ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಪತ್ನಿ ಜೀವನಾಂಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ೫ ಪ್ರಕರಣಗಳಲ್ಲಿ ದಂಪತಿಗಳು ವೈಮನಸ್ಸು ಮರೆತು ಒಂದಾದರು. ಇರಸವಾಡಿ ಗ್ರಾಮದ ಮಹೇಶ್ ಅವರ ಪತ್ನಿ ಮಮತಾ ಕೌಟುಂಬಿಕ ಕಲಹದಿಂದ ಬೇಸತ್ತು ತವರು ಮನೆಯಲ್ಲಿ ವಾಸಮಾಡುತ್ತಿದ್ದರು. ತಾವೇ ವೈಮನಸ್ಸು ಮರೆತು, ಪರಸ್ವರ ಹಾರ ಬದಲಾಯಿಸುವ ಮೂಲಕ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.
ಇದೇ ಸಂದರ್ಭದಲ್ಲಿ ಜೀವನಾಂಶ ಕೋರಿದ್ದ ಮೈಸೂರಿನ ದಂಪತಿಗಳಿಬ್ಬರು, ಪರಸ್ಪರ ಒಂದಾದರು, ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಇಬ್ಬರಿಗೂ ಸಿಹಿ ತಿನ್ನಿಸಿ ಮುಂದಿನ ದಿನಗಳಲ್ಲಿ ಅನೂನ್ಯತೆಯಿಂದ ಜೀವನ ನಡೆಸಬೇಕು ಎಂದು ಹಾರೈಸಿದರುನಗರದ ಹಿರಿಯಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಭೇಟಿನೀಡಿದ್ದ ಕಕ್ಷಿದಾರರು ಪರಸ್ಪರ ರಾಜಿ ಸಂಧಾನದ ಮೂಲಕ ಹಲವಾರುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕರಣ ಇತ್ಯರ್ಥಪಡಿಸಿಕೊಂಡರು.
ಒಂದು ಪ್ರಕರಣದಲ್ಲಿ ಗಂಡ ಹೆಂಡತಿಗೆ ಮೂವರು ಮಕ್ಕಳಿದ್ದು, ಈ ಪೈಕಿ ಹೆಂಡತಿ ಮರಣಹೊಂದಿದ್ದು, ಗಂಡ ಮತ್ತು ಮಕ್ಕಳಿಗೆ ರಾಜಿಸಂಧಾನದ ಮೂಲಕ ೧೬.೯೫ ಲಕ್ಷ ರು. ಪರಿಹಾರ ಕೊಡಿಸಲಾಗಿದೆ. ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಮೂವರು ಸಹೋದರಿಯರು ರಾಜಿಸಂಧಾನದ ಮೂಲಕ ಸಮಾನವಾಗಿ ಆಸ್ತಿ ಹಂಚಿಕೊಂಡಿರುವ ಪ್ರಕರಣ ಇತ್ಯರ್ಥವಾಗಿದೆ.೨೫ ವರ್ಷಗಳ ಹಿಂದಿನಿಂದಲೂ ಬಗೆಹರಿಯದೇ ಉಳಿದಿದ್ದ ಭೂಸ್ವಾಧೀನ ಪ್ರಕರಣವೊಂದು ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ ಬಗೆಹರಿದಿದ್ದು, ಅರ್ಜಿದಾರರಿಗೆ ೬೬, ೮೪೦೪ ಲಕ್ಷ ರು.ಗಳನ್ನು ಭೂಸ್ವಾಧೀನದಾರರಿಂದ ಪಾವತಿ ಮಾಡಿಸಲಾಗಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಪ್ರಭಾವತಿ ಮಾತನಾಡಿ, ಇಂದು ನಡೆದ ಲೋಕ ಅದಾಲತ್‌ನಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಗಳು ವೈಮನಸ್ಸು ಮರೆತು ಒಂದಾಗಿದ್ದಾರೆ. ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟ ಹಲವಾರು ಅರ್ಜಿಗಳು ಇತ್ಯರ್ಥವಾಗಿವೆ. ರಾಜಿಸಂಧಾನ ಮಾಡಿಕೊಳ್ಳುವುದರಿಂದ ಕಕ್ಷಿದಾರರಿಗೆ ಸಮಯದ ಜತೆ ಹಣವು ಉಳಿತಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯಸಿವಿಲ್ ನ್ಯಾಯಾಧೀಶರಾದ ಕೆ,ಈಶ್ವರ್, ವಕೀಲರು ಹಾಜರಿದ್ದರು.೧೩ಸಿಎಚ್‌ಎನ್೩
ಚಾಮರಾಜನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಪತಿ- ಪತ್ನಿ ಇಬ್ಬರು ಹಳೆ ವೈಷಮ್ಯ ಮರೆತು ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.