ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ, ಫುಡ್ ಫೆಸ್ಟ್‌ಕನ್ನಡಪ್ರಭ ವಾರ್ತೆ ಅರಸೀಕೆರೆ
ಒಬ್ಬ ವಿದ್ಯಾರ್ಥಿಯ ಜೀವನ ಸುಂದರವಾಗಿ ರೂಪುಗೊಳ್ಳಬೇಕಾದರೆ ಶಿಕ್ಷಕರೊಂದಿಗೆ ಪೋಷಕರು ಉತ್ತಮ ಸಹಕಾರ ನೀಡಿದರೆ ಮಾತ್ರ ಸಾಧ್ಯ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಹಿರಿಯ ಶಿಕ್ಷಕ ಕೃಷ್ಣನಾಯಕ್ ಅಭಿಪ್ರಾಯಪಟ್ಟರು.ನಗರದ ಶಾಲೆಯಲ್ಲಿ ಏರ್ಪಡಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ, ಫುಡ್ ಫೆಸ್ಟ್ ಮತ್ತು ಪೋಷಕರ ಸಭೆ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿಭಾವಂತ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ, ಶಿಕ್ಷಣದೊಂದಿಗೆ ಸ್ವ ಉದ್ಯೋಗ ರೂಪಿಸಿಕೊಳ್ಳಲು ಅಗತ್ಯವಾದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ, ಇದರ ಉಯೋಗವನ್ನು ಪಡೆಯಬೇಕು ಎಂದರು,
ಶಾಲಾ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್, ‘ನಮ್ಮ ಶಾಲೆಯು ಉತ್ತಮ ಫಲಿತಾಂಶವನ್ನು ನೀಡುತ್ತಿದೆ. ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಸರ್ಕಾರಿ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಇಂದು ಹಳೆ ವಿದ್ಯಾರ್ಥಿ ಸಂಘವನ್ನು ಪ್ರಾರಂಭಿಸುತ್ತಿದ್ದು ಬಂದಿರುವ ಅನೇಕ ಹಳೆಯ ವಿದ್ಯಾರ್ಥಿಗಳು ವಿವಿಧ ಇಲಾಖೆಗಳಲ್ಲಿ ಸೇವೆಯಲ್ಲಿದ್ದಾರೆ. ಗುಣಮಟ್ಟದ ಶಿಕ್ಷಣ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಲಾಗುತ್ತದೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿನಿಯರು ತಮಗೆ ದೊರೆತ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಸ್ಥಾನಗಳನ್ನು ಸ್ವೀಕರಿಸಿದ್ದಾರೆ. ಗ್ರಾಮೀಣ ಪ್ರದೇಶದಿಂದಲೂ ಮಕ್ಕಳು ಬರುತ್ತಿದ್ದು ಅವರೂ ಸಹ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ಶಾಲೆ ಕಲ್ಪಿಸಿಕೊಡುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ವಿದ್ಯಾರ್ಥಿನಿಯರು ತಮ್ಮ ಓದನ್ನು ಚುರುಕುಗೊಳಿಸಬೇಕಿದೆ’ ಎಂದು ಹೇಳಿದರು.ನಿವೃತ್ತ ಮುಖ್ಯ ಶಿಕ್ಷಕ ನಟರಾಜ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹೇಗೆ ತಯಾರಾಗಬೇಕು, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪೋಷಕರ ಪಾತ್ರ ಹೇಗಿರಬೇಕು ಮತ್ತು ಈ ಶಾಲೆಯಲ್ಲಿ ದೊರಕುವ ಸೌಲಭ್ಯಗಳ ಬಗ್ಗೆಯೂ ತಿಳಿಸಿಕೊಟ್ಟರು,
ಸಭೆಯಲ್ಲಿ ಶಿಕ್ಷಕರಾದ ಶಶಿಕಲಾ, ನವೀನ್, ಪಾಲಾಕ್ಷ, ವಾಣಿಶ್ರೀ, ರೇಣುಕಾ, ಮುಬಿನ್ ಉಪಸ್ಥಿತರಿದ್ದರುಆಹಾರ ಮೇಳ ಚಪ್ಪರಿಸಿದ ಪೋಷಕರು
ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರಿಂದ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ವಿವಿಧ ಸ್ಟಾಲ್‌ಗಳನ್ನು ಹಾಕಿ ವಿದ್ಯಾರ್ಥಿನಿಯರು, ಭರ್ಜರಿ ವ್ಯಾಪಾರ ಮಾಡಿದರು, ಖಾದ್ಯಗಳು, ಚುರುಮುರಿ, ತಂಪು ಪಾನೀಯ, ಎಳನೀರು, ತರಕಾರಿ, ಅಲಂಕಾರಿಕ ಆಭರಣಗಳು, ಹಣ್ಣು, ಸಿಹಿ ತಿನಿಸುಗಳು ಹೀಗೆ ಹತ್ತು ಹಲವಾರು ಅಂಗಡಿಗಳನ್ನು ಹಾಕಿ ವಿದ್ಯಾರ್ಥಿನಿಯರು ವ್ಯಾಪಾರ ಮಾಡಿದರು. ಪೋಷಕರು, ಶಿಕ್ಷಕರು ಭಾಗವಹಿಸಿದರು. ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್ ಪತ್ರಿಕೆಯೊಂದಿಗೆ ಮಾತನಾಡಿ, ವಿದ್ಯಾರ್ಥಿನಿಯರಲ್ಲಿ ವ್ಯವಹಾರಿಕ ಜ್ಞಾನ ಮತ್ತು ಆಹಾರ ತಯಾರಿಕೆ ನೈಪುಣ್ಯತೆ ಹಾಗೂ ಆಹಾರ ತಯಾರಿಸುವಾಗ ನಿರ್ವಹಿಸಬೇಕಾದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.ಹಳೆಯ ವಿದ್ಯಾರ್ಥಿಗಳ ಸಂಘದ ಆರಂಭ, ಫುಡ್ ಫೆಸ್ಟ್ ಮತ್ತು ಪೋಷಕರ ಸಭೆ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಹಿರಿಯ ಶಿಕ್ಷಕ ಕೃಷ್ಣನಾಯಕ್ ಮಾತನಾಡಿದರು.