ಕಲಿಕೆಗಾಗಿ ಪೂರಕ ವಾತಾವರಣ ನಿರ್ಮಿಸಿ

KannadaprabhaNewsNetwork |  
Published : Jan 03, 2025, 01:30 AM IST
ನ | Kannada Prabha

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸೂಪ್ತ ಪ್ರತಿಭೆ ಅಡಿಗಿರುತ್ತದೆ. ಅದರಲ್ಲೂ ವಿಶೇಷವಾಗಿ ಪಾಲಕರಿಲ್ಲದ, ಪಾಲಕರಿಂದ ದೂರ ಉಳಿದು ಮಠ, ಮಂದಿರದ ವಸತಿಗೃಹದಲ್ಲಿ ತಂಗಿ ತಮ್ಮ ವಿದ್ಯಾರ್ಥಿ ಜೀವನ ಸಾಗಿಸುತ್ತಿರುವ ಮಕ್ಕಳಿಗೆ ಕಲಿಕೆಗಾಗಿ ಪೂರಕ ವಾತಾವರಣ ನಿರ್ಮಿಸಿದಲ್ಲಿ ಅವರು ನಾಳೆ ಸಮಾಜೋದ್ಧಾರದ ಕಾರ್ಯ ಮಾಡುವಷ್ಟು ಬೆಳೆಯಬಲ್ಲರು ಎಂದು ಸ್ಥಳೀಯ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಸಂಘದಿಂದ ಬೆಳ್ಳಿಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಿರುಪಾಕ್ಷಲಿಂಗ ಸಮಾಧಿಮಠದ ವಸತಿಗೃಹದಲ್ಲಿರುವ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಮವಾರ ಬ್ಲ್ಯಾಂಕೇಟ್(ಹೊದಿಕೆ)ಗಳನ್ನು ವಿತರಿಸಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಪಾರದರ್ಶಕತೆ, ವಿಶ್ವಾಸ, ಶ್ರದ್ಧೆಯಿಂದ ನಮ್ಮ ಸಹಕಾರಿ ಸಂಘವು ಗ್ರಾಹಕರ ಸೇವೆ ಮಾಡುತ್ತ ಬಂದಿದ್ದು, ಕೊರೋನಾ, ಪ್ರವಾಹ, ಮೊದಲಾದ ಆಪತ್ತಿನ ಕಾಲದಲ್ಲಿಯೂ ಅನೇಕ ಬಾರಿ ರಸ್ತೆಗಿಳಿದು ಜನಸಾಮಾನ್ಯರ ಕಣ್ಣೀರು ಒರೆಸುವ ಕಾರ್ಯ ಮಾಡಿದೆ. ದೂರದೂರದಿಂದ ಬಂದು ವಿದ್ಯಾಭ್ಯಾಸಕ್ಕಾಗಿ ಈ ಮಠದಲ್ಲಿ ನೆಲೆಸಿದ ವಿದ್ಯಾರ್ಥಿಗಳಿಗೆ ಚಳಿಗಾಲದಲ್ಲಿ ಯಾವುದೆ ಕಷ್ಟವಾಗಬಾರದೆಂಬ ನಿಟ್ಟಿನಲ್ಲಿ ಬ್ಲ್ಯಾಂಕೇಟ್ (ಹೊದಿಕೆ) ಹಂಚಲಾಗುತ್ತಿದೆ. ಪ್ರಾಣಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳೆಯುತ್ತಿರುವ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ ಎಂದರು.

ಈ ಕಾರ್ಯಕ್ರಮದಲ್ಲಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಮೂರ್ತಿ ಸ್ವಾಮೀಜಿ, ಸಂಚಾಲಕ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ಪಪ್ಪು ಪಾಟೀಲ, ಸಂಜಯ ಶಿಂತ್ರೆ, ರಾವಸಾಹೇಬ ಪಾಟೀಲ, ಧನಂಜಯ ಮಾನವಿ, ರಾಜಶೇಖರ ಹಿರೆಕೊಡಿ, ನರಸಗೌಡಾ ಪಾಟೀಲ, ಶ್ರೀರಾಮ ಭಾರಮಲ, ರಾಜೇಶ ತಿಳವೆ, ಅವಿನಾಶ ಪಾಟೀಲ, ಸಿದ್ಧಗೌಡ ಪಾಟೀಲ, ರಾಮಗೌಡ ಪಾಟೀಲ, ಮುರುಘೇಂದ್ರ ತೋಡಕರ, ವಿರುಪಾಕ್ಷ ಸ್ವಾಮೀಜಿ, ಸಿಇಒ ದಿನಕರ ಪೊವಾರ, ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ