ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ಪೂರಕ: ಡಾ.ಮೂಡಲಗಿರಿಯಯ್ಯ

KannadaprabhaNewsNetwork |  
Published : Feb 08, 2026, 01:15 AM IST
ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ಪೂರಕ : ಡಾ.ಮೂಡಲಗಿರಿಯ್ಯ | Kannada Prabha

ಸಾರಾಂಶ

ಚಿಕ್ಕಮಗಳೂರುವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ, ವ್ಯಕ್ತಿತ್ವ ವಿಕಸನ ಮತ್ತು ಗ್ರಾಮೀಣ ಜೀವನಶೈಲಿ ಬೆಳೆಸುವುದೇ ರಾಷ್ಟ್ರೀಯ ಸೇವಾ ಯೋಜನೆ. ನನಗಲ್ಲ, ನಿನಗೆ ಎಂಬ ತತ್ವದಡಿ ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಬೇಕು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮೂಡಲಗಿರಿಯ್ಯ ಕರೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ, ವ್ಯಕ್ತಿತ್ವ ವಿಕಸನ ಮತ್ತು ಗ್ರಾಮೀಣ ಜೀವನಶೈಲಿ ಬೆಳೆಸುವುದೇ ರಾಷ್ಟ್ರೀಯ ಸೇವಾ ಯೋಜನೆ. ನನಗಲ್ಲ, ನಿನಗೆ ಎಂಬ ತತ್ವದಡಿ ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಬೇಕು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮೂಡಲಗಿರಿಯಯ್ಯ ಕರೆ ನೀಡಿದರು.

ತಾಲೂಕಿನ ಹಿರೇಕೊಳಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಸಂಜೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯವರ ಸರ್ವೋದಯ ತತ್ವದ ನೆಲೆಯಲ್ಲಿ ಸ್ಥಾಪನೆಯಾದ ಎನ್‌ಎಸ್‌ಎಸ್ ಒಂದು ದೂರ ದೃಷ್ಟಿ ಯೋಜನೆ. ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮ, ಸೇವಾ ಮನೋಭಾವನೆ ಶಿಸ್ತು, ಸಂಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತನ್ನ ಕೈಲಾದಷ್ಟು ಸಮಾಜದ ಬಡಜನರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ಸೇವೆ ಸಲ್ಲಿಸುವುದೇ ಧ್ಯೇಯ ಎಂದರು.ತರಬೇತಿ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದಲ್ಲಿ ಶ್ರಮದಾನ, ಯೋಗ-ಧ್ಯಾನ, ಆರೋಗ್ಯ ಮತ್ತು ಪರಿಸರ ಅರಣ್ಯ ಸಂರಕ್ಷಣೆ, ಶಾಲೆ ಮತ್ತು ದೇವಸ್ಥಾನದ ಆವರಣದ ಸ್ವಚ್ಛತೆ, ಪ್ಲಾಸ್ಟಿಕ ನಿಷೇಧ ಕುರಿತು ಅರಿವು, ರಂಗ ಚಟುವಟಿಕೆ, ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಹಾಗೂ ಜಾನಪದ ಕಲಾಮೇಳ ಪ್ರದರ್ಶನ ನೀಡಲಾಗುತ್ತಿದೆ ಎಂದರು.ಕರಕುಶಲ ಮತ್ತು ಕೌಶಲ್ಯ ತರಬೇತಿ, ಪರಿಸ್ಥಿತಿ ಮತ್ತು ನಾಯಕತ್ವ ನಿರ್ವಹಣೆ ಹಾಗೂ ಏಡ್ಸ್ ಮತ್ತು ಹೃದಯಘಾತದ ಬಗ್ಗೆ ಗ್ರಾಮೀಣ ನಿವಾಸಿಗಳಲ್ಲಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಂದಿನಿಂದ ಫೆ.೧೨ ರವರೆಗೆ ಒಟ್ಟು ಆರು ದಿನಗಳ ಕಾಲ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಬದುಕಿನ ಪದ್ಧತಿ, ಜೀವನದ ಅನುಭವ ಪರಿಚಯಿ ಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರೇಕೊಳಲೆ ಗ್ರಾಪಂ ಅಧ್ಯಕ್ಷೆ ಎಚ್. ಆರ್.ಕವಿತಾ ಮಲೆನಾಡು ಜನರ ಬದುಕನ್ನು ಸ್ವವಿವರವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲು ಈ ಕಾರ್ಯಕ್ರಮ ವಿಶೇಷವಾಗಿದೆ. ಇದು ಸ್ಥಳಿಯ ನಿವಾಸಿಗಳ ಜೀವನದ ಕ್ರಮ ಪರಿಚಯಿಸುವ ಜೊತೆಗೆ ಸಾಮಾಜಿಕ ಕಳಕಳಿ ಗುಣ ಬಾಲ್ಯದಿಂದಲೇ ಮೈಗೂಡಿಸಿ ಕೊಳ್ಳಬಹುದು ಎಂದರು. ಹಿರೇಕೊಳಲೆ ಸರ್ಕಾರಿ ಶಾಲಾಭಿವೃದ್ಧಿ ಅಧ್ಯಕ್ಷ ಸತೀಶ್, ಕಾಲೇಜು ಸಹ ಪ್ರಾಧ್ಯಾಪಕ ಎ.ಸಿ.ಪುಟ್ಟಸ್ವಾಮಿ, ಪತ್ರಾಂಕಿ ವ್ಯವಸ್ಥಾಪಕಿ ಸಿ.ಎನ್.ಹೇಮಾಮಾಲಿನಿ, ಹಿರೇಕೊಳಲೆ ಸರ್ಕಾರಿ ಮುಖ್ಯ ಶಿಕ್ಷಕ ಅಣ್ಣಾನಾಯ್ಕ, ಸಹಾಯಕ ಪ್ರಾಧ್ಯಾಪಕ ದೀಕ್ಷಿತ್‌ಕುಮಾರ್, ಉಪನ್ಯಾಸಕ ಎ.ಡಿ.ಪ್ರಶಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. --

ಸಿಕೆಎಂ.1

ಚಿಕ್ಕಮಗಳೂರುಪ ಸಮೀಪದ ಹಿರೇಕೊಳಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ಧ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮೂಡಲಗಿರಿಯಯ್ಯ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು