ಯಶಸ್ವಿನಿ ಯೋಜನೆ ಸದ್ಬಳಕೆಗೆ ಸಹಕಾರ ಸಂಘದ ಸಿಇಒ ಸಲಹೆ

KannadaprabhaNewsNetwork |  
Published : Mar 08, 2026, 01:30 AM IST
ಸೂಲಿಬೆಲೆ ವಿವಿದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಜನುಮ ದಿನದ ಪ್ರಯುಕ್ತವಾಗಿ ಜೇನುಗೂಡು ಟ್ರಸ್ಟ್ನಿಂದ ಶುಭಾಷಯ ಕೋರಿ ಸನ್ಮಾನಿಸಿದರು, ಚೌಡೇಗೌಡ, ಬೆಟ್ಟಹಳ್ಳಿ ಗೋಪಿನಾಥ್, ವೆಂಕಟೇಶ್, ಜಿಯಾವುಲ್ಲಾ, ಸೈಯದ್ ಮಹಬೂಬ್ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ವಿವಿಧೋದ್ದೇಶ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಯಶಸ್ವಿನಿ ವಿಮೆ ಯೋಜನೆ ಜಾರಿಯಾಗಿದ್ದು ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ವಸಂತಕುಮಾರ್ ಹೇಳಿದರು

ಸೂಲಿಬೆಲೆ: ವಿವಿಧೋದ್ದೇಶ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಯಶಸ್ವಿನಿ ವಿಮೆ ಯೋಜನೆ ಜಾರಿಯಾಗಿದ್ದು ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ವಸಂತಕುಮಾರ್ ಹೇಳಿದರು.

ಬ್ಯಾಂಕಿನ ಸಭಾಂಗಣದಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಜನ್ಮದಿನದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಂಘವು ೬೦೪೬ ಷೇರುದಾರರನ್ನು ಹೊಂದಿದ್ದು ಸಂಘದ ಅಧ್ಯಕ್ಷರಾದ ಬಿ.ವಿ.ಸತೀಶಗೌಡರ ಕಾಳಜಿಯಿಂದ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು ಕಳೆದ ಸಾಲಿನಲ್ಲಿ ೧ ಕೋಟಿ ಆಧಾಯ ಗಳಿಸಿತ್ತು, ಪಡಿತರ ವಿತರಣೆ, ಗೊಬ್ಬರ ವಿತರಣೆ ಮೂಲಕ ರೈತಾಪಿ ವರ್ಗಕ್ಕೆ ಹೆಚ್ಚಿನ ಸಹಕಾರ ನೀಡಿದ್ದು ಶಾಸಕ ಶರತ್ ಬಚ್ಚೇಗೌಡರ ಸಹಕಾರವು ದೊರತಿದೆ ಎಂದು ಹೇಳಿದರು.

ಯಶಸ್ವಿ ಯೋಜನೆಯ ನೋಂದಣಿಗೆ ಮಾರ್ಚ್ ೩೧ ಅವಕಾಶವಿದ್ದು ಪರಿಶಿಷ್ಟ ಜಾತಿ ಮತ್ತುಪಂಗಡದವರಿಗೆ ಉಚಿತವಾಗಿರುತ್ತದೆ. ಸಾಮಾನ್ಯ ವರ್ಗಕ್ಕೆ ೫೦೦ ರೂಗಳಾಗಿದ್ದು ಷೇರುದಾರರು ಶೀಘ್ರವಾಗಿ ವಿಮೆ ಮಾಡಿಸಿಕೊಳ್ಳಲು ಕೋರಿದ್ದಾರೆ.

ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ ಮಾತನಾಡಿ, ಬ್ಯಾಂಕಿನ ಸಿಇಒ ವಸಂತಕುಮಾರ್ ಸಾಮಾಜಿಕ ಕಾಳಜಿಯ ಮನೋಭಾವದವರಾಗಿದ್ದು ಅವರು ಸಂಘಸಂಸ್ಥೆಗಳಿಗೂ ಹೆಚ್ಚಿನ ಸಹಕಾರ ನೀಡುತ್ತಿದ್ದು ಜೇನುಗೂಡು ಟ್ರಸ್ಟಿನ ಏಳಿಗೆಗೆ ಸಹ ಅವರ ಸಹಕಾರವಿರುವುದು ಶ್ಲಾಘನೀಯ ವಿಚಾರ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಯ ನಿರ್ದೇಶಕ ಸೈಯದ್ ಮಹಬೂಬ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ಗ್ರಾಪಂ.ಸದಸ್ಯ ಜಿಯಾವುಲ್ಲಾ, ಆನಂದ್,ಜೇನುಗೂಡು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ನಿರ್ದೇಶಕ ಅತ್ತಿಬೆಲೆ ಮಂಜುನಾಥ್, ನಯಾಜ್ ಖಾನ್, ರವಿಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ