ರಾಯಚೂರು: ಪೊಲೀಸ್ ಇಲಾಖೆ ಸಾರ್ವಜನಿಕರ ಸೇವೆಗಾಗಿ ಶ್ರಮಿಸುವ ಇಲಾಖೆಯಾಗಿದ್ದು, ಜಿಲ್ಲೆಯಲ್ಲಿ ಶಾಂತಿಯುತ ವಾತವರಣ ನಿರ್ಮಾಣವಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾದದ್ದು, ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಹೇಳಿದರು.
ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹೆಚ್ಚಿನ ಜಾಗೃತರಾಗಬೇಕು. ಮನೆಯಿಂದ ಎಲ್ಲಿಯಾದರು ಹೋಗುವುದಾದರೇ ಅಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ 112ಗೆ ತಿಳಿಸಬೇಕು. ಆಗ ಪೊಲೀಸ್ ಇಲಾಖೆಯಿಂದ ಮನೆಯ ಬಾಗಲಿಗೆ ಚೀಟಿ ಅಳವಡಿಸಲಾಗುತ್ತದೆ ಆ ಚೀಟಿಯಲ್ಲಿ ದಿನನಿತ್ಯ ಬೀಟ್ಸ್‌ಗೆ ಬರುವ ಪೊಲಿಸ್ ಸಿಬ್ಬಂದಿ ನೀವು ಮನೆಗೆ ಹಿಂತಿರುಗುವ ವರೆಗೂ ಸಹಿ ಮಾಡುತ್ತಾರೆ ಇದರಿಂದ ನಿಮ್ಮ ಮನೆಯ ಕಾವಲು ಹೆಚ್ಚಿನ ಭದ್ರತೆಯಿಂದ ಕೂಡಿರುತ್ತದೆ. ಈ ನೂತನ ಪದ್ದತಿಯನ್ನು ಜಿಲ್ಲೆಯಲ್ಲಿ ಅಳವಡಿಸಲಾಗುತ್ತಿದೆ ಎಂದರು.
ಬ್ಯಾಂಕ್‌ನಿಂದ ಹಣವನ್ನು ತೆಗೆದುಕೊಂಡು ಬರಿವಾಗ ಅತ್ಯಂತ ಎಚ್ಚರದಿಂದ ಇರಬೇಕು ಇಲ್ಲವಾದಲ್ಲಿ, ನಿಮ್ಮ ಗಮನವನ್ನು ಬೇರೆಡೆ ಇರಿಸಿ ಹಣವನ್ನು ಕದಿಯಬಹುದಾಗಿರುತ್ತದೆ. ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಫೋನ್‌ಗಳಲ್ಲಿ ಬಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಎಂದು ತಿಳಿಸಿದರು.ಮೊಬೈಲ್ ಫೋನ್‌ಗಳು ಕಳ್ಳತನಂವಾದಲ್ಲಿ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು. ಆಗ ಪೊಲೀಸ್ ಇಲಾಖೆಯಿಂದ ತನಿಖೆ ಕೈಗೊಂಡು ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಕಂಡುಹಿಡಿಯಬಹುದಾಗಿದೆ ಎಂದರು.