ಕೆಲಸದ ಸ್ಥಳದಲ್ಲಿ ಮಹಿಳೆಯರ ರಕ್ಷಣೆ ಅಗತ್ಯ: ನ್ಯಾ. ಸಂತೋಷ್

KannadaprabhaNewsNetwork |  
Published : Feb 21, 2026, 01:45 AM IST
ಪೊಟೋ: 20ಎಸ್‌ಎಂಜಿಕೆಪಿ06ಶಿವಮೊಗ್ಗದ ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಲಸದ ಸ್ಥಳದಲ್ಲಿ ಉಂಟಾಗುವ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆ- 2013 ಅರಿವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಪ್ರಾಧಿಕಾರದ ಪದನಿಮಿತ್ತ ಕಾರ್ಯದರ್ಶಿ ಮತ್ತು ಹಿರಿಯ ನ್ಯಾಯದೀಶರಾದ ಸಂತೋಷ ಉದ್ಘಾಟಿಸಿದರು. | Kannada Prabha

ಸಾರಾಂಶ

ಒತ್ತಡದ ಬದುಕಿನಲ್ಲಿ ಮಹಿಳೆಯರು ದುಡಿಯುವುದು ಅಗತ್ಯವಾಗಿದೆ. ಆದರೆ ಮಹಿಳೆಯರು ದುಡಿಯುವ ಸ್ಥಳದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ರಕ್ಷಣೆ ಅಗತ್ಯ. ಆದ್ದರಿಂದ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆ 2013 ಅನುಕೂಲವಾಗಿದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಪದನಿಮಿತ್ತ ಕಾರ್ಯದರ್ಶಿ ಮತ್ತು ಹಿರಿಯ ನ್ಯಾಯಾದೀಶರಾದ ಸಂತೋಷ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒತ್ತಡದ ಬದುಕಿನಲ್ಲಿ ಮಹಿಳೆಯರು ದುಡಿಯುವುದು ಅಗತ್ಯವಾಗಿದೆ. ಆದರೆ ಮಹಿಳೆಯರು ದುಡಿಯುವ ಸ್ಥಳದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ರಕ್ಷಣೆ ಅಗತ್ಯ. ಆದ್ದರಿಂದ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆ 2013 ಅನುಕೂಲವಾಗಿದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಪದನಿಮಿತ್ತ ಕಾರ್ಯದರ್ಶಿ ಮತ್ತು ಹಿರಿಯ ನ್ಯಾಯಾದೀಶರಾದ ಸಂತೋಷ ಹೇಳಿದರು.

ಇಲ್ಲಿನ ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಲಸದ ಸ್ಥಳದಲ್ಲಿ ಉಂಟಾಗುವ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆ- 2013 ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಕಾಯ್ದೆ ಪ್ರಕಾರ ಮಹಿಳೆ ಎಲ್ಲೇ ಕೆಲಸಮಾಡಲಿ, ಅಲ್ಲಿ ದೌರ್ಜನ್ಯ ಆಗಬಾರದು. ದೈಹಿಕವಾಗಿ, ಮಾನಸಿಕವಾಗಿ, ಸನ್ನೆ ಮೂಲಕವಾಗಿ, ಭಾಷೆಯ ಬಳಕೆ ಮೂಲಕ ದೌರ್ಜನ್ಯಗಳು ನಡೆಯಬಾರದು ಎಂದರು.

ಈ ಕಾಯ್ದೆ ಗಂಡ ಹೆಂಡತಿ ವಿಚಾರಗಳಲ್ಲಿ, ಮನೆಯ ವರ್ಕಿಂಗ್ ಪ್ಲೇಸ್ ಆಗುವುದಿಲ್ಲ. ಆದರೆ , ಮನೆಕೆಲಸಕ್ಕೆ ಬರುವ ಕೆಲಸದಾಳುವಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಯುವ ದೃಷ್ಟಿಯಿಂದ ಒಂದು ಆಂತರಿಕ ಕಮಿಟಿ ರಚನೆಯಾಗಬೇಕು.‌ ಏನೇ ದೂರುಗಳಿದ್ದರೂ ಈ ಕಮಿಟಿಗೆ ನೀಡಬೇಕು. ಆದರೆ ಮನೆಕೆಲಸದಾಳು ದೂರು ಕೊಡುವುದು ಸ್ಥಳೀಯ ಕಮಿಟಿಗೆ ನೀಡಬೇಕಾಗುತ್ತದೆ. ಯಾರಿಗೆ ತೊಂದರೆ ಆಗಿದೆಯೊ ಅವರೇ ದೂರನ್ನು ಕೊಡಬೇಕು. ಘಟನೆ ನಡೆದು ಮೂರು ತಿಂಗಳ ಒಳಗೆ ನೀಡಬೇಕು. ಆದರೆ, ದೈಹಿಕ ಮತ್ತು ಮಾನಸಿಕವಾಗಿ ನ್ಯೂನತೆ ಹೊಂದಿದ್ದರೆ ಅವರ ಪರವಾಗಿ ಬೇರೆಯವರು ನೀಡಬಹುದು. ದೂರು ಸತ್ಯವಾದರೆ ಕಠಿಣ ಶಿಕ್ಷೆ ಇದೆ. ಒಂದೊಮ್ಮೆ ಸುಳ್ಳು ದೂರು ನೀಡಿದ್ದರೆ ಅವರಿಗೂ ಕಠಿಣ ಶಿಕ್ಷೆಗೆ ಈ ಕಾನೂನಿನಲ್ಲಿ ಅವಕಾಶ ಇದೆ ಎಂದರು.

ಐ.ಕ್ಯೂ.ಎ.ಸಿ ಸಂಚಾಲಕರಾದ ವಿದ್ಯಾ ಮರಿಯ ಜೋಸೆಫ್ ಮಾತನಾಡಿ, ಈ ಕಾಯ್ದೆ ಅತ್ಯಂತ ಮುಖ್ಯವಾದುದು. ಕೆಲಸದ ಸ್ಥಳದಲ್ಲಿ ಉಂಟಾಗುವ ಸಮಸ್ಯೆ ಮತ್ತು ಅದರ ಪರಿಹಾರ ತುಂಬಾ ಸವಾಲಿನದಾಗಿದೆ. ಮನುಷ್ಯತ್ವ ಮತ್ತು ಮಾನವೀಯತೆಯಗಳು ಈ ಹೊತ್ತಿಗೆ ಮುಖ್ಯವಾಗಿದೆ. ಕೆಲಸದಲ್ಲಿ ಮುಕ್ತತೆ ಮತ್ತು ಸೌಹಾರ್ದತೆ ಬಹಳ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಸ್‌. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ಎಂ.ವಿ.ವೀಣಾ ಸ್ವಾಗತಿಸಿ, ಕೆ.ಪಿ.ಪವಿತ್ರ ನಿರೂಪಿಸಿ, ರಾಜೇಶ್ವರಿ ಎನ್.ಟಿ ಪ್ರಾರ್ಥಿಸಿ, ಕೃಪಾ ವಿಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಂತರ ಚಿರತೆ ಹಾವಳಿ: ರೈತರಲ್ಲಿ ತಪ್ಪದ ಭೀತಿ
ಸಾಮಾಜಿಕ ನ್ಯಾಯದ ಪ್ರತಿಪಾದಕ ಕವಿ ಸರ್ವಜ್ಞ: ಸಿ.ಎಸ್.ಚಂದ್ರಭೂಪಾಲ