ಜೀತಪದ್ಧತಿ, ಮಾನವ ಕಳ್ಳ ಸಾಗಣೆ ತಡೆಗೆ ಸಹಕಾರ ಅಗತ್ಯ: ವಿಭಾ ವರ್ಗೀಸ್

KannadaprabhaNewsNetwork |  
Published : Nov 08, 2025, 01:03 AM IST
ತರೀಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಕಾರ್ಯಾಗಾರ | Kannada Prabha

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೀತಪದ್ದತಿ ನಿರ್ಮೂಲನೆ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಪಟ್ಟಣದ ವಿಕಸನ ಸಂಸ್ಥೆ ಸಿಇಒ ವಿಭಾ ವರ್ಗೀಸ್ ಹೇಳಿದ್ದಾರೆ.

ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೀತಪದ್ದತಿ ನಿರ್ಮೂಲನೆ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಪಟ್ಟಣದ ವಿಕಸನ ಸಂಸ್ಥೆ ಸಿಇಒ ವಿಭಾ ವರ್ಗೀಸ್ ಹೇಳಿದ್ದಾರೆ.ಪಟ್ಟಣದ ವಿಕಸನ ಸಂಸ್ಥೆ ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಪಂಚಾಯಿತಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಪಂಚಾಯಿತಿಯಲ್ಲಿ ಜೀತ ಕಾರ್ಮಿಕರು, ಜೀತ ಪದ್ಧತಿ ನಿರ್ಮೂಲನೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಆಗಬೇಕು. ಈ ಸಮಾಜದಲ್ಲಿ ಇದೊಂದು ಅನಿಷ್ಠ ಪದ್ಧತಿ, ಈ ಪದ್ಧತಿ ನಿರ್ಮೂಲನೆಗೆ ನಾವೆಲ್ಲರೂ ಕೆಲಸ ಮಾಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ ಅದು ಸ್ವತಂತ್ರವಿಲ್ಲದೆ ಬಲವಂತವಾಗಿ ಮುಂಗಡ ಹಣ ಪಡೆದು ಕೆಲಸ ಮಾಡುತ್ತಿದ್ದಾರೆ. ಇದು ಜೀತ ಪದ್ಧತಿ ಮತ್ತೊಂದು ಆಯಾಮ ಹಾಗೆ ಈ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ಧತಿ ಸಹ ಹೆಚ್ಚಾಗುತ್ತಿದೆ. ಹಾಗಾಗಿ ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು, ಇಲಾಖೆಗಳು ಮತ್ತು ಸಂಸ್ಥೆಗಳು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.ಇದೇ ಉದ್ದೇಶದಿಂದ ಈ ದಿನ ಒಂದು ದಿನದ ತರಬೇತಿ ಹಮ್ಮಿಕೊಂಡಿದ್ದೇವೆ. ತರಬೇತಿ ಪಡೆದ ವಿವಿಧ ಇಲಾಖೆ ಎಲ್ಲಾ ಅಧಿಕಾರಿಗಳ ಸಹಕಾರದಿಂದ ನಮ್ಮ ಜಿಲ್ಲೆಯಲ್ಲಿ ಜೀತ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ಮತ್ತು ಮಾನವ ಕಳ್ಳ ಸಾಗಣಿಕೆ ತಪ್ಪಿಸಬೇಕು ಇದರ ಬಗ್ಗೆ ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ತಿಳಿಸಿದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಇದು ಒಂದು ಉತ್ತಮ ಕಾರ್ಯಾಗಾರ ಈ ದಿನ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿ ಗಳು ತಾವುಗಳು ಇಲ್ಲಿದ್ದೀರಿ, ತಳಮಟ್ಟದಲ್ಲಿ ಜೀತ ಪದ್ಧತಿ ನಿರ್ಮೂಲನೆ, ಮಾನವ ಕಳಸಾಗಣೆ, ಬಾಲ್ಯ ವಿವಾಹ ನಿರ್ಮಾಲನೆ ಕುರಿತು ನಾವೆಲ್ಲರೂ ಈ ದಿನ ಕೆಲಸ ಮಾಡಬೇಕಿದೆ. ಇದಕ್ಕೆ ವಿಕಸನ ಸಂಸ್ಥೆ ಕೈಜೋಡಿಸಿದೆ. ಅಧಿಕಾರಿಗಳಾದ ನಾವು ನಮ್ಮಗ್ರಾಪಂ, ಹಳ್ಳಿಮಟ್ಟದಲ್ಲಿ ಇದರ ಬಗ್ಗೆ ಗಮನ ಹರಿಸಿ ಕೆಲಸ ಮಾಡಿ ಎಂದು ತಿಳಿಸಿದರು.ಅಜ್ಜಂಪುರ ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯ ಕುಮಾರ್ ಮಾತನಾಡಿ, ವಿಕಸನ ಸಂಸ್ಥೆ ನಮ್ಮ ತರೀಕೆರೆಯಲ್ಲಿ ಇರುವುದು ಒಂದು ವಿಶೇಷ. ಬಾಲಕಾರ್ಮಿಕ ಮತ್ತು ಬಡ ಮಕ್ಕಳ ಬಗ್ಗೆ ಚಟ್ನಳ್ಳಿ ಗ್ರಾಮದಲ್ಲಿ ಕೇಂದ್ರ ತೆರೆದು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಇದನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಅವರ ಜೊತೆ ಸೇರಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿ, ಮಾನವ ಕಳಸಾಗಾಣಿಕೆ ತಡೆ, ಬಾಲ್ಯ ವಿವಾಹ ಪದ್ಧತಿ ಬೇರು ಸಮೇತ ಕಿತ್ತುಗೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.ಪೊಲೀಸ್ ಇಲಾಖೆ ಮಂಜುನಾಥ್ ಮಾತನಾಡಿ ಮಹಿಳೆಯರು ಮತ್ತು ಮಕ್ಕಳು ಕಳ್ಳ ಸಾಗಾಣಿಕೆ ಆಗುತ್ತಿದೆ. ಇದನ್ನು ನಾವು ಪತ್ತೆ ಹಚ್ಚಿ ತಡೆಗಟ್ಟುವುದು ಅಧಿಕಾರಿ ವರ್ಗದವರ ಕರ್ತವ್ಯ, ಇದಕ್ಕೆ ಎಲ್ಲರೂ ಕೈಜೋಡಿಸಿ ಮತ್ತು ಬಾಲ್ಯ ವಿವಾಹ ದಂತ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಬೇಕು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಬೇಕು ಮಕ್ಕಳಲ್ಲಿ ಸಂಸ್ಕಾರ ತುಂಬ ಬೇಕು ಮಕ್ಕಳ ಪಾಲನೆ ಮತ್ತು ಪೋಷಣೆಯಲ್ಲಿ ಪ್ರಮುಖ ಪಾತ್ರ ಪೋಷಕರು ವಹಿಸಬೇಕಾಗುತ್ತದೆ ಎಂದು ಹೇಳಿದರು. ಹಿರಿಯ ಕಾರ್ಮಿಕ ನಿರೀಕ್ಷಕ ಅಧಿಕಾರಿ ಪ್ರಭಾಕರ್, ಬೆಂಗಳೂರು ಐಜಿಎಂ ತಂಡದ ಜೇಸುದಾಸ್ ಮಾತನಾಡಿದರು. ವಿಕಸನ ಸಂಸ್ಥೆಯ ಎಂ ಎಚ್ ಲಕ್ಷ್ಮಣ್ ಎಲ್ ಮುಕುಂದ, ಕೆ.ಶ್ರೀನಿವಾಸ, ತರೀಕೆರೆ, ಅಜ್ಜಂಪುರ ತಾಪಂ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ