ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಹಕಾರಿ ಕ್ಷೇತ್ರಗಳು ಉತ್ಕೃಷ್ಟ ಸೇವೆ ನೀಡುವುದು ಮುಖ್ಯವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಕೇವಲ ವ್ಯವಹಾರಕ್ಕೆ ಸೀಮಿತವಾಗಿದ್ದು , ಬದುಕಿನ ಭರವಸೆಯನ್ನು ತುಂಬಿಸುವ ಕೆಲಸವನ್ನು ಸಹಕಾರಿ ಸಂಘಗಳು ಮಾಡುತ್ತಿವೆ. ಜನರನ್ನು ಸ್ವಾವಲಂಬಿಯಾಗಿ ಬದುಕಲು ಕಲಿಸಿದ ವಿಶ್ವದ ಏಕೈಕ ದೇಶ ಭಾರತ ಎಂದು ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ.ಸೋಮವಾರ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಇಂದಬೆಟ್ಟು ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲ ಪಡೆಯುವಾಗ ಇರುವ ಖುಷಿ ಮರುಪಾವತಿಯಲ್ಲಿಯೂ ಇರಬೇಕಾಗುತ್ತದೆ. ನಮ್ಮ ಸಾಲಗಳಿಗೆ ನಾವೇ ಹೊಣೆಯಾಗಿದ್ದು ಗುರಿ ಮತ್ತು ಉದ್ದೇಶ ಸ್ಪಷ್ಟವಾಗಿರಬೇಕು ಎಂದರು.ಗಣಕಯಂತ್ರ ಉದ್ಘಾಟನೆಯನ್ನು ಬೆಳ್ತಂಗಡಿ ಪ್ರಸನ್ನ ಶಿಕ್ಷಣ ಸಂಸ್ಥೆ ಅಧ್ಯಕ್ಷ,ಮಾಜಿ ಸಚಿವ ಕೆ. ಗಂಗಾಧರ ಗೌಡ ನೇರವೇರಿಸಿ ಮಾತನಾಡಿ, ಸಹಕಾರ ಸಂಘಗಳು ಜನ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದ್ದ ಬದಲಾವಣೆ ಮೂಲಕ ಸ್ವಾವಲಂಬನೆಗೆ ಅಡಿಪಾಯ ನಿರ್ಮಿಸಿವೆ ಎಂದರು.
ಭದ್ರತಾ ಕೊಠಡಿ ಉದ್ಘಾಟನೆಯನ್ನು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ನೆರವೇರಿಸಿ ಮಾತನಾಡಿದರು.ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ ಗೌಡ, ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಉಪಾಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಜಂಟಿ ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಜತೆ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ನಿರ್ದೇಶಕಿ ಸೌಮ್ಯಲತಾ ಜಯಂತ ಗೌಡ , ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು,ಇಂದಬೆಟ್ಟು ಗ್ರಾಪಂ ಅಧ್ಯಕ್ಷೆ ಆಶಾಲತಾ ಗುಡಿಗಾರ್, ಬಂಗಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ಉಪಾಧ್ಯಕ್ಷ ಆನಂದ ಗೌಡ ಬರೆಮೇಲು, ಸೌಹಾರ್ದ ಅಭಿವೃದ್ದಿ ಅಧಿಕಾರಿ ವಿಜಯ್ ಬಿ.ಎಸ್.ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಹಾರ್ತಾಜೆ, ಮಿತ್ತಬಾಗಿಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ಆನಂದ ಗೌಡ ಮೈರ್ನೋಡಿ , ಕಡಿರುದ್ಯಾವರ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ನೋಣಯ್ಯ ಗೌಡ, ನಾವೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ದೇಜಪ್ಪ ಗೌಡ , ಇಂದಬೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ವಾಮನ ಗೌಡ ಕೊಯಮಜಲು, ಕಡಿರುದ್ಯಾವರ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಶೀತಲಡ್ಡ, ನಾವೂರು ಗ್ರಾಮ ಸಮಿತಿ ಅಧ್ಯಕ್ಷ ಜಯಂತ ಗೌಡ ನರ್ನೊಟ್ಟು, ಇಂದಬೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ರಾಜೇಂದ್ರ ಗೌಡ ಕುಕ್ಕಿಮಾರ್, ಇಂದಬೆಟ್ಟು ಯುವ ವೇದಿಕೆ ಅಧ್ಯಕ್ಷ ಶೈಲೇಶ್ ಗೌಡ ಮನ್ನಡ್ಕ, ಕಡಿರುದ್ಯಾವರ ಯುವ ವೇದಿಕೆ ಅಧ್ಯಕ್ಷ ವಿಶ್ವೇಶ್ ಗೌಡ ಡೆಮ್ಮೆಜಾಲು ಇದ್ದರು.
ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ,ನಿರ್ದೇಶಕರುಗಳಾದ ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರ್, ದಾಮೋಧರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕೆತ್ತು, ಕೃಷ್ಣ ಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ ಅಡ್ಕಾಡಿ, ಜಯಂತ ಗೌಡ ಓಣಿಯಾಲು, ಭರತ್ ಗೌಡ ಹಾನಿಬೆಟ್ಟು, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ ಕುಮಾರ್, ಡಿ.ಚೇತನಾ ಚಂದ್ರಶೇಖರ ಗೌಡ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಅನಿಲ್ ಗೌಡ ಅಂತರ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆ ಅಧ್ಯಕ್ಷೆ ಅಪರ್ಣಾ ಶಿವಕಾಂತ ಗೌಡ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯುವ ಮಹಿಳಾ ವೇದಿಕೆ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ ಸಹಕರಿಸಿದರು. ಗಾಯತ್ರಿ ದಿನೇಶ್ ಮತ್ತು ಸರೋಜಿನಿ ವಿಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭರತ್ ಗೌಡ ಹಾನಿಬೆಟ್ಟು ವಂದಿಸಿದರು.