ಬಯಲು ಸೀಮೆಗೆ ನೀರಾವರಿ ಶಾಶ್ವತ ಯೋಜನೆ ಕಲ್ಪಿಸಿ

KannadaprabhaNewsNetwork |  
Published : Jun 30, 2025, 12:34 AM IST
೨೯ಕೆಎಲ್‌ಆರ್-೯ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಅವಿಭಜಿತ ಜಿಲ್ಲೆಯ ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆ ರೂಪಿಸಿ ಮಂಜೂರು ಮಾಡಲಾಯಿತು, ಟೆಂಡರ್ ಪ್ರಕ್ರಿಯೆಗಳು ನಡೆದು ಕಾಮಗಾರಿಗಳನ್ನು ಕೈಗೆತ್ತಿಕೊಂಡ ನಂತರ ಈ ಯೋಜನೆಯನ್ನು ಇತರೆ ೭ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಕೊನೆಯ ಭಾಗವಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಾಗಿರುವುದು ದುರಾದೃಷ್ಟಕರ.

ಕನ್ನಡಪ್ರಭ ವಾರ್ತೆ ಕೋಲಾರಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಜುಲೈ ೨ ರಂದು ಆಯೋಜಿಸಿರುವ ಸಚಿವ ಸಂಪುಟ ಸಭೆಯ ಆಜೆಂಡಾದಲ್ಲಿ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಕುರಿತು ಮಹತ್ವ ತೀರ್ಮಾನ ಪ್ರಕಟಿಸಬೇಕೆಂದು ಸಿಎಂ ಮುಖ್ಯ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ಕಳೆದ ಮೂರು ದಶಕದಿಂದ ಶಾಶ್ವತ ನೀರಾವರಿಗಾಗಿ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆಯಾದರೂ ನಿರೀಕ್ಷಿತ ಪರಿಹಾರವು ಇನ್ನು ಸಿಗದಿರುವುದು ದುರಂತದ ಸಂಗತಿಯಾಗಿದೆ ಎಂದು ವಿಷಾದಿಸಿದರು. ಅಂತರ್ಜಲದಲ್ಲಿ ಫೋರೈಡ್ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಮೂರು ಜಿಲ್ಲೆಗಳ ಅಂತರ್ಜಲದಲ್ಲಿ ಫೋರೈಡ್, ನೈಟ್ರೇಟ್ ಜೊತೆಗೆ ಯುರೇನಿಯಂ ಮತ್ತು ಆರ್ಸೆನಿಕ್ ಎಂಬ ವಿಷಕಾರಿ ಅಂಶಗಳಿರುವ ಬಗ್ಗೆ ವರದಿ ನೀಡಿದ್ದರೂ ಸಹ ಸಚಿವ ಸಂಪುಟದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳದೆ ವರದಿಗಳನ್ನು ಕಸದ ಬುಟ್ಟಿಗೆ ಎಸೆದು ನಿರ್ಲಕ್ಷಿಸಲಾಗಿದೆ ಎಂದು ಕಿಡಿಕಾರಿದರು. ಅವಿಭಜಿತ ಜಿಲ್ಲೆಯ ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆ ರೂಪಿಸಿ ಮಂಜೂರು ಮಾಡಲಾಯಿತು, ಟೆಂಡರ್ ಪ್ರಕ್ರಿಯೆಗಳು ನಡೆದು ಕಾಮಗಾರಿಗಳನ್ನು ಕೈಗೆತ್ತಿಕೊಂಡ ನಂತರ ಈ ಯೋಜನೆಯನ್ನು ಇತರೆ ೭ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಕೊನೆಯ ಭಾಗವಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಾಗಿರುವುದು ದುರಾದೃಷ್ಟಕರ. ನಮಗೆ ನ್ಯಾಯಾ ಸಿಗುತ್ತದೆ ಎಂಬ ಭರವಸೆಯೂ ಇಲ್ಲವಾಗಿದೆ. ನಮಗೆಬೇಕಾಗಿರುವುದು ನೀರಿನ ಸೌಲಭ್ಯ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿಯ ಕೊಳಚೆನೀರು ಎರಡು ಬಾರಿ ಪರಿಷ್ಕರಿಸಿ ಶುದ್ದೀಕರಿಸಿ ವಿತರಿಸುವ ನೀರನ್ನು ಮೂರು ಭಾರಿ ಸಂಸ್ಕರಿಸಿ ವಿತರಿಸುವ ಕರಾರು ಇರುವುದನ್ನು ಉಲ್ಲಂಘಿಸಿ ಎರಡು ಭಾರಿ ಮಾತ್ರ ಸಂಸ್ಕರಿಸಿ ವಿತರಿಸುವ ಮೂಲಕ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ. ಕೃಷ್ಣ ನದಿ ನೀರಿನಲ್ಲೂ ನಮ್ಮ ಪಾಲು ಇದೆ. ಈಗಲಾದರೂ ಜು.೨ರಂದು ನಂದಿಗಿರಿ ಧಾಮದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚಿಸಲು ಅವಕಾಶ ಕಲ್ಪಿಸ ಬೇಕೆಂದು ಮನವಿ ಮಾಡಿದರು.ಜು.೧೯ರ ಸಭೆಯನ್ನು ಮುಂದೂಡಿದ ಮಾರನೇ ದಿನವೇ ಮುಖ್ಯ ಮಂತ್ರಿಗಳು ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ವಿವರಗಳನ್ನು ಪಡೆದುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಳ ಪರಿಶೀಲನೆ ನಡೆಸಿದರು. ಜಲ ನಿಗಮದ ಸಭೆ ನಡೆಸಿ ವಿವರಗಳನ್ನು ಪಡೆದಿರುವುದು ನಮ್ಮ ಮನವಿಗೆ ಎಚ್ಚತ್ತು ಕೊಂಡು ನಡೆದಿರುವ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.ಮೂರನೇ ಬಾರಿ ಸಂಸ್ಕರಿಸಿ

ಕೆ.ಸಿ.ವ್ಯಾಲಿಯ ನೀರನ್ನು ಎರಡೂ ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ ೧೩೬ ಜಿಲ್ಲೆಗಳಿಗೆ ಹಾಗೂ ಎಚ್.ಎನ್.ವ್ಯಾಲಿಯ ಸಂಸ್ಕರಣೆಯ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ೬೦ ಕೆರೆಗಳನ್ನು ತುಂಬಿಸುವ ಯೋಜನೆಯೂ ಕಳೆದ ೫-೬ ವರ್ಷದಿಂದ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ನಾವು ನಿಮ್ಮನ್ನು ಯಾವುದೇ ರೀತಿಯ ಲೆಕ್ಕಗಳು, ವೆಚ್ಚವನ್ನು ಕೇಳುತ್ತಿಲ್ಲ ನಾವು ಕೇಳುತ್ತಿರುವುದು ಗುಣಮಟ್ಟದ ನೀರು ಮಾತ್ರ ಎಂದರು.ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಹೊಳಲಿ ಪ್ರಕಾಶ್, ಕುರುಬರಪೇಟೆ ವೆಂಕಟೇಶ್, ವಿ.ಕೆ.ರಾಜೇಶ್, ಅಬ್ಬಣಿ ಶಿವಪ್ಪ, ಕಲ್ವಮಂಜಲಿ ರಾಮು, ಚಂಬೆ ರಾಜೇಶ್, ಕನ್ನಡ ಮಿತ್ರ ವೆಂಕಟಪ್ಪ, ದಲಿತ ನಾರಾಯಣಸ್ವಾಮಿ, ಎ.ಪಿ.ಎಂ.ಸಿ. ಪುಟ್ಟರಾಜು, ಸಾವುಕಾರ್ ಶಂಕರಪ್ಪ, ಶೇಷಾದ್ರಿ, ಸೋಮು, ಚೇತನ್ ಬಾಬು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ