ಪಟ್ಟಣದ ಪ್ರವಾಸಿಮಂದಿರದಲ್ಲಿ ಪುರಸಭೆ ಮಾಜಿ ಸದಸ್ಯ ಸೈಯಾದ್ ಯಾಸೀನ್
ಸತತವಾಗಿ ನಾಲ್ಕು ಭಾರಿ ಪುರಸಭೆ ಅಧ್ಯಕ್ಷ ಗಾದಿ ಅಲಂಕರಿಸಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಮುಖಂಡ ಭಂಡಾರಿ ಶ್ರೀನಿವಾಸ್ ಅವರಿಗೆ ರಾಜ್ಯ ಸರಕಾರ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಸೈಯಾದ್ ಯಾಸೀನ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿ ಕೆ.ಎಸ್. ಆನಂದ್ ರವರ ಗೆಲುವಿಗೆ ಅಹರ್ನಿಶಿ ದುಡಿದ ಭಂಡಾರಿ ಶ್ರೀನಿವಾಸ್ ಅವರಿಗೆ ಸರ್ಕಾರದ ಯಾವುದಾದರೂ ಒಂದು ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.1994ರಲ್ಲಿ ಅಂದಿನ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರಿಗೆ ಆಹಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಬಿಟ್ಟರೆ ಈವರೆಗೆ ಯಾರಿಗೂ ಮರು ಅವಕಾಶ ಸಿಕ್ಕಿಲ್ಲ. ಅಧಿಕಾರ ಮತ್ತು ಅವಕಾಶಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯಕರ್ತರಿಗೆ ಪಕ್ಷದ ಹೈಕಮಾಂಡ್ ನಿರ್ಧರಿಸಿರುವುದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರಿಗೆ ಉತ್ತೇಜಿಸಲು ಸಹಕಾರಿ ಎಂದರು.
ಕೆ.ಎಚ್. ಶಂಕರ್ ಮಾತನಾಡಿ, ಕಡೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೂ ಸಚಿವ ಸ್ಥಾನ ಕಂಡಿಲ್ಲ. ಯುವ ಕಾಂಗ್ರೆಸ್ ನಿಂದ ಗುರ್ತಿಸಿಕೊಂಡು ಅವಧಿಯಲ್ಲೇ ಶಾಸಕರಾಗಿ ಆಯ್ಕೆಯಾಗಿ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕ ಆನಂದ್ ಗೆ ಸಂಪುಟದಲ್ಲಿ ಸ್ಥಾನ ದೊರಕುವ ಆಶಾಭಾವನೆ ವ್ಯಕ್ತವಾಗಿರುವುದು ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ. ಭಂಡಾರಿ ಶ್ರೀನಿವಾಸ್ ಸ್ಥಾನ ಲಭಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ವರದಾನ ಎಂದರು.