ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ನಿಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಐದು ವರ್ಷದ ಅವಧಿಗೆ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು.ನಿಯಮಾನುಸಾರ ಚುನಾವಣೆ ಮತ್ತು ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶಕ್ಕೆ ರಾಜ್ಯದ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಪ್ರಕಟಿಸದೇ ತಡೆ ಹಿಡಿಯಲಾಗಿದೆ. ನ್ಯಾಯಾಲಯದ ಅದೇಶದ ಮೇರೆಗೆ ಮುಂದಿನ ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಅಧಿಕಾರಿ ರಾಮಕೃಷ್ಣ ತಿಳಿಸಿದರು.
ಸಂಘದ ಹತ್ತು ಸ್ಥಾನಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧಿಕ ಮತ ನೀಡಿದ್ದು, ಅಭೂತಪೂರ್ವ ಬೆಂಬಲ ನೀಡಿದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ. ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಸಿ.ಜಗದೀಶ್ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಂಪಾಜಮ್ಮ, ಕೆ.ಎಸ್.ಕೆಂಪೇಗೌಡ, ಎಸ್.ಕೆ.ಜಯರಾಮೇಗೌಡ, ಎಸ್.ಕೆ. ತಿಮ್ಮರಾಜು, ನಾರಾಯಣ, ಎಚ್.ಎಲ್.ಬಸವರಾಜು, ಭಾಗ್ಯಮ್ಮ, ಮರಿಸ್ವಾಮಿ, ಎಚ್.ಸಿ.ರಮೇಶ್, ಎಸ್.ಎಂ.ಸುರೇಶ್ ಅವರು ಚುನಾವಣೆಯಲ್ಲಿ ಮೇಲುಗೈ ಪಡೆದಿದ್ದು, ಮುಂದಿನ ದಿನಗಳಲ್ಲಿ ಜಯ ನಮ್ಮದಾಗಲಿದೆ ಎಂದು ಮುಖಂಡರಾದ ಸರಗೂರು ಜಯಣ್ಣ ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಂತೂರು ಗೋಪಾಲ್, ಸರಗೂರು ಜಯಣ್ಣ, ಸಾಗ್ಯ ಕೆಂಪಯ್ಯ, ವೆಂಕಟರಾಮು, ದಿವ್ಯಕುಮಾರ್, ದೊರೆ, ಭೀಮೇಶ್, ನಾಗೇಶ್, ಸತೀಶ್, ಕುಮಾರ್, ಸೋಮ, ಲಿಂಗಪಟ್ಟಣ ಶಿವನಂಜು, ಸೇರಿದಂತೆ ಹಲವರು ಭಾಗವಹಿಸಿದ್ದರು.
ಇಂದು ವಿದ್ಯುತ್ ವ್ಯತ್ಯಯಮಳವಳ್ಳಿ:
ಉಪವಿಭಾಗ ವ್ಯಾಪ್ತಿಯ 66/11 ಕೆವಿ ಹೆಬ್ಬಣಿ ವಿದ್ಯುತ್ ವಿತರಣಾ ಕೇಂದ್ರದ ಎಫ್-2 ಮಂಚನಹಳ್ಳಿ 11 ಕೆವಿ ಕೇಂದ್ರದಲ್ಲಿ ಸೆ.9ರಂದು ಬೆಳಿಗ್ಗೆ 9ಗಂಟೆಯಿಂದ 5ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೇಂದ್ರ ವ್ಯಾಪ್ತಿಯ ಹೆಬ್ಬಣಿ, ಮಂಚನಹಳ್ಳಿ, ಮಂಚನಪುರ, ಕೂನನಪುರ, ಚಿಕ್ಕನದೊಡ್ಡಿ, ಚೊಟ್ಟನಹಳ್ಳಿ, ವಡ್ಡರಹಳ್ಳಿ, ಕೆಂಚನದೊಡ್ಡಿ, ನಾಗೇಗೌಡನದೊಡ್ಡಿ, ಅಣ್ಣೇಕೊಪ್ಪಲು, ಬೋಸೇಗೌಡನದೊಡ್ಡಿ, ಬಾಚನಹಳ್ಳಿ, ಪಂಡಿತಹಳ್ಳಿ, ದಾಸನದೊಡ್ಡಿ, ಹೊಸದೊಡ್ಡಿ, ಹೊಸದೊಡ್ಡಿ ಅಡ್ಡ ರಸ್ತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.