ಪ್ರಕಾಶ ಗುದ್ನೇಪ್ಪನವರ
ವಾಣಿಜ್ಯ ಬೆಳೆ, ಬಿಳಿ ಬಂಗಾರವೆಂದು ಖ್ಯಾತಿ ಪಡೆದಿರುವ ಹತ್ತಿ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಆರಂಭದ ಅವಶ್ಯವಾಗಿದೆ. ಅತೀವೃಷ್ಟಿಯಿಂದ ಸಂಕಷ್ಟದಲ್ಲಿರುವ ಅನ್ನದಾತರ ಅಳಿದುಳಿದ ಹತ್ತಿ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆಸರೆಯಾಗಬಹುದು ಎಂಬುದು ಮಹದಾಸೆ.
2025 -26 ನೇ ಸಾಲಿನ ಪ್ರಸಕ್ತ ಪೂರ್ವ ಮುಂಗಾರು ಹಾಗೂ ಮುಂಗಾರು ಬೆಳೆಗಳು ವರುಣಾರ್ಭಟಕ್ಕೆ ಸಿಕ್ಕು ನಲುಗಿ ಹೋಗಿವೆ. ಹೆಚ್ಚಿನ ತೇವಾಂಶದಿಂದ ಸಂಪೂರ್ಣ ನಾಶಡ್ಗಿದೆ. ಅಳಿದುಳಿದ ಹತ್ತಿ ಬೆಳೆಯು ಇಳುವರಿಯಲ್ಲಿ ಕುಂಠಿತಗೊಂಡಿದ್ದು, ರೈತರನ್ನು ಮತ್ತಷ್ಟೂ ಸಂಕಷ್ಟಕ್ಕೆ ತಳ್ಳಿದಂತಾಗಿದೆ.ಇತ್ತ, ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಕೊರತೆಯೂ ಎದ್ದು ಕಾಣುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದುಡಿಯುವ ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದ್ದು, ಪರಸ್ಥಳದ ಕಾರ್ಮಿಕರ ಮೊರೆ ಹೋಗಿ ಹೆಚ್ಚಿನ ವೇತನ ನೀಡುವ ಅನಿವಾರ್ಯತೆ ಎದುರಾಗಿದೆ. 1 ಕೆಜಿ ಹತ್ತಿ ಬಿಡಿಸಲು 8 ರಿಂದ ಹತ್ತು ರು.ಗಳ ಕೇಳುವ ಕೂಲಿಯವರಿಗೆ ಬೆಳೆದ ಬೆಳೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ನೀಡಬೇಕಾದ ಅನಿವಾರ್ಯತೆ ರೈತರಿಗೆ ಬಂದೊದಗಿದಂತಾಗಿದೆ. ಇಂತಹದರಲ್ಲಿ ದೇವರು ವರ ನೀಡಿದರೂ ಪೂಜಾರಿ ನೀಡಲಿಲ್ಲ ಎಂಬಂತಾಗಿದೆ. ಇಷ್ಟೆಲ್ಲ ಸಂಕಷ್ಟದಲ್ಲಿರುವ ಅನ್ನದಾತರಿಗೆ ಅತೀ ಶೀಘ್ರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಆರಂಭವಾಗಬೇಕಾಗಿದೆ.
ಆದರೆ, ರೈತರು ತಮ್ಮ ಮುಂದಿನ ಬೆಳೆ ಬಿತ್ತನೆ ಕಾರ್ಯ ಮಾಡಲು ಹಾಗೂ ಕೂಲಿಯವರ ವೇತನ ನೀಡುವ ಸಲುವಾಗಿ ಖಾಸಗಿ ಖರೀದಿದಾರರಿಗೆ ಕಡಿಮೆ ಬೆಲೆಗೆ ಮಾರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಖರೀದಿದಾರರು ಕಡಿಮೆ ಬೆಲೆಗೆ ಕೊಂಡುಕೊಂಡು ಬೆಂಬಲ ಬೆಲೆಗೆ ಮಾರುವ ಉದಾಹರಣೆಗಳು ಕಾಣಸಿಗುತ್ತವೆ.
ಕಿರಣ್ ಪುರೋಹಿತ, ಖರೀದಿ ಅಧಿಕಾರಿ, ಭಾರತೀಯ ಹತ್ತಿ ನಿಗಮ ನಿಯಮಿತ, ಶಹಾಪುರ.
ಸುಮಂಗಲಾ ಹೂಗಾರ ಕಾರ್ಯದರ್ಶಿ, ಎಪಿಎಂಸಿ, ಶಹಾಪುರ.
ಅಶೋಕರಾವ್ ಮಲ್ಲಾಬಾದಿ ಕಾರ್ಯದರ್ಶಿ, ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ, ಶಹಾಪುರ.