)
ಕನ್ನಡಪ್ರಭ ವಾರ್ತೆ ಬೀಳಗಿ
ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಭಾಷಣ ಕಲೆ, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಪ್ರತಿಭೆಗಳು ಮಕ್ಕಳಲ್ಲಿ ಹುದುಗಿರುತ್ತವೆ. ಅವನ್ನು ಹೆಕ್ಕಿ ಹೊರತರಲು ಕನ್ನಡಪ್ರಭ ಸೂಕ್ತ ವೇದಿಕೆ ದೊರಕಿಸಿ ಕೊಟ್ಟಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಅನಾವರಣ ಗೊಳಸಿಬೇಕು. ಸಂಕುಚಿತ ಮನೋಭಾವನೆ ಬಿಟ್ಟು ಅವಕಾಶಗಳು ದೊರೆತಾಗ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿ, ಪ್ರಾಣಿ ಪಕ್ಷಿ, ಮನುಷ್ಯ, ಕೀಟಗಳು ಪ್ರಕೃರ್ತಿಯ ಒಂದು ಭಾಗವಾಗಿವೆ. ಪ್ರತಿ ಜೀವಿಗೂ ಪರಿಸರದ ಮೇಲೆ ಸರಿಸಮಾನ ಹಕ್ಕು ಇದೆ. ಪರಿಸರ ಕಾಪಾಡಿಕೊಳ್ಳಲು, ರಕ್ಷಿಸಲು ವಿದ್ಯಾರ್ಥಿ ಜೀವನದಿಂದಲೇ ಪ್ರಾರಂಭಿಸಬೇಕು. ನೀರಿನ ಮೂಲಗಳನ್ನು ಶುದ್ಧವಾಗಿಟ್ಟುಕೊಳ್ಳುವುದು, ಕಸ ನಿರ್ವಹಣೆ, ಬಳಸಿದ ಪೆನ್ನು, ಚಾಕ್ಲೇಟ್ ಹಾಳೆಗಳು, ಸ್ಟ್ರಾಗಳು, ಎಲ್ಲೆಂದರಲ್ಲಿ ಬಿಸಾಕದೇ ಕಸದಬುಟ್ಟಿಗೆ ಹಾಕುವ ಸಣ್ಣ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರದಲ್ಲಿರುವ ಪ್ರತಿ ಜೀವಿಗೂ ತನ್ನದೇ ಆದ ಜಾಣತನ ಇರುತ್ತದೆ. ಇರುವೆ ಕಟ್ಟುವ ಹುತ್ತ ಬಹಳ ಅದ್ಭುತವಾಗಿರುತ್ತದೆ. ಸಣ್ಣ ಇರುವೆ ತನ್ನ ಗಾತ್ರಕ್ಕೂ ಮೀರಿ ಹುತ್ತವನ್ನು ನಿರ್ಮಿಸುತ್ತದೆ. ಅದನ್ನು ಅನುಕರಿಸಿಯೇ ದೊಡ್ಡದಾದ ಸುಸಜ್ಜಿತ ಕಟ್ಟಡಗಳ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು..
ಅರಣ್ಯ, ವನ್ಯ ಜೀವಿಗಳ ರಕ್ಷಣೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಪರಿಸರ ರಕ್ಷಣೆ, ವನ್ಯಜೀವಿಗಳ ರಕ್ಷಣೆಗೆ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಎಲ್ಲರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು.-ರುಥ್ರನ್.ಪಿ, ಬಾಗಲಕೋಟೆಯ ಉಪ ಅರಣ್ಯ ಸಂರಕ್ಷಾಣಾಧಿಕಾರಿ