- ಅಂತಾರಾಷ್ಟ್ರೀಯ ವಿಚಾರ ಸಂಕಿರಣ: ಮಾನಸಯ್ಯ ಕನ್ನಡಪ್ರಭ ವಾರ್ತೆ ರಾಯಚೂರು
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.16ರ ಬೆಳಗ್ಗೆ 10 ಕ್ಕೆ ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಧಿವೇಶನದ ಉದ್ಘಾಟನೆಯನ್ನು ನಡೆಸಲಿದ್ದು, 17 ರಿಂದ 20 ವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಪ್ರತಿನಿಧಿಗಳ ಅಧಿವೇಶನವನ್ನು ಏರ್ಪಡಿಸಿದ್ದು, 17 ರಂದು ನಡೆ ಯಲಿರುವ ಮೊದಲ ಗೋಷ್ಠಿಯಲ್ಲಿ ಸಾಮ್ರಾಜ್ಯಶಾಹಿ ಯುದ್ಧ ಕುರಿತು ಒಂದು ದಿನ ಅಂತರರಾಷ್ಟ್ರೀಯ ವಿಚಾರ ಸಂಕಿರಣ, 18 ರಂದು ಜರುಗಲಿರುವ ಎರಡನೇ ಗೋಷ್ಠಿಯಲ್ಲಿ ಆರ್ ಎಸ್ ಎಸ್ ಫ್ಯಾಸಿಸಮ್ ಸೋಲಿಸುವ ಸವಾಲು ಹಾಗೂ ಜಾತಿ ನಿರ್ಮೂಲನ ಹೋರಾಟ ಕುರಿತು ಹೀಗೆ ಎರಡು ರಾಷ್ಟ್ರೀಯ ವಿಚಾರ ಸಂಕೀರ್ಣಗಳು ನಡೆಯಲಿವೆ. ಇವುಗಳಲ್ಲಿ ದೇಶ ವಿದೇಶಗಳ ಜೊತೆ ಕರ್ನಾಟಕದ ಪ್ರಮುಖರು ಭಾಗವಹಿಸಲಿದ್ದಾರೆ.
ಕಾರ್ಪೊರೇಟ್ ಬಂಡವಾಳ ಶಾಹಿ ಹಾಗೂ ಸಂಘ ಪರಿವಾರ ಜಂಟಿ ಪ್ರಾಯೋಜಿತ ಹಿಂದುತ್ವ ಫ್ಯಾಸಿಸಂ ಭಾರತದ ರಾಜಕೀಯ ಕ್ಷೇತ್ರವನ್ನೇ ಆವರಿಸಿಬಿಟ್ಟಿದೆ. ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಇದು ದೊಡ್ಡ ಅಲ್ಲೋಲಕಲ್ಲೋಲವನ್ನು ಉಂಟು ಮಾಡಿದೆ. ದೇಶದ ಸಂಪತ್ತು ಹಾಗೂ ಶ್ರಮಶಕ್ತಿಯನ್ನು ಮಿತಿಮೀರಿ ಲೂಟಿ ಮಾಡುವ ನವ ಉದಾರವಾದವು ಎಲ್ಲೆಂದರಲ್ಲಿ ರಾರಾಜಿಸುತ್ತಿರುವ ಈ ಸಮಯದಲ್ಲಿ ಮಹಾ ಅಧಿವೇಶನದ ಅಗತ್ಯತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.ರಾಯಚೂರು ಹಾಗೂ ಕಲ್ಯಾಣ ಕರ್ನಾಟಕದ ಪರವಾಗಿ ಮಹಾದಿವೇಶನ ಸ್ವಾಗತ ಸಮಿತಿಯು ಅಗತ್ಯ ಸಿದ್ಧತೆಗಳನ್ನು ಸಂಘಟಿಸಲು ಹಣಕಾಸು, ಆಹಾರ ಅತಿಥಿಸತ್ಕಾರ, ಸದನ ಸಾರಿಗೆ ಸಂಪರ್ಕ, ಸಾಂಸ್ಕೃತಿಕ ಹಾಗೂ ಮಹಿಳಾ ಸೇರಿ ಹಲವು ಉಪಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಎಂ.ಗಂಗಾಧರ್,ಉಪಾಧ್ಯಕ್ಷ ರವೀಂದ್ರನಾಥ ಪಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಾಬು ಬಂಡಾರಿಗಲ್, ವಾಸ್ತವ್ಯ ಸಮಿತಿ ಅಧ್ಯಕ್ಷ ಜೆ.ಬಿ.ರಾಜು, ಆಹಾರ ಸಮಿತಿ ಅಧ್ಯಕ್ಷ ಬಿ.ಬಸವರಾಜ, ಸದನ ತಾಂತ್ರಿಕ ಸಮಿತಿ ಅಧ್ಯಕ್ಷ ಎಂ.ನಿರಂಜನ್ ಕುಮಾರ್, ಮುಖಂಡರಾದ ಮಣಿ, ಮಾಬುಸಾಬ್ ಬೆಳ್ಳಟ್ಟಿ ಸೇರಿ ಅನೇಕರು ಇದ್ದರು.
14ಕೆಪಿಆರ್‌ಸಿಆರ್ 03: ರಾಯಚೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಪಿಐ ರೆಡ್ ಸ್ಟಾರ್ ಕಮ್ಯೂನಿಸ್ಟ್ ಪಕ್ಷದ 13ನೇ ರಾಷ್ಟ್ರೀಯ ಮಹಾ ಅಧಿವೇಶನದ ಫೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.