ರಾಜ್ಯ ಮತ್ತು ದೇಶ ಮಟ್ಟದ ಸಂಘಟನೆಗೆ ಸಹಕಾರ ಮುಖ್ಯ: ಮಂಜುನಾಥ

KannadaprabhaNewsNetwork | Published : May 23, 2024 1:04 AM

ಸಾರಾಂಶ

ಜೀವವಿಮಾ ಪ್ರತಿನಿಧಿಗಳು ರಾಜ್ಯ ಮತ್ತು ದೇಶ ಮಟ್ಟದಲ್ಲಿ ಸಂಘಟನೆಯಾಗಬೇಕು. ಇದಕ್ಕಾಗಿ ಪ್ರತಿನಿಧಿಗಳ ಸಹಕಾರ ಮುಖ್ಯ.

ಕೊಪ್ಪಳದಲ್ಲಿ ಜೀವವಿಮಾ ಪ್ರತಿನಿಧಿಗಳ ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕನ್ನಡಪ್ರಭ ವಾರ್ತೆ ಕೊಪ್ಪಳ

ಜೀವವಿಮಾ ಪ್ರತಿನಿಧಿಗಳು ರಾಜ್ಯ ಮತ್ತು ದೇಶ ಮಟ್ಟದಲ್ಲಿ ಸಂಘಟನೆಯಾಗಬೇಕು. ಇದಕ್ಕಾಗಿ ಪ್ರತಿನಿಧಿಗಳ ಸಹಕಾರ ಮುಖ್ಯ ಎಂದು ಜೀವವಿಮಾ ಪ್ರತಿನಿಧಿಗಳ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎಂ. ಮಂಜುನಾಥ ಹೇಳಿದ್ದಾರೆ.

ಭಾಗ್ಯನಗರದ ಖಾಸಗಿ ಹೋಟಲ್‌ನಲ್ಲಿ ಮುಖ್ಯ ಜೀವವಿಮಾ ಪ್ರತಿನಿಧಿಗಳ ವೆಲ್ಫೇರ್ ಅಸೋಸಿಯೇಷನ್ ರಾಯಚೂರು ವಿಭಾಗದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಮುಖ್ಯ ಜೀವವಿಮಾ ಪ್ರತಿನಿಧಿಗಳ ವೆಲ್ಫೇರ್‌ ಅಸೊಸಿಯೇಸನ್ ಸಂಘಟನೆ 2011ರಲ್ಲಿ ಸ್ಥಾಪನೆಗೊಂಡಿದೆ. ದೇಶದಲ್ಲಿ ನೀಲೇಶ್ ಸಾಥಿ ಉದಯಶಂಕರ್ ಮಿಶ್ರಾ ಅವರಂಥ ಮಾರ್ಗದರ್ಶನ ಜೊತೆಗೆ ಸದಸ್ಯರ ಹಿತರಕ್ಷಣೆಗೆ ಸದಾಮುಂದಿದೆ. ನಮ್ಮ ಸದಸ್ಯರು ರಾಜ್ಯ ಹಾಗೂ ದೇಶದ ಸಂಘಟನೆಗೆ ಸಹಕಾರ ಕೊಡಲಿ ಎಂದರು.ಸಿಡಬ್ಲ್ಯೂಎ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ಭಜಂತ್ರಿ ಮಾತನಾಡಿ, ದೇಶದ 88 ಡಿವಿಜನ್‌ಗಳಲ್ಲಿ ಸಂಘಟನೆ ಉತ್ತಮವಾಗಿದೆ. ನಮ್ಮಿಂದ ಶೇ. 30ರಷ್ಟು ವ್ಯವಹಾರವನ್ನು ನಿಗಮ ನಿರೀಕ್ಷಿಸುತ್ತದೆ. ತಾವೆಲ್ಲರೂ ಉತ್ತಮ ವ್ಯವಹಾರದ ಜೊತೆಗೆ ಸಂಘಟನೆಗೂ ಸಹಕಾರ ಕೊಡಬೇಕು ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ ಲಾಡಿ ಮಾತನಾಡಿ, ಸಂಘಟನೆಯನ್ನು ಮುಂದಿನ ಪೀಳಿಗೆಗಾಗಿ ಸುಭದ್ರಗೊಳಿಸಬೇಕಿದೆ. ಮನೆಯಲ್ಲಿ ಯಾರು ವಾಸಿಸುತ್ತಾರೆ ಎಂಬುವುದು ಮುಖ್ಯವಲ್ಲ. ಮನೆ ಎಷ್ಟು ಸುಭದ್ರವಾಗಿದೆ ಎನ್ನುವುದು ಮುಖ್ಯವಾಗಿದೆ. ನಮಗೆ ಎಲ್ಐಸಿ ನಿಗಮ ಹಾಗೂ ಸಂಘಟನೆಯೂ ಮುಖ್ಯ ಮತ್ತು ನಮ್ಮ ನ್ಯಾಯೋಚಿತ ಹಕ್ಕು ಹಾಗೂ ಬೇಡಿಕೆಗಾಗಿ ಸಂಘಟನೆ ಅತೀ ಅವಶ್ಯಕ. ನಮ್ಮ ದುಡಿಮೆಯ ಕೆಲ ಸಮಯವನ್ನು ಸಂಘಟನೆಗೆ ಮೀಸಲಿಡಬೇಕು. ಜೊತೆಗೆ ಉತ್ತಮ ಕೆಲಸ ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎಂದರು.

ಸಿಡಬ್ಲ್ಯೂಎ ಡಿವಿಜನ್ ಸಭೆಯಲ್ಲಿ ಪದಾಧಿಕಾರಿಗಳ ಚುನಾವಣೆಯಲ್ಲಿ ಡಿವಿಜನ್ ಅಧ್ಯಕ್ಷರಾಗಿ ಹೇಮಪ್ಪ ಬಿ, ಕಾರ್ಯದರ್ಶಿಯಾಗಿ ಸಿದ್ದಲಿಂಗಪ್ಪ ಹತ್ತರಕಿ, ಖಜಾಂಚಿಯಾಗಿ ಶ್ರೀನಿವಾಸ ಪಂಡಿತ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಿದ್ದಪ್ಪ ಅರಮನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಭಜಂತ್ರಿ, ಕರಿಬಸಯ್ಯ, ರಾಜಶೇಖರ ಲಾಡಿ, ಬಸೀರ್ ಅಹಮದ್, ಮಲ್ಲೇಶಪ್ಪ, ಶಿವಶಂಕರ್, ಚರಂತಿಮಠ, ಶರಣಪ್ಪಗೌಡ ಪಾಟೀಲ್, ಕೆ.ಬಿ. ಶೆಟ್ಟರ್, ಶಿವಪ್ಪ ತೆಂಗಿನಕಾಯಿ, ಅಂಬಣ್ಣ, ರಾಜಶೇಖರ ಬಾಬು, ಮಲ್ಲಿಕಾರ್ಜುನ ಕಂದಕೂರ, ಶಿವರಾಜ್ ಪತ್ತೆಪುರಿ, ಪಟೇಲ್ ಉಪಸ್ಥಿತರಿದ್ದರು. ರಾಘವೇಂದ್ರ ಗುಮಾಸ್ತೆ ಕಾರ್ಯಕ್ರಮ ನಿರೂಪಿಸಿದರು, ಕರಿಬಸಯ್ಯ ವಂದಿಸಿದರು.

Share this article