ನಮ್ಮ ನಡೆ ಸಾರ್ವಜನಿಕರ ಕಡೆ ವಿನೂತನ ಕಾರ್ಯಕ್ರಮ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Jan 21, 2025, 12:32 AM IST
20ಕೆಕಡಿಯು1. | Kannada Prabha

ಸಾರಾಂಶ

ಕಡೂರು, ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪುರಸಭೆ ಆಡಳಿತವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಪರಿಹಾರಕ್ಕಾಗಿ ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಘೋಷಣೆ ಅಡಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪ್ರಕಟಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪುರಸಭೆ ಆಡಳಿತವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಪರಿಹಾರಕ್ಕಾಗಿ ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಘೋಷಣೆ ಅಡಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪ್ರಕಟಿಸಿದರು.

ಸೋಮವಾರ ಕಡೂರು ಪುರಸಭೆ ಕನಕ ಸಭಾಂಗಣದಲ್ಲಿ ನಡೆದ ನಮ್ಮ ನಡೆ ಸಾರ್ವಜನಿಕರ ಕಡೆ ಕಾರ್ಯಕ್ರಮದ ಪೂರ್ವ ಭಾವಿ ಸಭೆ ಅಧ್ಯಕ್ಷತೆವಹಿಸಿ ಪುರಸಭಾ ಸದಸ್ಯರ ಸಲಹೆ ಆಲಿಸಿ ಮಾತನಾಡಿ, ಕಳೆದ 2007ರ ತಮ್ಮ ಅವಧಿಯಲ್ಲಿ ಜನರ ಮನೆ ಮನೆಗೆ ತೆರಳಿ ನಮೂನೆ 3ನ್ನು ವಿತರಿಸಲಾಗಿತ್ತು. ಇದೀಗ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣದ 23 ವಾರ್ಡುಗಳನ್ನು ಅಭಿವೃದ್ಧಿ ಪಡಿಸಲು ಹಾಗು ಸಮಸ್ಯೆಗಳ ಆಲಿಸುವ ಈ ಕಾರ್ಯಕ್ರಮ ಮುಖ್ಯವಾಗಿದೆ ಎಂದರು.

ಪುರಸಭೆ ಆಡಳಿತ ಅಧಿಕಾರಿಗಳು ಚುನಾಯಿತ ಸದಸ್ಯರೊಂದಿಗೆ ಪಟ್ಟಣದ ಪ್ರತಿ ಮನೆಗಳಿಗೆ ತೆರಳಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಪಟ್ಟಿಮಾಡಿ ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಶೀಲಿಸಿ ಪರಿಹರಿಸುವ ಮಹತ್ತರ ಕಾರ್ಯಕ್ರಮ ಆಗಿರುವ ಕಾರಣ ಈ ಬಗ್ಗೆ 23 ವಾರ್ಡುಗಳ ಚುನಾಯಿತ ಸದಸ್ಯರ ಸಲಹೆ ಸಹಕಾರ ಪಡೆಯುವ ಸದುದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ ಎಂದರು.

ಇದರಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಬಗ್ಗೆ ಸದಸ್ಯರೊಡನೆ ಪ್ರತಿ ವಾರ್ಡಿಗೆ ಆಡಳಿತ ಯಂತ್ರದೊಂದಿಗೆ ಭೇಟಿ ನೀಡಿ ನೀರು, ರಸ್ತೆ, ಸ್ವಚ್ಛತೆ, ಚರಂಡಿ, ಬೀದಿ ದೀಪ, ಆಸ್ತಿಗಳ ದಾಖಲೆಗಳು ಸೇರಿದಂತೆ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹರಿಸುವ ಕಾರ್ಯ ಮತ್ತು ವೈಯಕ್ತಿಕವಾಗಿ ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡಲು ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಘೋಷಣೆಯೊಂದಿಗೆ ವಾರ್ಡ್ ಸಭೆ ನಡೆಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ದಿನಾಂಕ, ಸ್ಥಳ ನಿಗಧಿಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಲ್ಲದೆ, ಆಯಾ ವಾರ್ಡಿನ ಸದಸ್ಯರ ಗಮನಕ್ಕೂ ಬಾರದಂತೆ ಜನರ ಕೆಲಸ ಮಾಡಿಕೊಡಲು ಹೆಚ್ಚಾಗಿರುವ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವ ಪ್ರಮುಖ ಪ್ರಯತ್ನ ಇದಾಗಿದೆ. ಅಧಿಕಾರಿಗಳು, ಪುರಸಭಾ ಸದಸ್ಯರು ಕೈಜೋಡಿಸಬೇಕು ಎಂದರು. ಶಾಸಕ ಕೆ. ಎಸ್. ಆನಂದ್ ಅವರ ಸಲಹೆ ಪಡೆದು ಸಮಸ್ಯೆ ಪರಿಹಾರ, ಅಭಿವೃದ್ಧಿಗೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದ ಅವರು, ಈ ವಿನೂತನ ಕಾರ್ಯಕ್ರಮದಿಂದ ಅಧಿಕಾರಿಗಳು ಕೂಡ ಜಾಗೃತರಾಗುತ್ತಾರೆ ಎಂದರು.

ಸಭೆಯಲ್ಲಿ ಸದಸ್ಯ ಸೈಯ್ಯದ್ ಯಾಸೀನ್ ಮಾತನಾಡಿ, ನೀರಿನ ಕಾರಂಜಿ ಪುನರ್‌ ನಿರ್ಮಾಣ ಸೇರಿದಂತೆ ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬಿಟ್ಟು ಅಧ್ಯಕ್ಷರಿಗೆ ಸಹಕಾರ ನೀಡೋಣ ಭಂಡಾರಿ ಶ್ರೀನಿವಾಸ್ ಉತ್ತಮ ಆಡಳಿತ ನೀಡುತ್ತಿದ್ದು ಸಾರ್ವಜನಿಕರ ಸಹಕಾರ ಮುಖ್ಯ ಎಂದರು. ಸದಸ್ಯ ಮರುಗುದ್ದಿಮನು ಮಾತನಾಡಿ, ಪಟ್ಟಣದ ಕಸ ವಿಲೇವಾರಿಗೆ ಪುರಸಭೆ ವಾಹನಗಳು ಉತ್ತಮ ಕಾರ್ಯ ನಿರ್ವಹಿಸು ತ್ತಿದ್ದರೆ ಖಾಸಗಿ ಸಂಸ್ಥೆಗಳ (ಎನ್‍ಜಿಒ) ಟೆಂಡರ್ ದಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯೆ ಸುಧಾ ಉಮೇಶ್ ಮಾತನಾಡಿ, ವಾರ್ಡ್‍ಸಭೆಗಳನ್ನು ಪ್ರತಿಯೊಂದು ವಾರ್ಡ್‍ನಲ್ಲಿ ನಡೆಸಿದರೆ ಉತ್ತಮ ಎಂದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್ , ಸದಸ್ಯರಾದ ಮನು ಮರುಗುದ್ದಿ, ಸುಧಾ ಉಮೇಶ್, ಪುಷ್ಪಾ ಮಂಜುನಾಥ್, ವಿಜಯಾ ಚಿನ್ನರಾಜು ಮಾತನಾಡಿದರು. ಸದಸ್ಯರಾದ ಯತಿರಾಜ್, ಮೋಹನ್, ಸಂದೇಶ್ ಕುಮಾರ್, ತಿಮ್ಮಯ್ಯ, ಪ್ರೇಮ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

20ಕೆಕೆಡಿಯು1

ಕಡೂರು ಪುರಸಭೆ ಕನಕ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ವಾರ್ಡ್ ಸಭೆಯ ಪೂರ್ವ ಬಾವಿ ಸಭೆ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ