ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಧ್ಯಪ್ರಾಚ್ಯದ ಇರಾನ್-ಇಸ್ರೇಲ್ ಮತ್ತು ಅಮೆರಿಕ ಯುದ್ಧವನ್ನು ನಿಲ್ಲಿಸುವಂತೆ ಹಾಗೂ ಕೇಂದ್ರ ಸರ್ಕಾರವು ಅಡುಗೆ ಅನಿಲದ ಬೆಲೆ ಇಳಿಸುವಂತೆ, ವಾಣಿಜ್ಯ ಸಿಲಿಂಡರ್ ಸಮಸ್ಯೆ ಪರಿಹರಿಸುವಂತೆ ವಿಶ್ವಶಾಂತಿಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಪಕ್ಷದ ಮುಖಂಡರು, ಇಡೀ ಜಗತ್ತಿಗೆ ಇಂದು ಯುದ್ಧ ಬೇಡ, ವಿಶ್ವಶಾಂತಿ ಬೇಕಾಗಿದೆ. ಇಸ್ರೇಲ್-ಅಮೇರಿಕಾ ಜಂಟಿಯಾಗಿ ಇರಾನ್ ಮೇಲೆ ಯುದ್ಧ ನಡೆಸಿದ್ದರಿಂದ ಇಡೀ ಮಧ್ಯಪ್ರಾಚ್ಯವಷ್ಟೇ ಅಲ್ಲ, ವಿಶ್ವಾದ್ಯಂತ ಅದರ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿವೆ. ತಕ್ಷಣವೇ ಮೂರೂ ದೇಶಗಳು ಯುದ್ಧ ನಿಲ್ಲಿಸಬೇಕು ಎಂದರು.ಅಮೇರಿಕಾದ ಪ್ರಚೋದನೆಯೊಂದಿಗೆ ಇಸ್ರೇಲ್ ಸೇರಿಕೊಂಡು ಇರಾನ್ ಮೇಲೆ ನಡೆಸಿರುವ ಯುದ್ಧವು ಕೇವಲ ಸ್ವಾರ್ಥ, ಲಾಭಕ್ಕಾಗಿ ಮಾತ್ರವಾಗಿದೆ. ಯುದ್ಧದಿಂದಾಗಿ ಅಮಾಯಕ
ಯುದ್ಧದ ಪರಿಣಾಮ ಭಾರತದಲ್ಲಿ ಅಡುಗೆ ಅನಿಲ, ತೈಲ ಇತರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೊಟೆಲ್ ಸೇರಿದಂತೆ ಸಾಕಷ್ಟು ಉದ್ಯಮಗಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯುದ್ಧದಿಂದಾಗಿ ಹೊಡೆತ ಬಿದ್ದಿದೆ. ಇನ್ನಾದರೂ ಯುದ್ಧ ನಿಲ್ಲಿಸುವ ಕೆಲಸವು ವಿಶ್ವಸಂಸ್ಥೆಯಿಂದ ಆಗಬೇಕು ಎಂದು ಹೇಳಿದರು.
ದೇಶದಲ್ಲಿ ಅಡುಗೆ ಅನಿಲ ದರ ಏರಿಕೆಯಾಗಿದೆ. ವಾಣಿಜ್ಯ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ. ಮಂಗಳ ಮತ್ತು ಇತರೆ ಕಾರ್ಯ, ಸಭೆ, ಸಮಾರಂಭಗಳಲ್ಲಿ ಆಹಾರ ಸಿದ್ಧಪಡಿಸುವುದಕ್ಕೂ ಪರದಾಡುವ ಸ್ಥಿತಿ ಇದೆ. ಮತ್ತೆ ಜನರು ಸೌದೆ ಒಲೆಯತ್ತ ಮುಖ ಮಾಡುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಕೇಂದ್ರ ಸರ್ಕಾರವು ಸಮರ್ಪಕವಾಗಿ ಅಡುಗೆ ಅನಿಲದ ದರ ಇಳಿಸಲಿ. ವಾಣಿಜ್ಯ ಸಿಲಿಂಡರ್ ಪೂರೈಸಲು ಮುಂದಾಗಬೇಕು. ಯಾವುದೇ ಅಗತ್ಯ ವಸ್ತುಗಳು, ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಆವರಗೆರೆ ಎಚ್.ಜಿ.ಉಮೇಶ, ಜಿಲ್ಲಾ ಮಂಡಳಿ ಸದಸ್ಯರಾದ ಪಿ.ಷಣ್ಮುಖಸ್ವಾಮಿ, ಕೆ.ಬಾನಪ್ಪ, ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ಕೆರನಹಳ್ಳಿ ರಾಜು, ಎ.ತಿಪ್ಪೇಶನಾಯ್ಕ, ಸರೋಜ, ಪುಷ್ಪಾ, ಚಿನ್ನಪ್ಪ, ವಿ.ಲಕ್ಷ್ಮಣ, ನರೇಗಾ ರಂಗನಾಥ, ಚಮನ್ ಸಾಬ್, ಸುರೇಶ, ಜಯಣ್ಣ, ಶರಣಪ್ಪ, ಶಿವಕುಮಾರ ಶೆಟ್ಟರ್, ಮೌನೇಶ, ಮರಿಯಪ್ಪ, ರೈಡರ್ ರಂಗನಾಥ ಇತರರು ಇದ್ದರು.