ಕನ್ನಡಪ್ರಭ ವಾರ್ತೆ ಶಿರಾ
ಶಿರಾ ನಗರದ ಪಿಡಬ್ಲ್ಯೂಡಿ ಕ್ವಾರ್ಟರ್ಸ್ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಕದಂಬ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುದ್ರಣ, ದೃಶ್ಯ ಹಾಗೂ ಇಂದಿನ ಯುಗದ ಡಿಜಿಟಲ್ ಮಾಧ್ಯಮ ಸೇರಿದಂತೆ ಎಲ್ಲ ಮಾಧ್ಯಮ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ರಾಜ್ಯ ಕಾಡುಗೋಲ್ಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾರೋಗೆರೆ ಮಹೇಶ್ ಮಾತನಾಡಿ, ಪತ್ರಿಕಾರಂಗ ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಮಾಹಿತಿ ರವಾನಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುವ ಬಹುದೊಡ್ಡ ರಂಗ, ಪತ್ರಿಕೋದ್ಯಮ ಮಿತ್ರರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದರುಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿ ಡಾ.ಮಹೇಂದ್ರಪ್ಪ ಪಿ.ಎಚ್. ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರಂತರವಾಗಿ ಬಲಿಷ್ಠವಾಗಿರಬೇಕಾದರೆ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದರ ಜೊತೆಗೆ ಪ್ರತಿಯೊಬ್ಬ ಪತ್ರಿಕೋದ್ಯಮ ಮಿತ್ರರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಆರ್.ಗೌಡ, ಶಿವು ಚಂಗಾವರ, ಟಿ.ಇ.ರಘುರಾಮ್, ರಘು, ದಶರಥ, ಪುರುಷೋತ್ತಮ್, ಅವಿನಾಶ್, ಲತಾ, ಬಿಜು ಮ್ಯಾಥ್ಯೂ, ಚನ್ನಗಂಗಯ್ಯ, ನೂರುದ್ದೀನ್, ವಾಜರಹಳ್ಳಿ ರಮೇಶ್, ನಗರಸಭೆ ಸದಸ್ಯೆ ಸುಶೀಲಾ ವಿರೂಪಾಕ್ಷ, ಎಚ್.ಗುರುಮೂರ್ತಿ ಗೌಡ, ತಿಪ್ಪೇಸ್ವಾಮಿ, ಶಂಕರ್, ಎಸ್.ಎನ್.ಜಯಪಾಲ್, ಕೆ.ಕುಮಾರ್, ವೀರಭದ್ರ ಸ್ವಾಮಿ, ಬಿ.ಜಿ.ಬಾಲಕೃಷ್ಣೇಗೌಡ, ಮಹಮದ್ ಫಕೃದ್ದೀನ್, ಓಂಕಾರಪ್ಪ, ಎಸ್.ಮಧುಸೂದನ್, ಜಿ.ಆರ್.ನಟರಾಜು, ಹನುಮಂತರಾಜು.ಪಿ, ಟಿ.ಎಲ್.ನಟರಾಜು, ಸುಫಿಯಾನ್ ಅಹಮದ್, ಲಕ್ಷ್ಮೀಕಾಂತ್, ಬಿ.ದಿವಾಕರ್, ಪಿ.ಆರ್.ಮಧುಸೂದನ್, ಬರಗೂರು ವಿರೂಪಾಕ್ಷಪ್ಪ, ಶಿವಕುಮಾರ್, ಮಂಜುನಾಥ್, ವಿನೋದ್ ಕುಮಾರ್, ವಿಜಯಕುಮಾರ್, ಎಂ.ಎಲ್.ನಾಗರಾಜು, ರಾಧಾಕೃಷ್ಣ, ಸುರೇಶ್, ತಂಗವೇಲು, ವಲೀಸಾಬ್, ಪಿ.ಡಿ.ಮಹೇಶ್, ಕಿರಣ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.