ಹುಬ್ಬಳ್ಳಿ:
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿರುವ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಪಿ ಚಾಲೆಂಜರ್ಸ್ (ಕನ್ನಡಪ್ರಭ) ಹಾಗೂ ಉದಯವಾಣಿ ತಂಡಗಳು ಫೈನಲ್ ಪ್ರವೇಶಿಸಿವೆ.ಇಲ್ಲಿನ ನೆಹರು ಮೈದಾನದಲ್ಲಿ ಸೋಮವಾರ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲು ಹೊಸದಿಂಗತ ಹಾಗೂ ಪ್ರಜಾವಾಣಿ ತಂಡ ಸೆಣಸಾಟ ನಡೆಸಿದವು. ಇದರಲ್ಲಿ ಹೊಸದಿಂಗತ ತಂಡ ಜಯ ಸಾಧಿಸಿತು. ನಂತರ ಕಲಘಟಗಿ ಕಿಂಗ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮಧ್ಯ ನಡೆದ ಪಂದ್ಯದಲ್ಲಿ ಕಲಘಟಗಿ ತಂಡ ಜಯ ಸಾಧಿಸಿತು. ಬಳಿಕ ಕಲಘಟಗಿ ಕಿಂಗ್ಸ್ ಹಾಗೂ ಸಂಯುಕ್ತ ಕರ್ನಾಟಕ ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಕಲಘಟಗಿ ತಂಡ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶ ಮಾಡಿತು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಉದಯವಾಣಿ ಹಾಗೂ ಹೊಸದಿಗಂತ ತಂಡ ಸೆಣಸಾಟ ನಡೆಸಿದವು. ಇದರಲ್ಲಿ ಟಾಸ್ ಸೋತು ಫಿಲ್ಡಿಂಗ್‌ಗೆ ಇಳಿದ ಹೊಸದಿಂಗತ ತಂಡ ಕೇವಲ 38 ರನ್‌ಗಳಿತು. ಕಡಿಮೆ ರನ್‌ಗಳನ್ನು ಬೆನ್ನಟ್ಟಿದ ಉದಯವಾಣಿ ತಂಡವು 39 ರನ್ ಹೊಡೆಯುವ ಮೂಲಕ ಫೈನಲ್ ಪ್ರವೇಶಿಸಿತು.ಎರಡನೇ ಸೈಮಿಫೈನಲ್ ಪಂದ್ಯದಲ್ಲಿ ಕಲಘಟಗಿ ಕಿಂಗ್ಸ್ ಹಾಗೂ ಕೆಪಿ ಚಾಲೆಂಜರ್ಸ್ (ಕನ್ನಡಪ್ರಭ) ಮಧ್ಯ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಪಿ ಚಾಲೆಂಜರ್ಸ್ ತಂಡವು 8 ಓವರ್‌ಗಳಿಗೆ 92 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕಲಘಟಗಿ ಕಿಂಗ್ಸ್ ತಂಡವು ಕೇವಲ 57 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
ಸದ್ಯ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿರುವ ಕೆಪಿ ಚಾಲೆಂಜರ್ಸ್ ಹಾಗೂ ಉದಯವಾಣಿ ತಂಡ ಮಂಗಳವಾರ ಫೈನಲ್ ಪ್ರಶಸ್ತಿಗೆ ಸೆಣಸಾಟ ನಡೆಸಲಿವೆ.ಉದ್ಘಾಟನೆ:
ಸೋಮವಾರ ಬೆಳಗ್ಗೆ ಮಾಧ್ಯಮ ಅಕಾಡೆಮಿ ಸದಸ್ಯ, ಹಿರಿಯ ಪತ್ರಕರ್ತ ಅಬ್ಬಾಸ ಮುಲ್ಲಾ ಅವರು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಆಟಗಾರರಿಗೆ ಶುಭ ಕೋರಿದರು. ಈ ವೇಳೆ ಖಜಾಂಚಿ ಬಸವರಾಜ ಹೂಗಾರ, ಪ್ರಸನ್ನ ಹಿರೇಮಠ, ಶಿವಾನಂದ ಗೊಂಬಿ, ಪ್ರಕಾಶ ಚಳಗೇರಿ, ಮಂಜುನಾಥ ಜರತಾರಘರ ಹಾಗೂ ಉಭಯ ತಂಡದ ಆಟಗಾರರು ಸೇರಿದಂತೆ ಮೊದಲಾದವರಿದ್ದರು.