ಕನ್ನಡಪ್ರಭ ವಾರ್ತೆ ಮೈಸೂರು
ಜ್ಯೋತಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ತರಬೇತಿ ಶಾಲೆಯ 10ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಇರುವ ತಾಳ್ಮೆ, ಆತ್ಮಸ್ಥೈರ್ಯ, ಪ್ರೇರಣಾಶಕ್ತಿ ಯಾರಿಗೂ ಇಲ್ಲ. ನೀವು ಎಲ್ಲವನ್ನು ಮಾಡಬಹುದು. ಠಾಣೆಯ ಪ್ರತಿಯೊಂದು ವಿಭಾಗದಲ್ಲಿ ತೊಡಗಿಸಿಕೊಳ್ಳಿ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.10 ತಿಂಗಳ ಹಿಂದೆ ನೀವು ಏಕಾಂಗಿಯಾಗಿ ಬಂದು ಈಗ ಪೊಲೀಸ್ ಕುಟುಂಬ ಸೇರಿಕೊಂಡಿದ್ದೀರ. ಪೊಲೀಸ್ ಕಾನ್ಸ್ ಸ್ಟೇಬಲ್ ಗಳೇ ಇಲಾಖೆಗೆ ಬೆನ್ನೆಲುಬು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಹೆಮ್ಮೆ, ಘನತೆಯ ವಿಚಾರ. ಇಲ್ಲಿ ಪ್ರತಿದಿನ ಕಲಿಕೆ ಇರುತ್ತದೆ. ಈಗ ಮೊದಲಿನಂತೆ ಸಾಮಾನ್ಯ ಪ್ರಕರಣಗಳಿಲ್ಲ. ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಅದರ ಬಗ್ಗೆಯೂ ಅರಿತುಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಒಟ್ಟು 40 ಪ್ರಶಿಕ್ಷಣಾರ್ಥಿಗಳು ತರಬೇತಿ ಪೂರೈಸಿದ್ದು, ಬಿಇ, ಎಂ.ಕಾಂ, ಎಂಎಸ್ಸಿ, ಬಿಎ, ಬಿ.ಇಡಿ, ಡಿಪ್ಲೋಮಾ ಪದವಿ ಪೂರೈಸಿದ ತಲಾ ಒಬ್ಬರು, ಎಂಎ, ಬಿ.ಇಡಿ ಮಾಡಿದ ಇಬ್ಬರು, ಎಂಎ ಮಾಡಿದ ಮೂವರು, ಬಿಎಸ್ಸಿ ಮಾಡಿದ ನಾಲ್ವರು, ಬಿಕಾಂ ಪೂರೈಸಿದ 12, ಬಿಎ ಮಾಡಿದ 11, ಪಿಯುಸಿ ಪದವಿ ಪೂರೈಸಿದ ಮೂವರು ಕಾನ್ ಸ್ಟೇಬಲ್ ತರಬೇತಿ ಪೂರೈಸಿದರು.
----
ಭುವನೇಶ್ವರಿ ಅತ್ಯುತ್ತಮ್ಮ ಪ್ರಶಿಕ್ಷಣಾರ್ಥಿ
ಒಳಾಂಗಣ ವಿಭಾಗದಲ್ಲಿ ಬೆಂಗಳೂರು ನಗರದ ಮುತ್ತುರವ್ವಾ ಬಾಳಗೌಡ ಪಾಟೀಲ್ ಮತ್ತು ರುಕ್ಮಿಣಿ ಕೃಷ್ಣಪ್ಪ ಪಮ್ಮಾರ (ಪ್ರಥಮ), ಮಂಡ್ಯ ಜಿಲ್ಲೆಯ ಎಂ.ಎಸ್. ಅನುಷಾ (ದ್ವಿತೀಯ). ಹೊರಾಂಗಣ ವಿಭಾಗದಲ್ಲಿ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ (ಪ್ರಥಮ) ಮತ್ತು ಎಂ.ಎಸ್. ಅನುಷಾ (ದ್ವಿತೀಯ).