ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿಯಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಹಾಗೂ ಚಿಕ್ಕೋಡಿ ವಕೀಲರ ಸಂಘಗಳ ಸಹಯೋಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣ, ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಭಾರತೀಯ ಸಂವಿಧಾನ ಸಮಿತಿಯ ಅಧ್ಯಕ್ಷರಾದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನ ಸಭೆಗೆ ಭಾರತ ಸಂವಿಧಾನವನ್ನು ಹಸ್ತಾಂತರಿಸುತ್ತಿರುವ ಗೋಡೆಯ ಬಿತ್ತಿ ಚಿತ್ರ ಅನಾವರಣಗೊಳಿಸಿ ಮಾತನಾಡಿದರು. ಸಂವಿಧಾನದ ಮೂಲ ಉದ್ದೇಶ ನೊಂದವರಿಗೆ ನ್ಯಾಯ ನೀಡುವುದಾಗಿದೆ. ನ್ಯಾಯಾಲಯಗಳು ಉನ್ನತೀಕರಣ ಹೊಂದಬೇಕಾದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಚಿಕ್ಕೋಡಿ ನ್ಯಾಯಾಲಯ ಕಟ್ಟಡ ಐತಿಹಾಸಕವಾಗಿ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ ಸಂವಿಧಾನ ಗ್ರಂಥವನ್ನು ಹಸ್ತಾಂತರಿಸುತ್ತಿರುವ ಚಿತ್ರಣ ಅನಾವರಣಗೊಳಿಸಿದ್ದು ಶ್ಲಾಘನೀಯ ಎಂದು ತಿಳಿಸಿದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮಾತನಾಡಿ, ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಇಲ್ಲಿ ಚಿಕ್ಕೋಡಿಯಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಕಟ್ಟಡದಲ್ಲಿ ನ್ಯಾಯವಾದಿಗಳು, ನ್ಯಾಯಾಧೀಶರು ನ್ಯಾಯ ಕೇಳಿ ಬಂದ ಕಕ್ಷಿದಾರರಿಗೆ ನ್ಯಾಯ ನೀಡುವಂತಾಗಲಿ ಎಂದು ಆಶಿಸಿದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಚಿಕ್ಕೋಡಿ ನ್ಯಾಯಾಲಯದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ವಾದ ಮಾಡಿರುವುದರಿಂದ ಐತಿಹಾಸಿಕತೆ ಹೊಂದಿದೆ. ನ್ಯಾಯಾಲಯಗಳ ಸಂಕೀರ್ಣಗಳನ್ಬು ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ನ್ಯಾಯಾಲಯಕ್ಕೆ ಆಗಮಿಸುವ ಕಕ್ಷಿದಾರರಿಗೆ ಬೇಕಾಗುವ ಎಲ್ಲ ಸೌಲಭ್ಯ ಹೊಂದಿರುವುದಾಗಿ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿನ ಬಹಳಷ್ಟು ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯ ನೀಡುವ ಕೆಲಸವನ್ನು ಸರ್ಕಾರ ಮಾಡಿದೆ. ರಾಯಬಾಗ, ಗೋಕಾಕ, ಚಿಕ್ಕೋಡಿ ಸೇರಿ ಒಟ್ಟು ₹ 10 ಕೋಟಿ ಕಟ್ಟಡಕ್ಕೆ ನೀಡಲಾಗಿದೆ. ಮಹಿಳೆಯರಿಗೆ ವಿಶೇಷ ಅವಕಾಶ ನೀಡುವ ನಿಟ್ಟಿನಲ್ಲಿ ಚಿಕ್ಕೋಡಿ ವಕೀಲರ ಸಂಘದ ಎರಡನೇ ಮಹಡಿಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಬೆಳಗಾವಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ನ್ಯಾ.ಕೆ.ಎಸ್.ಮುದಗಲ, ನ್ಯಾಯಮೂರ್ತಿ ಸಚಿನ ಮಗದುಮ್ಮ, ಕೆ.ಎಸ್.ಹೇಮಲೇಖಾ, ವಿಜಯಕುಮಾರ ಪಾಟೀಲ ಹಾಗೂ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಮಾತನಾಡಿದರು. ಶಾಸಕರಾದ ಗಣೇಶ ಹುಕ್ಕೇರಿ, ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ, ಹರೀಶಗೌಡ ಪಾಟೀಲ, ತೃಪ್ತಿ ಧರಣಿ, ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತಕುಮಾರ, ರಾಜ್ಯ, ವಕೀಲರ ಸಂಘದ ಉಪಾಧ್ಯಕ್ಷ ರಾಜು ಖೋತ, ಧಾರವಾಡ ಉತ್ತರ ವಲಯದ ಲೋಕೊಪಯೋಗಿ ಇಲಾಖೆ ಮುಖ್ಯ ಅಭಿಯಂತ ಶಿವಾನಂದ ನಾಯ್ಕ, ಗಿರೀಶ ದೇಸಾಯಿ, ಹಿರಿಯ ವಕೀಲರಾದ ಟಿ.ವೈ.ಕಿವಡ, ಡಿ.ಎಸ್.ಕುಂಬೋಜಕರ, ಎಸ್.ಪಿ.ಉತ್ತುರೆ, ಎಸ್.ಆರ್.ಸಗರೆ, ಎಸ್.ಡಿ.ಚೌಗಲಾ, ಪಿ.ಜಿ.ಅನ್ವೇಕರ, ಬಿ.ಡಿ.ಪಾಟೀಲ, ಜೆ.ಟಿ.ಬೋಕೆ, ಡಿ.ಬಿ.ಕಿಲ್ಲೇದಾರ, ಆರ್.ಡಿ.ತಂಗಡೆ, ಆರ್.ಐ.ಖೋತ, ವೈಜುಷಾ ಅಡಕೆ, ಮೀನಾಕ್ಷಿ ಪಾಟೀಲ, ಅಣಪೂರ್ಣಾ ಚೌಗಲಾ, ಮಾಣಿಕಮ್ಮ ಕಬಾಡಗೆ ಸೇರಿದಂತೆ ಹಲವರು ಹಾಜರಿದ್ದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಿಕ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಎಂ.ಬಿ.ಪಾಟೀಲ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ರಮೇಶ ಹಿತ್ತಲಮನಿ ವಂದಿಸಿದರು.
-----ಕೋಟ್
ಚಿಕ್ಕೋಡಿ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿನ ಶಿಶುಪಾಲನೆ ಕೇಂದ್ರ ಹಾಗೂ ಸಂವಿಧಾನ ಅರ್ಪಣೆ ಮಾಡುತ್ತಿರುವ ಚಿತ್ರ ಎಲ್ಲ ಗಮನ ಸೆಳೆದಿದೆ. ಈ ವರ್ಷ ಲೋಕ ಅದಾಲತ್‌ಗಳ ಮೂಲಕ 1.11 ಕೋಟಿ ವ್ಯಾಜ್ಯಗಳ ಮೂಲಕ ನ್ಯಾಯದಾನ ನೀಡುವ ಕೆಲಸವನ್ನು ರಾಜ್ಯದ ಎಲ್ಲ ನ್ಯಾಯಾಲಯಗಳು ಮಾಡಿವೆ. ಇದರಲ್ಲಿ 1400 ಕುಟುಂಬಗಳಿಗೆ ₹ 3100 ಕೋಟಿ ಪರಿಹಾರ ನೀಡಲಾಗಿದೆ.ಎಚ್.ಕೆ.ಪಾಟೀಲ, ಸಚಿವರುಪೋಟೋ : 21ಸಿಕೆಡಿ1,2,3ಚಿಕ್ಕೋಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀಣವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪ್ರಸನ್ನ ಜಿ. ವರಾಳೆ ಉದ್ಘಾಟಿಸಿದರು.ಸಚಿವ ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ,ಗಣೇಶ ಹುಕ್ಕೇರಿ, ಕರ್ನಾಟಕ ರಾಜ್ಯ ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು,ನ್ಯಾಯಮೂರ್ತಿಗಳಾದ ಸಚೀನ ಮಗದುಮ್ಮ,ವಿಜಯಕುಮಾರ ಪಾಟೀಲ,ಕೆ.ಎಸ್.ಹೇಮಲೇಖಾ,ಕಲ್ಮೇಶ ಕಿವಡ,ರಮೇಶ ಹಿತ್ತಲಮನಿ ಉಪಸ್ಥಿತರಿದ್ದರು.
----ಭಾವುಕರಾದ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪ್ರಸನ್ನ ಜಿ. ವರಾಳೆ ಚಿಕ್ಕೋಡಿ ನ್ಯಾಯಾಲಯ ಸಂಕೀರ್ಣದಲ್ಲಿ ಅಂಬೇಡ್ಕರ ಅವರ ಗೋಡೆ ಬಿತ್ತಿ ಚಿತ್ರ ಅನಾವರಣಗೊಳಿಸಿರುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವುದು ಹಾಗೂ ನನ್ನ ಜೀವನದಲ್ಲಿಯ ಕನಸು ಸಾಕಾರಗೊಳ್ಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂಬುದೇ ನನ್ನ ಭಾಗ್ಯ ಎಂದು ಭಾವುಕರಾದರು.ತಮ್ಮ ತಂದೆಯವರು ಡಾ.ಬಿ.ಆರ್.ಅಂಬೇಡ್ಕರ ಅವರಿಂದ ಮಾರ್ಗದರ್ಶನದ ಹಳೆಯ ನೆನಪುಗಳನ್ನು ಮೆಲಕು ಹಾಕಿ ಅಂಬೇಡ್ಕರ ಅವರಿಗಾದ ಅಪಮಾನ ನೆನಪಿಸಿಕೊಂಡು ವೇದಿಕೆಯ ಮೇಲೆ ಕಂಬನಿ ಮಿಡಿದರು.