ಕನ್ನಡಪ್ರಭ ವಾರ್ತೆ ವಿಜಯಪುರ
ತಾಲೂಕಿನ ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಸಂಸ್ಥೆ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ವಿಜಯಪುರ ಸಹಯೋಗದಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗುರು ಪರಂಪರೆಗೆ ಹೆಚ್ಚು ಮಹತ್ವ ಕೊಟ್ಟಿರುವವರು ನಾವು. ಸಮಾಜ ಅತೀ ಹೆಚ್ಚು ಗೌರವ ಕೊಡುವ ಕ್ಷೇತ್ರ ನಮ್ಮ ಶಿಕ್ಷಕರ ಕ್ಷೇತ್ರವಾಗಿದೆ. ಶಾಲೆಯು ಜೀವಂತ ದೇವರ ಗುಡಿ ಎಂದು ಸಮಾಜ ನಂಬಿದೆ. ಕಡುಬಡತನದ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಅವರ ಜೀವನ ಉಜ್ವಲಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಯಲ್ಲಿ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಮುಖ್ಯೋಪಾಧ್ಯಾಯರದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಬೇಕು. ಗೈರು ಮಕ್ಕಳ ಸಂಖ್ಯೆ ಹಾಗೂ ಕೋಚಿಂಗ್ ಕೇಂದ್ರಗಳಿಗೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.ಗ್ರಾಮೀಣ ವಲಯದ ಬಿಇಒ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ, ಹಿಂದುಳಿದ ಮಕ್ಕಳ ಜೀವನ ನಿರ್ಮಿಸಲು ನಮ್ಮ ಶಿಕ್ಷಕರ ಪಾತ್ರ ದೊಡ್ಡದಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸನಗೌಡ ಹರನಾಳ ಮಾತನಾಡಿ, ಶಾಲೆಯ ಸೊಬಗನ್ನು ಹೆಚ್ಚಿಸುವ ಕಾರ್ಯ ಮಾಡಬೇಕು. ಸೇವೆ ಸಲ್ಲಿಸಿದ ಶಾಲೆಯಲ್ಲಿ ತಮ್ಮ ಧನಾತ್ಮಕ ಅಂಶಗಳನ್ನು ಬಿಟ್ಟು ಬರುವಂತೆ ಎಲ್ಲರೂ ನೆನಪು ಇಟ್ಟುಕೊಳ್ಳುವಂತ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಕೋರೆ, ರವಿ ಪವಾರ, ಸುಭಾಸ ರಾಠೋಡ, ರಜಿಯಾಉದ್ದಿನ ರೋಜಿಂದಾರ, ಮಾಂತೇಶ ಭಾಪ್ರಿ, ಶ್ರೀಧರ ಕುಲಕರ್ಣಿ, ಅಮರಗೊಂಡ, ಸಿಆರ್‌ಪಿಗಳು ಹಾಗೂ ಮುಖ್ಯ ಗುರುಗಳು ಹಾಜರಿದ್ದರು. ರವೀಂದ್ರ ಚಿಕ್ಕಮಠ ನಿರೂಪಣೆ, ಪ್ರಭು ಬಿರಾದಾರ ಸ್ವಾಗತ ಹಾಗೂ ಎಸ್.ಡಿ. ಮೋಸಲಗಿ ವಂದನಾರ್ಪಣೆ ನೆರವೇರಿಸಿದರು.