ಧಾರವಾಡ: ನಗರದ ಕಾಸ್ಮಸ್ ಕ್ಲಬ್‌ನಿಂದ ತರಬೇತಿ ಹೊಂದಿದ ಹಲವಾರು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುವುದು ಹೆಮ್ಮೆಯ ವಿಷಯ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ್ ಹೇಳಿದರು.
ಈ ಕ್ಲಬ್ ಅತ್ಯಂತ ಸುವ್ಯವಸ್ಥಿತ ಹಾಗೂ ಕ್ರೀಡಾ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಕ್ರೀಡಾ ವಲಯದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವುದು ಧಾರವಾಡದ ಹೆಮ್ಮೆ ಎಂದರು.
ಅತ್ಯಂತ ಹಿರಿಯ ಸಂಸ್ಥೆಯಾಗಿರುವ ಕಾಸ್ಮಸ್ ಕ್ಲಬ್ ಬೆಳವಣಿಗೆ ಮಾದರಿಯಾಗಿದೆ. ಕ್ಲಬ್ ಕಟ್ಟಿ ಬೆಳೆಸಿದ ಹಿರಿಯರನ್ನು ಭೇಟಿಯಾಗಿರುವುದು ಸಂತಸ ತಂದಿದೆ ಎಂದರು.ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿರುವ ಕಾಸ್ಮಸ್ ಕ್ಲಬ್ ಕನ್ನಡದ ಕಾರ್ಯಕ್ರಮಗಳಿಗೂ ಆದ್ಯತೆ ನೀಡುವಂತಾಗಬೇಕು. ಕನ್ನಡ ಭಾಷೆಯ ಅಭಿವೃದ್ಧಿಗೆ, ಬೆಳವಣಿಗೆಗೂ ಕ್ಲಬ್ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಲಬ್ ಅಧ್ಯಕ್ಷ ನಿತೀನ್ ಟಗರಪುರ, ಡಿಸಿಪಿ ರವೀಶ್ ಅವರ ಸಲಹೆಯಂತೆ ಕ್ಲಬ್ ಮುಂದಿನ ದಿನಗಳಲ್ಲಿ ಇಂತಹ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಭರವಸೆ ನೀಡಿದರು.
ಕಾರ್ಯದರ್ಶಿ ಎ.ಎಸ್.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಎಸ್.ಎಂ.ರುದ್ರಸ್ವಾಮಿ ವಂದಿಸಿದರು.
ಅಂಡರ್ 19 ಬಾಯ್ಸ್
ಸೆಮಿಫೈನಲ್‌ನಲ್ಲಿ ವರುಣ್ ಬಿ. ಕಶ್ಯಪ್ ಅವರು, ಆರ್ಯ ಎ. ಜೈನ್ ಅವರನ್ನು 16-18, 11-7, 4-11, 11-8, 12-10 ಅಂಕಗಳಿಂದ ಹಾಗೂ ಆರ್ಣವ್ ಎನ್. ಅವರು ಹೃಷಿಕೇಶ ಎ.ಆರ್, ಶೆಟ್ಳೂರ್ ಅವರನ್ನು 9-11, 11-8, 11-9, 11-8 ಅಂಕಗಳಿಂದ ಸೋಲಿಸಿದ್ದರು.
ಫೈನಲ್ ಪಂದ್ಯದಲ್ಲಿ ಸಂಜಯ್ ಮಧವನ್ ಅವರು, ಯಶವಂತ್ ಪಿ ಅವರನ್ನು 11-4, 11-9, 6-11, 11-6, 11-9 ಅಂಕಗಳಿಂದ ಪರಾಭವಗೊಳಿಸಿದರು.
ವುಮೆನ್ಸ್ ಸಿಂಗಲ್ಸ್
ಫೈನಲ್ ಪಂದ್ಯದಲ್ಲಿ ಸಹನಾ ಎಚ್. ಮೂರ್ತಿ ಅವರು ವೇದಾಲಕ್ಷ್ಮಿ ಡಿ.ಕೆ. ಅವರನ್ನು 4-11, 4-11, 12-10, 11-6, 11-6, 5-11, 11-4 ಅಂಕಗಳಿಂದ ಸೋಲಿಸಿ, ಪ್ರಶಸ್ತಿಗೆ ಭಾಜನರಾದರು.ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ವೇದಾಲಕ್ಷ್ಮಿ ಡಿ.ಕೆ. ಅವರು ತೃಪ್ತಿ ಪುರೋಹಿತ್ ಅವರನ್ನು 11-7, 11-9, 11-5, 3-11, 3-11, 11-8 ಅಂಕಗಳಿಂದ ಹಾಗೂ ಸಹನಾ ಎಚ್. ಮೂರ್ತಿ ಅವರು ಕಾರುಣಾ ಜಿ. ಅವರನ್ನು 11-4, 11-5, 11-8, 10-12, 11-6 ಅಂಕಗಳಿಂದ ಸೋಲಿಸಿದ್ದರು.