ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಪಂ ಕಚೇರಿ ಎದುರು ಸೇರಿದ ಕಾರ್ಯಕರ್ತರು, ಗಾಣದಾಳು ಗ್ರಾಮ ಪಂಚಾಯ್ತಿಯ ಆಶಾ ಕಾರ್ಯಕರ್ತೆ ಹಾಗೂ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಜ್ಯೋತಿ ಅವರನ್ನು ನಿಯಮಬಾಹಿರವಾಗಿ ಕೆಲಸದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿದರು.
ಆಶಾ ಕಾರ್ಯಕರ್ತೆ ಜ್ಯೋತಿ ಅವರು ಆಶಾ ಸಂಘಟನೆಯು ತಾಲೂಕು ವೈದ್ಯಾಧಿಕಾರಿಗಳಿಗೆ ಆಶಾ ಕಾರ್ಯಕರ್ತೆಯರ ಹಲವಾರು ನೈಜ ಕುಂದುಕೊರತೆಗಳನ್ನು ಪ್ರಸ್ತಾಪಿಸಿ ವಿವರವಾದ ಪತ್ರವನ್ನು ಸಲ್ಲಿಸಿದ್ದರು. ರಜೆ ರಹಿತ ಕೆಲಸ ಮಾಡಿಸಬಾರದು. ಜಿಪಿಎಸ್ ಫೋಟೋ ತೆಗೆದು ಹಾಕಲು ಒತ್ತಡ ಹಾಕಬಾರದು. ಪ್ರತಿಯೊಂದಕ್ಕೂ ರಜೆ ಪತ್ರ, ಇನ್ನಿತರೆ ಕಾರಣಗಳಿಗೆ ಪತ್ರ ಕೊಡಲು ಸೂಚಿಸುವುದನ್ನು ನಿಲ್ಲಿಸಬೇಕು. ವೈಯಕ್ತಿಕ ಕೆಲಸಗಳಿಗೆ ಮತ್ತು ಸಮತೋಲನ ಜೀವನಕ್ಕೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಪತ್ರ ಬರೆದಿದ್ದರು. ಈ ಬಗ್ಗೆ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸುದರ್ಶನ್ ಅವರು ಪ್ರತಿಕ್ರಿಯಿಸಿ ಆಶಾಗಳಿಗೆ ರಜೆ ಕೊಟ್ಟು ಸಾಕಾಗಿದೆ ಎಂದರು. ರಜೆ ಕೊಡುವುದಕ್ಕೆ ಆಕ್ಷೇಪಿಸಿದ್ದರು. ಈ ಬಗ್ಗೆ ಜ್ಯೋತಿ ಪ್ರಶ್ನೆ ಮಾಡಿದ್ದನ್ನೇ ಕಾರಣವಾಗಿಟ್ಟುಕೊಂಡು ಒಂದು ವರ್ಷದ ಬಳಿಕ ಅವರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಿದ್ದಾರೆ ಎಂದು ಆರೋಪಿಸಿದರು.ಜ್ಯೋತಿ ಅವರು ಎತ್ತಿರುವ ಪ್ರಶ್ನೆ ಸತ್ಯಾಂಶಗಳ ಪ್ರಕಾರ ಸರಿಯಾಗಿದ್ದರು. ಅಭಿವ್ಯಕ್ತಿ ಶೈಲಿ ಸರಿ ಇರಲಿಲ್ಲ ಎಂದು ದಕ್ಕಾಗಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಆದರೂ ಅವರ ಅನರ್ಹತೆಗೆ ಮಾಡಲಾಗಿದೆ ಎಂದು ಕಿಡಿಕಾರಿದರು.