ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಗಾಂಧಿಭವನದಲ್ಲಿ ಪ್ರತಿಭಾಂಜಲಿ ಸುಮಗ ಸಂಗೀತ ಅಕಾಡೆಮಿ, ಕೃಷಿಕ ಅಲಯನ್ಸ್ ಸಂಸ್ಥೆ, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಪ್ರಖ್ಯಾತ ಹಿನ್ನಲೆಗಾಯಕಿ ಎಸ್.ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ-ಪುಷ್ಪ-ಗೀತನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವರಸಾಮ್ರಾಜ್ಞೆ ಎಸ್.ಜಾನಕಿ ಅವರನ್ನು ಚಿತ್ರರಂಗದವರು ಜಾನಕಿಯಮ್ಮ ಎಂದೇ ಕರೆದು ಗೌರವಿಸುತ್ತಿದ್ದರು. ಜಗತ್ತಿನಲ್ಲಿಯೇ ವಿಭಿನ್ನ ಧ್ವನಿಗಳಲ್ಲಿ ಹಾಡುವ ಅದ್ಭುತ ಗಾಯಕಿ ಜಾನಕಿಯಮ್ಮ ಸ್ವರಮಾಂತ್ರಿಕ ಸರಸ್ವತಿಯಾಗಿದ್ದರು. ಮಗುವಿನ ಧ್ವನಿ, ಯುವತಿ, ವೃದ್ದೆ ಧ್ವನಿಗಳಲ್ಲಿ ಹಾಡುಗಳನ್ನು ಹಾಡಿದ ಏಕೈಕ ಹಿನ್ನಲೆಗಾಯಕಿಯಾಗಿದ್ದರು ಎಂದು ನುಡಿದರು.ಗಾಯಕಿ ಎಸ್.ಜಾನಕಿಯರವರು ೨೦ ಭಾಷೆಗಳಲ್ಲಿ ಸುಮಾರು ೪೮ ಸಾವಿರ ಹಾಡುಗಳನ್ನು ಹಾಡಿರುವ ಏಕೈಕ ಗಾಯಕಿಯಾಗಿದ್ದಾರೆ. ೪ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ೩೦ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿನಿಮಾ ಸಾಹಿತ್ಯಕ್ಕೆ ಜೀವ ತುಂಬಿದ ಸ್ವರಸಾಮಾಜ್ಞೆ ಮಾದರಿ ಸರಳ ಜೀವನ ನಡೆಸಿದರು ಎಂದು ಸ್ಮರಿಸಿದರು.
ಭಾರತೀಯ ಚಿತ್ರರಂಗದ ಅಪ್ರತಿಮ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಸಂಗೀತವೇ ಉಸಿರಾಗಿತ್ತು. ಇವರ ವಿಭಿನ್ನ ಧ್ವನಿಯ ಹಾಡುಗಳು ಕೇಳಲು ಮಧರವಾಗಿವೆ, ತಲೆದೂಗದ ಸಹೃದಯಿ ಇರಲಾರ, ಇಂದಿನ ಗಾಯಕರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ನ ಲಿಂಗಣ್ಣಬಧುಕಾರ್, ಅಲಯನ್ಸ್ ಸಂಸ್ಥೆ ೧ನೇ ಜಿಲ್ಲಾ ರಾಜ್ಯಪಾಲ ಚಂದ್ರಶೇಖರ್, ಕಾರ್ಯದರ್ಶಿ ಧನಂಜಯ್‌ದರಸಗುಪ್ಪೆ, ಉದಯಶಂಕರ್, ಬಸವರಾಜು, ಡಿ.ಸಣ್ಣಯ್ಯ, ಪುಟ್ಟಸ್ವಾಮಿ, ಕಿಶೋರ್, ಮಹಾದೇವಯ್ಯ, ಮಂಜುಳಾ, ಲಕ್ಷ್ಮೀ ಮತ್ತಿತರರಿದ್ದರು.