ಕನ್ನಡಪ್ರಭ ವಾರ್ತೆ ಸುರಪುರ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ಜನರನ್ನು ಬಂಧಿಸಲಾಗಿದೆ. ಈ ಕೃತ್ಯದ ಹಿಂದಿರುವ ಇನ್ನೂ ಕೆಲವರು ಹಾಗೂ ರೂವಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೊಡೇಕಲ್ ಹೋಬಳಿಯ ಭಾಗಕ್ಕೆ ಅಭ್ಯರ್ಥಿ ಹೋಗಬಾರದು. ಬೂತ್ ಏಜೆಂಟ್ ಇರಬಾರದು ಎನ್ನುವ ಬೆದರಿಕೆ ಇದೆ. ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಲಾಗಿದೆ. ವೋಟ್ ಬದಲಿಸುವ ತಂತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.2023 ರಲ್ಲೂ ಕೊಡೇಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆ ನಡೆಸಿದ್ದರು. ಈಗ ಮತ್ತೆ 2024ರಲ್ಲಿ ಮತ್ತೆ ರಾಯನಪಾಳ್ಯದಲ್ಲಿ ಪುನರಾವರ್ತಿತವಾಗಿದೆ. ಮುಕ್ತ ಮತದಾನಕ್ಕೆ ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಮುಕ್ತ ಮತದಾನಕ್ಕಾಗಿ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಕಾಂಗ್ರೆಸ್ಸಿನವರೇ ಹೊಡೆದಿದ್ದಾರೆ ಎಂದಾದರೆ ಇಡೀ ಕುಟುಂಬದವರು ಅಷ್ಟೊಂದು ಕಲ್ಲನ್ನು ತಮ್ಮ ಮನೆಗೆ ಹೊಡೆದುಕೊಳ್ಳಲು ಸಾಧ್ಯವೇ? ನಾವು ಶಾಂತಿಯುತವಾಗಿದ್ದು, ಕಾನೂನು ರೀತಿ ನಡೆದುಕೊಳ್ಳುತ್ತೇವೆ. ಯಾವುದೇ ಭಯವಿಲ್ಲದೆ ನಿರ್ಭಿತಿಯಿಂದ ಮತ ಚಲಾಯಿಸಬೇಕು. ಅದಕ್ಕೆ ತಕ್ಕಂತೆ ಸಿಸಿ ಕ್ಯಾಮೆರಾ ಮತ್ತು ಬಂದೋಬಸ್ತ್ ಮಾಡಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ವೀಕ್ಷಕ ಅಭಿಷೇಕ್ ದತ್ತ ಮಾತನಾಡಿದರು. ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ವಿಠ್ಠಲ ಯಾದವ್, ಶಾಂತನಗೌಡ, ನಿಂಗರಾಜ, ರಂಗನಗೌಡ ಸೇರಿದಂತೆ ಇತರರಿದ್ದರು.