ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಭಗೀರಥ ಪೀಠದಲ್ಲಿ ಶನಿವಾರ ಸುದ್ದಿಗಾರರದೊಂದಿಗೆ ಮಾತನಾಡಿ, ಫೆ. 9 ರಂದು ಬೆಳಗ್ಗೆ 9 ಗಂಟೆಯಿಂದ ಭಜನಾ ಕಾರ್ಯಕ್ರಮ ಆರಂಭಿಸಲಾಗುವುದು. ಉಪ್ಪಾರಹಟ್ಟಿ ದೊಡ್ಡೇರಿ ಆಶ್ರಮದ ಮಲ್ಲಪ್ಪಾಜಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಉದ್ಘಾಟಿಸುವರು. ವಕೀಲ ಶಾಮಾನಂದ ಪೂಜಾರ್ ಭಜನಾ ತಂಡದ ನಿರ್ವಹಣೆ ಮಾಡುವರು. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಭಜನಾ ಕಾರ್ಯಕ್ರಮ ರಾತ್ರಿಯವರೆಗೂ ನಡೆಯಲಿದೆ. ಭಜನೆಯಲ್ಲಿ ಭಕ್ತಿಗೀತೆಗಳು, ದಾಸರ ಪದಗಳು, ಭಕ್ತಿಯ ಸೋಬಾನೆ ಪದಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಎಲ್ಲಾ ತಂಡದವರಿಗೂ ಪ್ರಶಸ್ತಿ ನೀಡಲಾಗುವುದು.
ಪ್ರಥಮ ಬಹುಮಾನ 1 ಲಕ್ಷ ರು. ದ್ವಿತೀಯ 80 ಸಾವಿರ ರು, ತೃತೀಯ 70 ಸಾವಿರ ರು. ಹಾಗೂ ಸಮಾಧಾನಕರ ಬಹುಮಾನ 9 ಸಾವಿರ ರು. ನೀಡಲಾಗುವುದು. ಉತ್ತಮ ಹಾಡುಗಾರಿರಿಗೆ, ಹಾರ್ಮೋನಿಯಂ ವಾದಕರಿಗೆ, ತಬಲ ವಾದಕರಿಗೆ, ಉತ್ತಮ ತಾಳ ವಾದಕರಿಗೆ, ಧಮಡಿ ವಾದಕರಿಗೆ, ಉತ್ತಮ ಡಗ್ಗಾ ವಾದಕರಿಗೆ ತಲಾ 3 ಸಾವಿರದಂತೆ ಇಬ್ಬರಿಗೆ ನೀಡಲಾಗುವುದು. ಸಮಾಜ ಸೇವಕರಿಗೆ, ಅಧಿಕಾರಿಗಳು ಸೇರಿದಂತೆ ಹಲವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಶ್ರೀಮಠಕ್ಕೆ ಬರುವ ಭಜನಾ ತಂಡದವರಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.ಫೆ.10 ರಂದು ಬೆಳಗ್ಗೆ 5 ಗಂಟೆಗೆ ಮಹಾ ಗಣಪತಿ, ಶಿವಲಿಂಗ, ಭಗೀರಥ ಮಹರ್ಷಿ, ಸೀತಾ ರಾಮಾಂಜನೇಸ್ವಾಮಿ, ಚೆನ್ನಕೇಶವ ಸ್ವಾಮಿ ಹಾಗೂ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಪಂಚಾಮೃತ, ರುದ್ರಾಭಿಷೇಕ, ಅಷ್ಟೋತ್ತರ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹೋಮ ಹವನಗಳು ನಡೆಯಲಿವೆ. ಪೀಠಾರೋಹಣ, ಕಿರೀಟಧಾರಣೆ ಕಾರ್ಯಕ್ರಮ ನಡೆಯಲಿದೆ.
30 ಜನರ ತಂಡದಿಂದ ಅತ್ಯಾಕರ್ಷಕ ಮಲ್ಲಕಂಬ ಪ್ರದರ್ಶನವಿರಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಮಠಾಧೀಶರ, ಜನಪ್ರತಿನಿಧಿಗಳು, ಉಪ್ಪಾರ ಸಮಾಜದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುವರು ಎಂದು ಸ್ವಾಮೀಜಿ ಹೇಳಿದರು.