ಕನ್ನಡಪ್ರಭ ವಾರ್ತೆ ಮೈಸೂರು
ಆಸ್ತಿ ನೋಂದಣಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಬೇಕು. ಇ-ಖಾತಾ ಅನುಷ್ಠಾನದಲ್ಲಿನ ತಾಂತ್ರಿಕ ವೈಫಲ್ಯವಾಗಿದೆ. ರಾಜ್ಯಾದ್ಯಂತ ಕಡ್ಡಾಯಗೊಳಿಸಲಾದ ಇ-ಖಾತಾ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ದತ್ತಾಂಶಗಳ ಸಮನ್ವಯದ ಕೊರತೆಯಿಂದಾಗಿ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಾಂತ್ರಿಕ ದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಮತ್ತು ಇ-ಖಾತಾ ನೀಡಲು ಕಾಲಮಿತಿ ನಿಗದಿಪಡಿಸಬೇಕು. ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಸರಿಯಾಗುವವರೆಗೆ ಹಳೆಯ ಪದ್ಧತಿಯಲ್ಲೂ ನೋಂದಣಿಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ದರ ನಿಗದಿಯಲ್ಲಿ ವಿಳಂಬ ಆಗುತ್ತಿದೆ. ಹೊಸ ಬಡಾವಣೆಗಳ ದರ ನಿಗದಿಪಡಿಸಲು ಇರುವ ಕೇಂದ್ರ ಮೌಲ್ಯಮಾಪನ ಸಮಿತಿ ನಿಯಮಗಳನ್ನು ಹಳೆಯ ಬಡಾವಣೆಗಳಿಗೂ ಅನ್ವಯಿಸುತ್ತಿರುವುದು ಅವೈಜ್ಞಾನಿಕ. ಇದು ಆಡಳಿತಾತ್ಮಕ ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.
ಒಮ್ಮೆ ಅಧಿಕೃತವಾಗಿ ನೋಂದಾಯಿತವಾದ ಜಿಪಿಎಗೆ ಪ್ರತಿ ವಹಿವಾಟಿಗೂ ಪದೇ ಪದೇ ಜೀವಂತ ಪ್ರಮಾಣಪತ್ರ ಕೇಳುವ ನಿಯಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.