ಹುಬ್ಬಳ್ಳಿ:
ಅವರು ಇಲ್ಲಿಯ ವಿದ್ಯಾನಗರ ಬಿವಿಬಿ ಕಾಲೇಜಿನಲ್ಲಿ ಕೆಎಲ್‌ಇ ಸಂಸ್ಥೆಯ ಪ್ರೇರಣಾ ರೆಸಿಡೆನ್ಸಿಯಲ್ ಪಿ.ಯು. ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯೆಂಟೇಶನ್ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದ್ಯ ವಿಜ್ಞಾನಕ್ಕಿಂತ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಅದರಲ್ಲಿ ನ್ಯಾನೊ, ಬೈಯೋ ಹಾಗೂ ಎಐ ತಂತ್ರಜ್ಞಾನಗಳಿವೆ. ಮುಂದಿನ 15 ವರ್ಷಗಳಲ್ಲಿ ಜಗತ್ತು ಇದೇ ರೀತಿ ಇರುವುದಿಲ್ಲ. ನಾವು ಮಾಡುವ ಕೆಲಸ ಮಷಿನ್‌ಗಳು ಮಾಡಬಹುದು. ವಿದ್ಯಾರ್ಥಿಗಳು ತಂತ್ರಜ್ಞಾನ ಯುಗವನ್ನು ಸೂಕ್ತವಾಗಿ ಎದುರಿಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಕವಟಗಿಮಠ, ಜೀವನ ರೂಪಿಸಲು ಪಿಯು ಶಿಕ್ಷಣ ಅವಶ್ಯಕ. ಪೋಷಕರು ತಮ್ಮ ಮಕ್ಕಳನ್ನು ಇನ್ನೊಬ್ಬರೊಂದಿಗೆ ಹೊಲಿಸುವುದು, ತಾರತಮ್ಯ ಮಾಡುವುದು ಬಿಡಬೇಕು. ಪ್ರತಿಯೊಬ್ಬ ಮನುಷ್ಯ ವಿಭಿನ್ನವಾಗಿರುತ್ತಾನೆ. ಶಿಕ್ಷಣದ ಜತೆ ಸಂಸ್ಕಾರ ಕಲಿಯಬೇಕು. ಕ್ಷಮತೆ, ದೃಢ ಸಂಕಲ್ಪವಿದ್ದವರು ಸಾಧನೆ ಮಾಡಬಹುದು ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರಾಂಶುಪಾಲ ಶ್ರೀನಿವಾಸ ನಿಕ್ಕಿ ಸೇರಿದಂತೆ ಹಲವರಿದ್ದರು.