- ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷ, ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ
ಹಮ್ಮಿಕೊಳ್ಳಲು ಉದ್ದೇಶಿಸಿರುವ ಹಲವಾರು ಮಹಿಳಾಪರ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕನಕಶ್ರೀ ಮಹಿಳಾ ಸಮಾಜ ನೂತನ ಅಧ್ಯಕ್ಷೆ ಹೇಮಲತಾ ರೇವಣ್ಣ ಹೇಳಿದ್ದಾರೆ.
ಕನಕಶ್ರೀ ಮಹಿಳಾ ಸಮಾಜದಿಂದ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕಶ್ರೀ ಮಹಿಳಾ ಸಮಾಜ ನಡೆದು ಬಂದ ಹಾದಿ ಮತ್ತು ನಡೆಸಿಕೊಂಡು ಬರುವ ಕಾರ್ಯಕ್ರಮ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವನಿ ಜನಪದ ಕಲಾವಿದೆ ಎಸ್.ಆರ್.ರಂಜಿತಾ ಮಾತನಾಡಿ ಮಹಿಳೆ ಮತ್ತು ಜನಪದ ಒಂದಕ್ಕೊಂದು ಬೆಸೆದುಕೊಂಡಿದೆ. ಮಹಿಳೆಯ ಜನನದಿಂದ ಮರಣದವರೆಗೆ ಎಲ್ಲಾ ಪ್ರಮುಖ ಘಟ್ಟಗಳಿಗೂ ಸಂಬಂದಿಸಿದ ಜನಪದ ಗೀತೆಗಳನ್ನು ಹಾಡಿ, ಎಲ್ಲಾ ಮಹಿಳೆಯರಿಗೂ ಜಾನಪದದ ಉಳಿವಿಗೆ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಮನವಿ ಮಾಡಿದರು.
ಕನಕಶ್ರೀ ಮಹಿಳಾ ಸಮಾಜ ನಿಕಟಪೂರ್ವ ಅಧ್ಯಕ್ಷೆ ಲಕ್ಷ್ಮೀ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.
ಪದಾದಿಕಾರಿಗಳುಃ ಉಪಾಧ್ಯಕ್ಷೆ ಚಂದ್ರಕಲಾ ಆನಂದ್, ಕಾರ್ಯದರ್ಶಿ ಶಶಿಕಲಾ ಲೋಕೇಶ್, ಖಚಾಂಚಿ ರೇಣುಕಾ ಬಾಬು,