ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಳಾಂಗಣ ವೇದಿಕೆಯಲ್ಲಿ ಅಕ್ಕಿಹೆಬ್ಬಾಳು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟ ಕಡೆಯ ಗ್ರಾಮದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂದು ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ರು. ಖರ್ಚು ಮಾಡುತ್ತಿದೆ ಎಂದರು.
ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ಹಲವಾರು ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇಂತಹ ಕಾರ್ಯಕ್ರಮವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.ನಂತರ ವಿದ್ಯಾರ್ಥಿಗಳು ರಸಪ್ರಶ್ನೆ, ಗಟ್ಟಿ ಓದು, ಕಥೆ ಕಟ್ಟುವುದು, ಕೈಬರಹ ಚಟುವಟಿಕೆ, ಜ್ಞಾಪಕ ಶಕ್ತಿ ಚಟುವಟಿಕೆ, ಕಥೆ ಹೇಳುವ ಚಟುವಟಿಕೆ, ಗಣಿತ ಚಟುವಟಿಕೆ ಸೇರಿದ ಹಾಗೆ ಅನೇಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿಗಳ ಚಟುವಟಿಕೆ ಮುಗಿದ ನಂತರ ಪೋಷಕರಿಗೂ ಕೆಲವೊಂದು ಚಟುವಟಿಕೆಗಳನ್ನು ನಡೆಸಿ ಸ್ಪರ್ಧೆಗಳಲ್ಲಿ ವಿಜೇತರಾದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಮುಖ್ಯ ಶಿಕ್ಷಕ ರವಿ ಜಿ.ಎನ್, ಬಿ.ಆರ್.ಪಿ ಬೋರೇಗೌಡ, ಸಿ.ಆರ್.ಪಿ ವೇಣು, ಬೀರವಳ್ಳಿ ಸಿ.ಆರ್.ಪಿ ಮಹೇಶ್, ಮೋಹನ್, ಪ್ರವೀಣ್, ದಯಾನಂದ, ದೈಹಿಕ ಶಿಕ್ಷಕರಾದ ಕುಮಾರ್, ಮಂಜುಳಾ, ಕುಮಾರಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.