಲನಗೌಡ, ಮಂಜು ಸುಣಗಾರ, ಬಸವರಾಜ ಕವಲೇತ್ತ, ನಿಕಿಲ್ ಅರ್ಕಾಚಾರಿ, ಗುತ್ತೆಪ್ಪ ಮಾದರ, ಕುಮಾರ ಮುಂತಾದವರು ಇದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!