ಹಾವೇರಿ:ಸಹಕಾರ ಮನೋಭಾವನೆಗಳೇ ಸಂಘಗಳ ಶ್ರೇಯೋಭಿವೃದ್ಧಿಗೆ ಪೂರಕ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ ಅಂದಾಗ ಮಾತ್ರ ಸಂಘಗಳ ಅಸ್ತಿತ್ವ ಉಳಿಯಲು ಸಾಧ್ಯ ಎಂದು ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಹೇಳಿದರು.ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಸ್ಥಗಿತಗೊಂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಗೋಮಾತೆ ಪೂಜೆ ಮಾಡುವ ಮರು ಚಾಲನೆ ಮಾಡಿ ನಂತರ ಅವರು ಮಾತನಾಡಿದರು. ಸಂಘ ಸಂಸ್ಥೆಗಳು ಸಸಿಗಳಿದ್ದಂತೆ. ನಾವುಗಳು ಅವುಗಳನ್ನ ಕಾಳಜಿ ಜೋಪಾನ ಮಾಡಿ ಬೆಳೆಸಿದಲ್ಲಿ ಮಾತ್ರ ಅವುಗಳ ನಮಗೆ ಉತ್ತಮ ಫಸಲು ನೀಡಲು ಇಷ್ಟನ್ನ ಅರಿತಲ್ಲಿ ಯಾವ ಸಹಕಾರಿ ಸಂಘಗಳು ಮುಚ್ಚಲು ಸಾಧ್ಯವಿಲ್ಲ ಎಂದರು.ಒಕ್ಕೂಟ & ಕಲ್ಯಾಣ ಸಂಘದಿಂದ ಸಿಗುವ ಸೌಲಭ್ಯಗಳ ಮಾಹಿತಿ ಇದ್ದಲ್ಲಿ ಹಲವು ಸಮಸ್ಯೆಗಳಿಗೆ ತಿಲಾಂಜಲಿ ಇಡಬಹುದಾಗಿದೆ ಎಂದರಲ್ಲದೇ, ಮುಂದಿನ ದಿನದಲ್ಲಿ ಪುನಶ್ಚೇತನ ಸಂಘಕ್ಕೆ ಹಾಲಿನ ಪರೀಕ್ಷಾ ಉಪಕರಣ, ಹಾಲು ಉತ್ಪಾದಕರಿಗೆ ಬಟಾವಡೆ ತೊಂದರೆ ಆಗದಂತೆ ಮುಂಗಡ ಹಣ ನೀಡುವುದು ಹಾಗೂ ಕ್ಷೀರ ಸಂಜೀವಿನಿ ಯೋಜನೆ ಅಡಿ ಮಹಿಳಾ ಸಂಘಕ್ಕೆ ಸಿಗುವ ಅನುದಾನವನ್ನು ಒದಗಿಸುವ ಭರಸವೆ ನೀಡಿದರು. ಈ ವೇಳೆ ಗ್ರಾಮದ ಹಿರಿಯ ಮುಖಂಡರು ಅವರನ್ನ ಗೌರವಿಸಿ ಸನ್ಮಾನಿಸಿದರು.ಈ ವೇಳೆ ಗ್ರಾಮದ ಹಿರಿಯರಾದ ಮಾಲತೇಶ ದೊಡ್ಡಮನಿ, ಬಿ.ಸಿ. ಗೌಡ್ರ, ನಾರಾಯಣಪ್ಪ ದೇವಗಿರಿ, ಪಕ್ಕೀರಗೌಡ ಗೌಡ್ರ, ತಿರಕನಗೌಡ ಶಾಡರ ಹಾಗೂ ರೈತ ಮುಖಂಡರಾದ ಕಿರಣಕುಮಾರ ಗಡಿಗೋಳ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವಣ್ಣ ಶಿಡೆನೂರ ಹಾಗೂ ಒಕ್ಕೂಟದ ಅಧಿಕಾರಿಗಳು, ಮಹಿಳೆಯರು, ಹಾಲು ಉತ್ಪಾದಕರು ಉಪಸ್ಥಿತರಿದ್ದರು.