ಉತ್ತರಾದಿ ಮಠದಲ್ಲಿ ರಾಯರ ಪಟ್ಟಾಭಿಷೇಕ ಮಹೋತ್ಸವ

KannadaprabhaNewsNetwork |  
Published : Feb 21, 2026, 01:45 AM IST
20ಎಚ್ಎಸ್ಎನ್7 : ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀಗಳ ವರ್ಧಂತೋತ್ಸವ ಪ್ರಾರಂಭದ ಪೂಜೆ ಪ್ರಾರಂಭವಾಯಿತು.  | Kannada Prabha

ಸಾರಾಂಶ

ರಾಮನಾಥಪುರದ ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾದಿಗಳು, ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು. ಶ್ರೀಸ್ಬಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಅಲ್ಲದೇ ಬೃಂದಾವನಕ್ಕೆ ವಿಶೇಷ ಹಾಗೂ ಮನಮೋಹಕ ಹೂವಿನ ಅಲಂಕಾರ ಭಕ್ತರ ಮನ ಸೆಳೆಯಿತು. ಬೆಳಿಗ್ಗೆಯಿಂದಲೇ ಭಕ್ತರು ಶ್ರೀಮಠಕ್ಕೆ ಅಗಮಿಸಿ ಭಕ್ತಿಭಾವದಿಂದ, ಆರತಿ ದೀಪ ಬೆಳಗಿಸಿ ಗುರುರಾಯರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಉತ್ತರಾದಿ ಮಠದಲ್ಲಿ ಶ್ರೀಗುರು ರಾಘವೇಂದ್ರಸ್ವಾಮಿಗಳವರ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಕಾವೇರಿ ನದಿದಂಡೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕೈಂಕರ್ಯ, ಉತ್ಸವಾದಿಗಳು ಪ್ರಾರಂಭವಾದವು.

ರಾಮನಾಥಪುರದ ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾದಿಗಳು, ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು. ಶ್ರೀಸ್ಬಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಅಲ್ಲದೇ ಬೃಂದಾವನಕ್ಕೆ ವಿಶೇಷ ಹಾಗೂ ಮನಮೋಹಕ ಹೂವಿನ ಅಲಂಕಾರ ಭಕ್ತರ ಮನ ಸೆಳೆಯಿತು. ಬೆಳಿಗ್ಗೆಯಿಂದಲೇ ಭಕ್ತರು ಶ್ರೀಮಠಕ್ಕೆ ಅಗಮಿಸಿ ಭಕ್ತಿಭಾವದಿಂದ, ಆರತಿ ದೀಪ ಬೆಳಗಿಸಿ ಗುರುರಾಯರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಇಲ್ಲಿಯ ಶ್ರೀ ರಾಘವೇಂದ್ರಸ್ವಾಮಿ ಉತ್ತರಾದಿ ಮಠದಲ್ಲಿ ಶ್ರೀ ರಾಘವೇಂದ್ರ ವೈಭವೋತ್ಸವ, ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ, ಶ್ರೀ ರಾಘವೇಂದ್ರಸ್ವಾಮಿಗಳ ವರ್ಧಂತ್ಯುತ್ಸವ ಕಾರ್ಯಕ್ರಮಗಳು, 5 ದಿನಗಳು ಶ್ರೀಸೀತಾರಾಮಾಂಜನೇಯ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಸಾಯಂಕಾಲ ರಥೋತ್ಸವ ಮಹಾಮಂಗಳಾರತಿ ನಡೆಯುತ್ತಿದ್ದು, ಪ್ರತಿನಿತ್ಯ ಎಲ್ಲ ಭಕ್ತರು ಪಾಲ್ಗೊಂಡು ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವೇ. ಕನಕಾಚಾರ್ಯರು ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಂತರ ಚಿರತೆ ಹಾವಳಿ: ರೈತರಲ್ಲಿ ತಪ್ಪದ ಭೀತಿ
ಸಾಮಾಜಿಕ ನ್ಯಾಯದ ಪ್ರತಿಪಾದಕ ಕವಿ ಸರ್ವಜ್ಞ: ಸಿ.ಎಸ್.ಚಂದ್ರಭೂಪಾಲ