ಕುಂದಗೋಳ:
ತಾಲೂಕಿನಲ್ಲಿ ಶಿರೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಿರೂರ ಗ್ರಾಮದ ಪ್ರಾಥಮಿಕ ಸಹಕಾರ ಸಂಘದ ಬಿತ್ತನೆ ಬೀಜ ವಿತರಣೆ, ಗೊಬ್ಬರ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ. ಕಮಡೊಳ್ಳಿಗೆ ಸಂಪರ್ಕಿಸುವ ರಸ್ತೆಗೆ ಕಾಂಕ್ರಿಟ್ ಹಾಗೂ ಚರಂಡಿ ನಿರ್ಮಿಸಲಾಗಿದೆ. ಜತೆಗೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿದ್ದು ನೂತನವಾಗಿ ಬೋರ್‌ವೆಲ್ ಕೊರೆಯಿಸಲಾಗಿದೆ. ಹೊಲದ ದಾರಿಯಲ್ಲಿನ ಮುಳ್ಳು-ಕಂಟಿ ತೆರವುಗೊಳಿಸಲಾಗಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮುಂದೆಯೂ ಇದೇ ರೀತಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಈಶ್ವರಪ್ಪ ಬೆಂಗೇರಿ ಸಂಘದ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಮೃತ್ಯುಂಜಯ ಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಹಕಾರ ಸಂಘದ ಉಪಾಧ್ಯಕ್ಷ ಭರಮಪ್ಪ ಬನಪ್ಪನವರ, ಮುಖಂಡರಾದ ಬಾಬುಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಷಡಕ್ಷರಯ್ಯ ಹಿರೇಮಠ, ದೇವಪ್ಪ ತಾಯಿತಂದಿ, ಫಕೀರಗೌಡ ನಾಗನಗೌಡ್ರ, ಮಂಜುನಾಥ ಕಮಡೊಳ್ಳಿ, ಹುಲೆಪ್ಪ ಭಜಮ್ಮನವರ, ಬಸವರಾಜ ಸುಣಗಾರ, ಯಲ್ಲಪ್ಪ ಕಮಡೊಳ್ಳಿ, ಸುರೇಶ ಬೆಂಗೇರಿ ಸೇರಿದಂತೆ ಹಲವರಿದ್ದರು.