22ಕ್ಕೆ ಪ್ರಾಣಪ್ರತಿಷ್ಠೆ: ಹುಣಸಗಿಯಲ್ಲಿ ವಿವಿಧ ಕಾರ್ಯಕ್ರಮ

KannadaprabhaNewsNetwork |  
Published : Jan 20, 2024, 02:02 AM IST
ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯವು ಜ.22ರಂದು ನಡೆಯಲಿದ್ದು, ಅಂದು ಹುಣಸಗಿ ಪಟ್ಟಣದಲ್ಲಿ ಹಬ್ಬದ ವಾತವರಣ ನಿರ್ಮಾಣ ಮಾಡಲು ಹಾಗೂ ಇನ್ನಿತರ ಕಾರ್ಯಕ್ರಮಗಳ ಹಿನ್ನೆಲೆ ಪಟ್ಟಣದ ಹಳ್ಳದ ಹನುಮಾನ ಗುಡಿಯಲ್ಲಿ ವಿಶ್ವ ಹಿಂದೂ ಪರಿಷತ್ತ್‌ ಹಾಗೂ ಹುಣಸಗಿ ಪಟ್ಟಣದ ಹಿರಿಯ ಮುಖಂಡರು ಪೂರ್ವ ಸಿದ್ಧತಾ ಸಭೆ ನಡೆಸಿದರು. | Kannada Prabha

ಸಾರಾಂಶ

ಪ್ರಮುಖ ಬೀದಿಗಳಲ್ಲಿ ವಿದ್ಯುತ್‌, ಹೂವುಗಳಿಂದ ಸಿಂಗರಿಸಿ ಹಬ್ಬದಂತೆ ಆಚರಿಸಬೇಕೆಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯವು ಜ.22ರಂದು ನಡೆಯಲಿದ್ದು, ಅಂದು ಹುಣಸಗಿ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಹಿನ್ನೆಲೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯವು ಜ.22ರಂದು ನಡೆಯಲಿದ್ದು, ಪ್ರತಿಯೊಬ್ಬರಿಗೂ ಇದೊಂದು ಸಂತೋಷದ ಕ್ಷಣವಾಗಿದೆ. ಅಂದು ಹುಣಸಗಿ ಪಟ್ಟಣದಲ್ಲಿ ಹಬ್ಬದ ವಾತವರಣ ನಿರ್ಮಾಣ ಮಾಡಲು ಹಾಗೂ ಇನ್ನಿತರ ಕಾರ್ಯಕ್ರಮಗಳ ಹಿನ್ನೆಲೆ ಪಟ್ಟಣದ ಹಳ್ಳದ ಹನುಮಾನ ಗುಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಹುಣಸಗಿ ಪಟ್ಟಣದ ಹಿರಿಯ ಮುಖಂಡರು ಪೂರ್ವ ಸಿದ್ಧತಾ ಸಭೆ ನಡೆಸಿದರು.

ಉದ್ಘಾಟನೆ ದಿನದಂದು ಪ್ರಮುಖ ಬೀದಿಯಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆ, ಪಟ್ಟಣದಲ್ಲಿ ವಿದ್ಯುತ್, ಹೂವು, ತಳಿರು-ತೋರಣಗಳಿಂದ ಸಿಂಗಾರಗೊಳಿಸುವುದು ಹಾಗೂ ಪ್ರತಿಯೊಂದು ಮನೆಯ ಮುಂದೆ ರಂಗೋಲಿ, ದೀಪ ಬೆಳಗಿಸುವದು. ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವುದು ಸೇರಿ ಹಬ್ಬದಂತೆ ಆಚರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುಖಂಡರಾದ ವಿರೇಶ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಬಸವರಾಜ ಸ್ಥಾವರಮಠ, ಸಂಗಣ್ಣ ವೈಲಿ, ಮೇಲಪ್ಪ ಗುಳಗಿ, ಮುದಕಪ್ಪ ದೇಸಾಯಿ, ವಿರುಪಾಕ್ಷಿ ಸ್ಥಾವರಮಠ, ಬಸವರಾಜ ವೈಲಿ, ವೆಂಕಟೇಶ ಅರಳಿಗಿಡದ, ಆನಂದ ಬಾರಿಗಿಡದ, ಮಹೇಶ ಸ್ಥಾವರಮಠ, ಚನ್ನಕುಮಾರ ದಿಂಡವಾರ, ವಿನೋದ ದೊರೆ, ಬಸವರಾಜ ಅಂಚಲಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ