ಪ್ರಾಮಾಣಿಕತೆ, ದಕ್ಷತೆ ಇದ್ದಲ್ಲಿ ಸಹಕಾರಿ ಸಂಘಗಳು ಬಲವರ್ಧನೆ

KannadaprabhaNewsNetwork |  
Published : Jul 11, 2025, 01:47 AM IST
ಅಥಣಿ | Kannada Prabha

ಸಾರಾಂಶ

ದೇಶದಲ್ಲಿ ಸಹಕಾರಿ ರಂಗಕ್ಕೆ ತನ್ನದೇ ಆದ ಮಹತ್ವವಿದೆ. ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಮೂಲಕ ಗ್ರಾಹಕರ ಹಿತ ಕಾಪಾಡಬೇಕು. ಪ್ರಾಮಾಣಿಕತೆ ಮತ್ತು ದಕ್ಷತೆ ಸಹಕಾರಿ ಬ್ಯಾಂಕುಗಳು ರೂಢಿಸಿಕೊಂಡಾಗ ಆರ್ಥಿಕವಾಗಿ ಬಲವರ್ಧನೆ ಹೊಂದಲು ಸಾಧ್ಯ ಎಂದು ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ದೇಶದಲ್ಲಿ ಸಹಕಾರಿ ರಂಗಕ್ಕೆ ತನ್ನದೇ ಆದ ಮಹತ್ವವಿದೆ. ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಮೂಲಕ ಗ್ರಾಹಕರ ಹಿತ ಕಾಪಾಡಬೇಕು. ಪ್ರಾಮಾಣಿಕತೆ ಮತ್ತು ದಕ್ಷತೆ ಸಹಕಾರಿ ಬ್ಯಾಂಕುಗಳು ರೂಢಿಸಿಕೊಂಡಾಗ ಆರ್ಥಿಕವಾಗಿ ಬಲವರ್ಧನೆ ಹೊಂದಲು ಸಾಧ್ಯ ಎಂದು ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ನುಡಿದರು.ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಮಹಾರಾಷ್ಟ್ರದ ಜಯಸಿಂಗಪುರದ ಡಾ.ಅಪ್ಪಾಸಾಹೇಬ ಸಾ.ರೆ.ಪಾಟೀಲ ಉದಗಾಂವ ಸಹಕಾರಿ ಬ್ಯಾಂಕಿನ 19ನೇ ಅಥಣಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಇರಬಾರದು. ಸಹಕಾರಿ ಕ್ಷೇತ್ರವು ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದಾಗ ಮತ್ತಷ್ಟು ಬಲವರ್ಧನೆ ಹೊಂದಲು ಸಾಧ್ಯವಿದೆ. ಮಹಾರಾಷ್ಟ್ರದ ಜಯಸಿಂಗಪುರದಲ್ಲಿ ಆರಂಭಗೊಂಡ ಸಾ.ರೆ.ಪಾಟೀಲ ಅವರ ಸಹಕಾರಿ ಬ್ಯಾಂಕು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಸೇವೆ ಮಾಡುತ್ತಿದೆ. ಈಗಾಗಲೇ ವಿವಿಧಡೆ 18 ಶಾಖೆಗಳನ್ನು ಆರಂಭಿಸಿ ಇಂದು ಅಥಣಿ ಪಟ್ಟಣದಲ್ಲಿ 19ನೇ ಶಾಖೆ ತೆರೆಯುತ್ತಿರುವುದು ಸಂತಸದ ವಿಚಾರ. ಅಥಣಿ ನಾಗರಿಕರು, ರೈತರು ಮತ್ತು ಉದ್ಯಮಿಗಳು ಈ ಸಹಕಾರಿ ಬ್ಯಾಂಕಿನ ಸದು ಉಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಹಕಾರಿ ಸಂಘಕ್ಕೆ ಶತಮಾನಗಳ ಇತಿಹಾಸವಿದೆ. ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳು ಅನೇಕ ವರ್ಷಗಳವರೆಗೆ ಉತ್ತಮ ಸೇವೆ ಸಲ್ಲಿಸಿ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿವೆ. ಈ ನಿಟ್ಟಿನಲ್ಲಿ ಜಯಸಿಂಗಪುರದ ಸಾ.ರೆ.ಪಾಟೀಲ ಸಹಕಾರಿ ಬ್ಯಾಂಕಿನ ಅನೇಕ ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಬ್ಯಾಂಕ್, ಅಥಣಿಯಲ್ಲಿ ಆರಂಭವಾಗಿರುವುದು ಸಂತಸ ಮತ್ತು ಹೆಮ್ಮೆಯ ವಿಚಾರ. ಈ ಸಹಕಾರಿ ಬ್ಯಾಂಕಿನಿಂದ ಅನೇಕ ವ್ಯಾಪಾರಸ್ಥರಿಗೆ, ರೈತರಿಗೆ, ಉದ್ಯಮಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಶಿರೋಳದ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಗಣಪತರಾವ ಪಾಟೀಲ ಮಾತನಾಡಿ, ಈ ಸಹಕಾರಿ ಬ್ಯಾಂಕಿನ ಮೂಲಕ ಗ್ರಾಹಕರಿಗೆ ಉತ್ಕೃಷ್ಟ ಹಣಕಾಸು ಯೋಜನೆಗಳನ್ನು ಆರಂಭಿಸಲಾಗಿದ್ದು, ಆಕರ್ಷಕ ಠೇವಣಿ ಹಾಗೂ ಸಾಲ ನೀಡಿ ಆರ್ಥಿಕ ನೆರವು ಪಡೆದುಕೊಂಡು ತಮ್ಮ ಕನಸನ್ನ ನನಸು ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಹೇಂದ್ರ ಬಾಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಹಕಾರಿ ಬ್ಯಾಂಕು ತನ್ನ ಗ್ರಾಹಕರಿಗೆ ಠೇವಣಿ ಮೇಲೆ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ಮತ್ತು ಸಾಲದ ಮೇಲೂ ರಾಷ್ಟ್ರೀಕೃತ ಬ್ಯಾಂಕಿನoತೆಯೇ ಬಡ್ಡಿ ಆಕರಿಸಲಾಗುತ್ತಿದ್ದು, ಇದರ ಲಾಭವನ್ನು ಅಥಣಿಯ ಗ್ರಾಹಕರೂ ಪಡೆದುಕೊಳ್ಳಬೇಕು. ಕಾಗವಾಡದಲ್ಲಿ ಮತ್ತೊಂದು ಶಾಖೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕಾಗವಾಡ ಶಾಸಕ ರಾಜು ಕಾಗೆ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ, ಮುಖಂಡ ಸದಾಶಿವ ಬುಟಾಳೆ, ಸಂತೋಷ ಸಾವಡಕರ, ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೇಣಿಕ ಆದಿನಾಥ, ನಿರ್ದೇಶಕರಾದ ಮಹಾದೇವ ಪಾಟೀಲ, ಧರ್ಮರಾಜ ಹೊನ್ಮೋರ. ಮೇಘಾ ಪಾಟೀಲ, ಭೂಪಾಲ ಪಾಟೀಲ, ಅಪ್ಪಾಸೋ ನರುತೆ, ಮಹಾದೇವ ರಾಜಮನೆ, ಮಹೇಂದ್ರ ಬಾಗೆ, ಅಣ್ಣಾಸಾಹೇಬ ಪಾಟೀಲ, ಶ್ರೇಣಿಕ ಕುಡಚೆ, ಭೂಪಾಲ ಖಮ್ಕರ, ರಾಜೇಶ ಸಾಣಿಕೋಪ, ಶಿವಾಜಿ ಪೋಳ, ಅಶ್ರಫಾಲಿ ಪಟೇಲ, ರಮೇಶ ಪಾಟೀಲ, ಬಾಳಗೊಂಡ ಪಾಟೀಲ, ಶರದ್ ಗೋಧಾಡೆ, ನ್ಯಾಯವಾದಿ ಬಾಳಗೌಡ ಪಾಟೀಲ, ಪ್ರಕಾಶ ಪಾಟೀಲ, ಬಾಪುಸೋ ರಾಮು ಬೋರ್ಗವೆ, ವಿನಯ ಘೋರ್ಪಡೆ, ಅಸ್ಮಿತಾ ಪಾಟೀಲ, ಶಂಕರರಾವ ಮಂಗಳೇಕರ, ಸುನಿಲ ಮುಳೆ, ಜನಾರ್ಧನ್ ಬೋಟೆ, ವಿನಾಯಕ ಕದಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಖೆಯ ವ್ಯವಸ್ಥಾಪಕ ನಿತಿನ್ ಬಮ್ಮಣ್ಣವರ ಸ್ವಾಗತಿಸಿ, ವಂದಿಸಿದರು.

PREV