ಪತ್ರಕರ್ತರಿಗೆ ನಿರ್ಭಿಡೆಯ ಕೆಲಸದ ವಾತಾವರಣ ಸೃಷ್ಟಿಯಾಗಲಿ: ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ

KannadaprabhaNewsNetwork |  
Published : Dec 02, 2024, 01:15 AM IST
1ಡಿಡಬ್ಲೂಡಿ5,6ಕನ್ನಡಪ್ರಭ ಛಾಯಾಗ್ರಾಹಕ ಬಸವರಾಜ ಕೆ. ಅಳಗವಾಡಿ ಸೇರಿದಂತೆ ಹಲವು ಪತ್ರಕರ್ತರಿಗೆ ರೋಟರಿ ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಪ್ರಸ್ತುತ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಮಾಧ್ಯಮದ ಪ್ರಭಾವ ಹೆಚ್ಚಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌, ಗೂಗಲ್, ಟ್ವಿಟರ್ ಅನೇಕ ಡಿಜಿಟಲ್ ಮಾಧ್ಯಮದಿಂದ ಮುದ್ರಣ-ವಿದ್ಯುನ್ಮಾನ ಮಾಧ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ಧಾರವಾಡ: ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಸಹಯೋಗದಲ್ಲಿ ''''ಕನ್ನಡಪ್ರಭ'''' ಛಾಯಾಗ್ರಾಹಕ ಬಸವರಾಜ ಕೆ. ಅಳಗವಾಡಿ ಸೇರಿದಂತೆ ಹಲವು ಪತ್ರಕರ್ತರಿಗೆ ''''ರೋಟರಿ ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ'''' ಪ್ರದಾನ ನಗರದ ವಿಠ್ಠಲ ಆಸ್ಪತ್ರೆಯ ತೇಜ್ ಭವನದಲ್ಲಿ ಜರುಗಿತು.

ಪ್ರಶಸ್ತಿ ಪ್ರದಾನ ಮಾಡಿದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಪ್ರಸ್ತುತ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಮಾಧ್ಯಮದ ಪ್ರಭಾವ ಹೆಚ್ಚಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌, ಗೂಗಲ್, ಟ್ವಿಟರ್ ಅನೇಕ ಡಿಜಿಟಲ್ ಮಾಧ್ಯಮದಿಂದ ಮುದ್ರಣ-ವಿದ್ಯುನ್ಮಾನ ಮಾಧ್ಯಮ ಸಂಕಷ್ಟಕ್ಕೆ ಸಿಲುಕಿದೆ. ವಿಷಮ ಪರಿಸ್ಥಿತಿಯಲ್ಲಿ ಅನೇಕ ಪತ್ರಕರ್ತರು ವೃತ್ತಿಗಾಗಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಆತಂಕದ ಜತೆಗೆ ಸಾಕಷ್ಟು ಸವಾಲು ಎದುರಿಸುತ್ತಿರುವ ಪತ್ರಕರ್ತರಿಗೆ ನಿರ್ಭಿಡೆಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸಬೇಕಿದೆ ಎಂದರು.

ಪತ್ರಕರ್ತರಾದ ಮಹಾಂತೇಶ ಕಣವಿ, ಶಶಿಧರ ಬುದ್ನಿ, ರವೀಶ ಪವಾರ, ರಾಜು ಕರಣಿ, ಬಸವರಾಜ ಅಳಗವಾಡಿ, ಶಿವಲಿಂಗಯ್ಯ ಪಾಟೀಲ, ಸದ್ದಾಂ ಮುುಲ್ಲಾ, ಮೀಲಿಂದಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಗೌರಿ ಮಾದನಭಾವಿ, ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಸದಾ ಹಗಲಿರುಳು ಶ್ರಮಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.

ಪತ್ರಕರ್ತರಾದ ಡಾ. ಬಸವರಾಜ ಹೊಂಗಲ್, ರವಿಕುಮಾರ ಕಗ್ಗನವರ, ರೋಟರಿ ಸೆವೆನ್ ಹಿಲ್ಸ್‌ನ ಸ್ಮಿತಾ ಮಂತ್ರಿ, ರೋಟರಿ ಗವರ್ನರ್ ಡಾ. ಪಲ್ಲವಿ ದೇಶಪಾಂಡೆ, ರಶ್ಮಿ ನಾಯಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!