ಹಗರಿಬೊಮ್ಮನಹಳ್ಳಿ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಮೈದಾನದಲ್ಲಿ ಪಟ್ಟಣದ ಎಸ್‌ಸಿಸಿ ಕ್ರಿಕೆಟ್ ತಂಡ ಆಯೋಜಿಸಿದ್ದ ಟಿ-ಟೆನ್ ಲೆಜೆಂಡ್ ಲೀಗ್ 35 ವರ್ಷ ಮೇಲ್ಪಟ್ಟ ಆಟಗಾರರ ಕ್ರಿಕೆಟ್ ಟೂರ್ನಿಯಲ್ಲಿ ತಾಲೂಕಿನ ಸಿಗೇನಹಳ್ಳಿ-1 ಗ್ರಾಮದ ಸ್ನೇಹಬಳಗ ತಂಡ ಪೈನಲ್ ಪಂದ್ಯದಲ್ಲಿ ವಿಜೇತರಾಗಿ ಗೆಲುವಿನ ನಗೆ ಬೀರಿದರು.ಆಯೋಜಕರು ಪ್ರಥಮ ಬಹುಮಾನ ಪಡೆದ ತಂಡಕ್ಕೆ ₹35 ಸಾವಿರ ಬಹುಮಾನ, ಆಕರ್ಷಕ ಟ್ರೋಫಿ ನೀಡಿದರು. ದ್ವಿತೀಯ ಸ್ಥಾನವನ್ನು ಎಸ್‌ಸಿಸಿ ಕ್ರಿಕೆಟ್ ತಂಡ ತನ್ನದಾಗಿಸಿಕೊಂಡು ₹15 ಸಾವಿರ, ಆಕರ್ಷಕ ಟ್ರೋಫಿ ಪಡೆದುಕೊಂಡಿತು.
ಪೈನಲ್ ಪಂದ್ಯದ ವಿಜೇತ ಆಟಗಾರರಾದ ಬಸವರಾಜ, ಸುಭಾಷ್, ನಬೀಸಾಬ್, ಸೈಯದ್, ಸುಭಾಶ್‌ಚಂದ್ರ, ರಂಗಪ್ಪ, ಕಿರಣ್, ಸಂದೀಪ್, ಜಗನ್ನಾಥ, ಬಂಗಾಳಿ ಸುರೇಶ, ರಾಮನಮಲಿ, ಕಲಂದರ್, ಸುಬಾನ್‌ಸಾಬ್ ಇದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಸಿಗೇನಹಳ್ಳಿ-1 ಗ್ರಾಮದ ಸ್ನೇಹಬಳಗ ತಂಡ ಪ್ರಥಮ ವಿಜೇತರಾಗಿ ಗೆಲುವಿನ ನಗೆ ಬೀರಿತು.