- ತ್ವರಿತ, ಗುಣಮಟ್ಟದ ಕಾಮಗಾರಿಗೆ ಸವಿತಾ ಹುಲ್ಮನಿ ಸೂಚನೆ - - - ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಿವಿಧ ವಾರ್ಡುಗಳ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ದುರಸ್ತಿಪಡಿಸುವ ಕಾಮಗಾರಿಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.
ವಾರ್ಡ್ ಸಂಖ್ಯೆ 39 ವಿದ್ಯಾನಗರದಲ್ಲಿ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಅಡ್ಡ ರಸ್ತೆಗಳು ಮುಖ್ಯ ರಸ್ತೆಗೆ ಸಂಪರ್ಕಿಸುವ ಅಪ್ರೋಚ್‌ಗಳಲ್ಲಿ ಟಾರ್ ಹಾಕುವ ಕಾಮಗಾರಿ ವೀಕ್ಷಿಸಿದರು. ಪ್ರತಿ ವಾರ್ಡ್‌ವಾರು ಗುಂಡಿ ಬಿದ್ದಿರುವ ರಸ್ತೆಗಳ ಪಟ್ಟಿಯ ಪ್ರಕಾರ 10 ದಿನಗಳಲ್ಲಿ ಪಟ್ಟಿ ಮಾಡಿರುವ ಎಲ್ಲ ಗುಂಡಿಗಳನ್ನು ಮುಚ್ಚಿಸಲು ಅಗತ್ಯ ಮಾನವ ಸಂಪನ್ಮೂಲ ಮತ್ತು ಯಂತ್ರೋಪಕರಣಗಳೊಂದಿಗೆ ಕಾಮಗಾರಿಯ ವೇಗವನ್ನು ಮೂರು ಪಟ್ಟು ಹೆಚ್ಚಿಸಿ, ತ್ವರಿತ ಕಾರ್ಯನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಮಹಾನಗರ ಪಾಲಿಕೆ ತಾಂತ್ರಿಕ ಅಭಿಯಂತರರಿಗೆ ಕೂಡಲೇ ಗುಣಮಟ್ಟದೊಂದಿಗೆ ತ್ವರಿತ ಗತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಲು ಆದೇಶಿಸಲಾಯಿತು.ಈ ಸಂದರ್ಭ ಅಭಿಯಂತರರು, ಅಧಿಕಾರಿ ಸಿಬ್ಬಂದಿ ಇದ್ದರು.
- - - -20ಕೆಡಿವಿಜಿ31.ಜೆಪಿಜಿ:ದಾವಣಗೆರೆಯ ವಿವಿಧ ವಾರ್ಡುಗಳಲ್ಲಿನ ರಸ್ತೆಯಲ್ಲಿನ ಗುಂಡಿ ಮುಚ್ಚಿಸುವ ಕಾಮಗಾರಿಗಳನ್ನು ಸವಿತಾ ಹುಲ್ಮನಿ ಗಣೇಶ ವೀಕ್ಷಣೆ ಮಾಡಿದರು.