ಗೋವು ಹಿಂದೂ ಧರ್ಮಿಯರ ಅಸ್ಮಿಯತೆ

KannadaprabhaNewsNetwork |  
Published : Jun 03, 2026, 03:00 AM IST
ಚನ್ನಮ್ಮನ ಕಿತ್ತೂರು | Kannada Prabha

ಸಾರಾಂಶ

ಗೋವು ಹಿಂದೂ ಧರ್ಮಿಯರ ಅಸ್ಮಿಯತೆಯಾಗಿದೆ. ಅನ್ಯಧರ್ಮಿಯರು ಗೋವುಗಳನ್ನು ಹತ್ಯೆ ಮಾಡುವ ಮೂಲಕ ಹಿಂದೂಗಳ ಅಸ್ಮಿಯತೆಗೆ ಧಕ್ಕೆವುಂಟು ಮಾಡುತ್ತಿದ್ದಾರೆ ಎಂದು ಗೋವು ರಕ್ಷಕ ಪುನೀತ್ ಕೇರೆಹಳ್ಳಿ ಗುಡುಗಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಗೋವು ಹಿಂದೂ ಧರ್ಮಿಯರ ಅಸ್ಮಿಯತೆಯಾಗಿದೆ. ಅನ್ಯಧರ್ಮಿಯರು ಗೋವುಗಳನ್ನು ಹತ್ಯೆ ಮಾಡುವ ಮೂಲಕ ಹಿಂದೂಗಳ ಅಸ್ಮಿಯತೆಗೆ ಧಕ್ಕೆವುಂಟು ಮಾಡುತ್ತಿದ್ದಾರೆ ಎಂದು ಗೋವು ರಕ್ಷಕ ಪುನೀತ್ ಕೇರೆಹಳ್ಳಿ ಗುಡುಗಿದರು.

ಕೋಟೆಯ ಮುಂಭಾಗದಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷದ್‌ ಹಾಗೂ ಬಜರಂಗದಳದ ವತಿಯಿಂದ ಪ್ರತಿಭಟನೆ ಹಾಗೂ ಸ್ವಯಂ ಪ್ರೇರಿತ ಕಿತ್ತೂರು ಬಂದ್‌ ಉದ್ದೇಶಿಸಿ ಮಾತನಾಡಿದ ಅವರು, ಗೋವು ರಕ್ಷಣೆಯ ಸಂದರ್ಭದಲ್ಲಿ ಅನ್ಯ ಧರ್ಮಿಯರು ನಮ್ಮ ಕಾರ್ಯಕರ್ತರಿಗೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಿದ್ದಲ್ಲದೇ, ಮತ್ತೆ ನಮ್ಮ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಗೋವು ಹತ್ಯೆ ನಿಷೇಧ ಕಾಯ್ದೆ ಇದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಆ ಕಾಯ್ದೆಯನ್ನು ಏಕೆ ಅನುಷ್ಠಾನಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿ ಅಕ್ರಮ ಕಸಾಯಿ ಖಾನೆಗಳನ್ನು ಕೂಡಲೇ ಬಂದ್ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಪೊಲೀಸರು ಗೋವುಗಳ ರಕ್ಷಣೆಗೆ ಮುಂದಾಗದಿದ್ದಲ್ಲಿ ಗೋವು ನಮ್ಮ ಅಸ್ಮಿತೆಯಾಗಿದೆ. ಅದನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂಗಳ ಮೇಲಿದೆ ಗೋವು ರಕ್ಷಣೆಗೆ ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳ ಯಾವಾಗಲೂ ಸನ್ನದ್ಧರಾಗಿರುತ್ತೇವೆ. ನಮ್ಮನ್ನು ತಡೆಯುವ ಶಕ್ತಿ ಯಾರಲ್ಲಿದೆಯೋ ಅವರು ಬಂದು ತಡೆಯಲಿ ಎಂದು ಸವಾಲ ಹಾಕಿದರು.ಶಾಂತಿ ಸಭೆ ಹೆಸರಿನಲ್ಲಿ ಪೊಲೀಸರು ತಮಗೆ ಬೇಕಾದ ವ್ಯಕ್ತಿಗಳನ್ನು ಕರೆ ತಂದು ಶಾಂತಿ ಸಭೆ ನಡೆಸುತ್ತಿರಿ, ಏಕೆ ಶಾಂತಿ ಸಭೆಯ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಯ ಸದಸ್ಯರನ್ನು ಕರೆಯುವುದಿಲ್ಲ?. ಇಲಾಖೆಗಳು ತಲೆ ಹಿಡಿಯುವ ಕೆಲಸ ಬಾಡಬಾರದೆಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದೂಗಳು ದೇವಸ್ಥಾನಕ್ಕೆ ತೆರಳಿ ಅಲ್ಲಿ ಸಲ್ಲಿಸುವ ದೇಣಿಗೆ ಹಣವೂ ಹಿಂದೂಗಳಿಗೆ ಬಳಕೆಯಾಗುತ್ತಿಲ್ಲ. ಬದಲಾಗಿ ಮಸೀದಿ ಹಾಗೂ ಚರ್ಚಗಳಿಗೆ ಅನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಮುಂದೆ ಯಾವೊಬ್ಬ ಹಿಂದೂಗಳು ದೇವಸ್ಥಾನಕ್ಕೆ ದೇಣಿಗೆ ಸಲ್ಲಿಸದೆ ಅದೇ ಹಣವನ್ನು ಗೋ ಶಾಲೆಗಳಿಗೆ ಹಾಗೂ ಮಠಗಳಿಗೆ ನೀಡಿ ಎಂದು ಮನವಿ ಮಾಡಿದರು.ಉತ್ತರ ಪ್ರಾಂತ್ಯದ ಸಹ ಕಾರ್ಯದರ್ಶಿ ಪುಂಡಲೀಕ ದಳವಾಯಿ ಮಾತನಾಡಿ, ಯಾರೋಬ್ಬರ ಹೆದರಿಕೆಯಿಂದ ಈ ಪ್ರತಿಭಟನೆಯ ರ್‍ಯಾಲಿ ನಿಂತಿಲ್ಲ, ಮಠಾಧೀಶರ ಹಾಗೂ ನಮ್ಮ ಹಿರಿಯರ ಮಾರ್ಗದರ್ಶನದಂತೆ ಇಂದು ನಾವು ರ್‍ಯಾಲಿ ಕೈಬಿಟ್ಟಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.ನಾವು ಹಿಂದೂ ಸಂಘಟನೆಯ ಕಾರ್ಯಕರ್ತರು ಯಾವೊಬ್ಬ ಅನ್ಯ ಧರ್ಮಿಗೂ ನಾವು ಹೆದರಲ್ಲ. ಪೊಲೀಸರಗೆ ಹಲವು ಪ್ರಶ್ನೆಗಳ ಸುರಿಮಳೆ ಗೈದರು. ನೋಟಿಸ್ ನೀಡುವ ಮೂಲಕ ನಮ್ಮನ್ನು ಹೆದರಿಸುವ ಪ್ರಯತ್ನ ಪೊಲೀಸರು ಮಾಡಿದ್ದಾರೆ. ಆದರೆ, ನಾವು ಯಾರೊಬ್ಬರೂ ಎಷ್ಟೇ ಪ್ರಕರಣಗಳು ನಮ್ಮೆಲ್ಲೆ ದಾಖಲಾದರೂ ಅಂಜದೇ, ಕುಗ್ಗದೆ ಹಿಂದೂ ಧರ್ಮ ಹಾಗೂ ಗೋವು ರಕ್ಷಣೆಗೆ ಮುಂದಾಗುತ್ತೇವೆ ಎಂದರು.

ವಿಶ್ವ ಹಿಂದೂ ಪರಿಷದ್ ಹುಟ್ಟಿದ್ದೆ ಸಂಘರ್ಷಕ್ಕಾಗಿ ಈ ಸಂಘಟನೆಯ ಸೈನಿಕ ದೇಶ ಹಾಗೂ ಧರ್ಮದ ರಕ್ಷಣೆಗೆ ಸದಾ ಸಿದ್ಧರಿರುತ್ತೇವೆ.ಈ ಹಿಂದೆ ಅನೇಕ ಸಂದರ್ಭದಲ್ಲಿ ಸರ್ಕಾರಗಳನ್ನು ಸಹ ಎದುರು ಹಾಕಿಕೊಂಡು ಅನೇಕೆ ಸಂಕಲ್ಪಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.ಕ್ಷೇತ್ರಿಯ ಪ್ರಮುಖರಾದ ಕೃಷ್ಣಾ ಜೀ ಭಟ್, ಭಜರಂಗದಳದ ಪ್ರಾಂತ್ಯ ಸಂಯೋಜಕ ಬಸವರಾಜ ಸುಗೂರ, ಜಿಲ್ಲಾ ಭಜರಂಗ ದಳದ ಅಧ್ಯಕ್ಷ ಪ್ರಮೋದ ಕುಮಾರ ಮಾತನಾಡಿದರು.ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ದೇಗುಲಹಳ್ಳಿಯ ವಿರೇಶ್ವರ ಸ್ವಾಮೀಜಿ ಸೇರಿದಂತೆ ಮಾಜಿ‌ ಶಾಸಕ ಮಹಾಂತೇಶ ದೊಡ್ಡಗೌಡರ ಈ ಪ್ರತಿಭಟನೆಗೆ ಸಾಥ್ ನೀಡಿದರು.ಪೊಲೀಸ್ ಠಾಣೆಗೆ ಮುತ್ತಿಗೆ ಎಚ್ಚರಿಕೆ:

ಪಟ್ಟಣದ ಹಿಂದೂ ಕಾರ್ಯಕರ್ತರ ಮೇಲೆ ಹಾಕಲಾದ ಕೇಸ್‌ಗಳನ್ನು ಈ ಕೂಡಲೇ ಹಿಂಪಡೆಯಬೇಕು, ಇಲ್ಲವಾದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದೂ ಸಂಘಟನೆಗಳ ಪ್ರಮುಖರು, ಶ್ರೀಗಳು ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕೆಎಂಎಫ್ ನಿರ್ದೇಶಕ ಡಾ.ಬಸವರಾಜ ಪರವಣ್ಣವರ, ಪರವೀನಾಯ್ಕರ ಎಚ್ಚರಿಕೆ ನೀಡಿದರು.ಕೂಡಲೇ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ವೀರಯ್ಯ ಹಿರೇಮಠ ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಕಲ್ಲಗೌಡ ಪಾಟೀಲ ಈಗಾಗಲೇ ಹಿಂದೂ ಕಾರ್ಯಕರ್ತರಿಗೆ ನೊಟೀಸ್ ನೀಡಲಾಗಿದೆ. ಅದನ್ನು ಈ ಕೂಡಲೇ ಹಿಂಪಡೆದು ಯಾವುದೇ ಕೇಸ್ ದಾಖಲಿಸುವುದಿಲ್ಲ. ಅಲ್ಲದೆ ತಮ್ಮ ಪರ ವಕೀಲರನ್ನು ನಮ್ಮ ಕಚೇರಿಗೆ ಕಳುಹಿಸಿ ಕೊಟ್ಟಲ್ಲಿ. ಲಿಖಿತವಾಗಿ ಈ ಭರವಸೆ ನೀಡುತ್ತೇನೆ ಎಂದು ಭರವಸೆ ನೀಡಿದ ನಂತರ ಹಿಂದೂ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ತಹಸೀಲ್ದಾರ್‌ ಕಲ್ಲಗೌಡ ಪಾಟೀಲಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಳಕಲ್ಲ ನಗರಕ್ಕಿಲ್ಲ ವಿದ್ಯುತ್‌ ಚಿತಾಗಾರ ಭಾಗ್ಯ!
ಕನ್ನಡ ಜಾಗೃತಿ ಜಾಥಾದೊಂದಿಗೆ ಶಾಲಾ ಪ್ರಾರಂಭೋತ್ಸವ