ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರತಿ ವರ್ಷ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕಾದರೆ ರೈತರು ಹಾಗೂ ಮಾಧ್ಯಮಗಳನ್ನು ಆಹ್ವಾನಿಸಿ ಕಾರ್ಖಾನೆಗೆ ಬಾಯ್ಲಿರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡುತ್ತಿದ್ದರು. ಈ ವಿಚಾರ ಮಾಧ್ಯಮಗಳ ಮೂಲಕ ಜಿಲ್ಲೆಯ ಎಲ್ಲಾ ರೈತರಿಗೂ ತಿಳಿಯುತ್ತಿತ್ತು. ಈಗ ಕಾರ್ಖಾನೆ ಗುತ್ತಿಗೆ ಪಡೆದಿರುವ ನಿರಾಣಿ ಷುಗರ್ಸ್ ಮಾಲೀಕರು ಮತ್ತು ಆಡಳಿತ ಮಂಡಳಿ ಯಾವುದೇ ರೈತರು, ರೈತ ಮುಖಂಡರನ್ನು ಆಹ್ವಾನಿಸದೆ ಸರಿಯಾದ ಮಾಹಿತಿ ನೀಡದೆಯೇ ಕಾರ್ಖಾನೆ ಬಾಯ್ಲಿರ್‌ಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.
ಈ ಮಾಹಿತಿ ಬಹುತೇಕ ರೈತರಿಗೆ ಲಭ್ಯವಾಗಿಲ್ಲ. ಇದರಿಂದ ರೈತರು ಸಾಕಷ್ಟು ಗೊಂದಲದಲ್ಲಿದ್ದಾರೆ. ಕಾರ್ಖಾನೆ ಆರಂಭಿಸುವುದಕ್ಕೆ ರೈತರ ಯಾವುದೇ ತಕರಾರು ಇಲ್ಲ. ಆದರೆ, ಆಡಳಿತ ಮಂಡಳಿ ರೈತರಿಗೆ ಮಾಹಿತಿ ನೀಡಿದರೆ ಕಬ್ಬನ್ನು ಕಾರ್ಖಾನೆಗೆ ಪೂರೈಕೆ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳಲು, ಕಾರ್ಖಾನೆ ಅಧಿಕಾರಿಗಳನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯು ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಎರಡು ತಾಲೂಕುಗಳ ರೈತರ ಜೀವನಾಡಿಯಾಗಿದೆ. ಕಾರ್ಖಾನೆ ಗುತ್ತಿಗೆ ಪಡೆದಿರುವ ನಿರಾಣಿ ಷುಗರ್ಸ್ ಮಾಲೀಕರು, ಆಡಳಿತ ಮಂಡಳಿ ಧೋರಣೆ ಸರಿಯಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಸೇರಿದಂತೆ ಜಿಲ್ಲೆಯಲ್ಲಿ ದೊರೆಯುವ ಎಲ್ಲಾ ಕಬ್ಬುಗಳನ್ನು ಪೂರೈಕೆ ಮಾಡಿ ಸರಿಯಾದ ಸಮಯಕ್ಕೆ ರೈತರಿಗೆ ಪೇಮೆಂಟ್ ನೀಡುವ ಕಡೆಗೆ ಮುಂದಾಗಬೇಕು. ಜತೆಗೆ ರೈತರ ಬಾಕಿ ಉಳಿಸಿಕೊಂಡಿರುವ 50 ರು. ಹಣವನ್ನು ಪಾವತಿಸಬೇಕು ಎಂದು ರೈತರಾದ ಸತೀಶ್, ಕುಮಾರ್, ಮಹೇಶ್, ಸಂತೋಷ್ ಸೇರಿದಂತೆ ಸಾರ್ವಜನಿಕರು, ರೈತರು ಒತ್ತಾಯಿಸಿದ್ದಾರೆ.ಮಹಾತ್ಮ ಗಾಂಧಿ ಪರಿಸರ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಪರಿಸರ ಸಂರಕ್ಷಣೆಯ ಬಗೆಗೂ ಅಪಾರ ಕಾಳಜಿ ವಹಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಆರಂಭದಲ್ಲಿ ಹತ್ತು ಸಾವಿರ ರು. ನಗದು ಸಹಿತವಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪರಿಸರ ಪ್ರಶಸ್ತಿ-೨೦೨೬ಕ್ಕಾಗಿ ೨೦೨೫ರ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಥಮ ಮುದ್ರಣವಾಗಿ ಹೊರ ಬಂದಿರುವ ಪರಿಸರ ಕುರಿತಾದ ಪುಸ್ತಕವನ್ನು ಆಹ್ವಾನಿಸುತ್ತಿದ್ದು, ಕೃತಿಯ ಎರಡು ಪ್ರತಿಗಳನ್ನು ಪುಸ್ತಕದ ಲೇಖಕರು ಇಲ್ಲವೇ ಪ್ರಕಾಶಕರು ಕೆಳಕಂಡ ವಿಳಾಸಕ್ಕೆ ಆ.೧೫, ೨೦೨೬ರ ಒಳಗೆ ಕಳುಹಿಸಿಕೊಂಡಲು ಕೋರಿದೆ. ಪ್ರಶಸ್ತಿಯನ್ನು ಲೇಖಕರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.