ಕಾನೂನು ಅರಿವಿನಿಂದ ಅಪರಾಧ ತಡೆಯಲು ಸಾಧ್ಯ: ಅಕ್ಷತಾ ಸಿ.ಆರ್.

KannadaprabhaNewsNetwork |  
Published : Nov 15, 2025, 02:15 AM IST
ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಕ್ಷತಾ ಸಿ.ಆರ್ ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆಗಾಗಿ ನ್ಯಾಯ ಜಾಗೃತಿ ಯೋಜನೆ ಅಂಗವಾಗಿ ಇಲ್ಲಿಯ ಸಿವಿಲ್ ನ್ಯಾಯಾಯಲದ ಆವರಣದಲ್ಲಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಕಾನೂನು ಜ್ಞಾನದ ಕೊರತೆಯಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕಾನೂನು ಅರಿವು ಪ್ರತಿಯೊಬ್ಬರಲ್ಲಿ ಬಂದರೆ ಮಾತ್ರ ಅಪರಾಧ ತಡೆಯಲು ಸಾಧ್ಯ ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಕ್ಷತಾ ಸಿ.ಆರ್. ಹೇಳಿದರು.

ಮುಂಡಗೋಡ: ಕಾನೂನು ಜ್ಞಾನದ ಕೊರತೆಯಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕಾನೂನು ಅರಿವು ಪ್ರತಿಯೊಬ್ಬರಲ್ಲಿ ಬಂದರೆ ಮಾತ್ರ ಅಪರಾಧ ತಡೆಯಲು ಸಾಧ್ಯ ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಕ್ಷತಾ ಸಿ.ಆರ್. ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮುಂಡಗೋಡ ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ಮುಂಡಗೋಡ ವಕೀಲರ ಸಂಘ ಹಾಗೂ ಮುಂಡಗೋಡ ತಾಲೂಕಿನ ಇತರ ಇಲಾಖೆಗಳ ಸಹಯೋಗದೊಂದಿಗೆ ನಾಲ್ವಾ ಜಾಗೃತಿ ಯೋಜನೆ -೨೦೨೫, ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆಗಾಗಿ ನ್ಯಾಯ ಜಾಗೃತಿ ಯೋಜನೆ ಅಂಗವಾಗಿ ಮುಂಡಗೋಡ ತಾಲೂಕಿನ ೧೬ ಗ್ರಾಪಂ, ೮ ಶಾಲೆಗಳು ೫ ಅಂಗನವಾಡಿ ಕೇಂದ್ರಗಳು ಸೇರಿದಂತೆ ಒಟ್ಟು ೩೦ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿರುವ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಇಲ್ಲಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಮೂಲ ಉದ್ದೇಶದಿಂದ ಕೈಗೊಳ್ಳುವ ಈ ಕಾರ್ಯಕ್ರಮ ಕೇವಲ ತೋರಿಕೆಗಾಗಿ ಸೀಮಿತವಾಗಬಾರದು, ಬದಲಾಗಿ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದು ಯಶಸ್ವಿಗೊಳಿಸಬೇಕು. ಇದರಲ್ಲಿ ಎಲ್ಲ ಇಲಾಖೆಗಳ ಪಾತ್ರ ಕೂಡ ಮುಖ್ಯವಾಗಿರುತ್ತದೆ. ಹಾಗಾಗಿ ಎಲ್ಲ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಜನಜಾಗೃತಿ ಮೂಡಿಸಲು ಕರೆ ನೀಡಿದರು.

ಮುಂಡಗೋಡ ತಹಸೀಲ್ದಾರ್‌ ಶಂಕರ ಗೌಡಿ, ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸಾದ ರಮೇಶ ಹೆಗಡೆ, ವಕೀಲರ ಸಂಘದ ಅಧ್ಯಕ್ಷ ಎನ್.ಎ. ನಿಂಬಾಯಿ, ಉಪಾಧ್ಯಕ್ಷ ಎಸ್.ಎಂ. ಮಲವಳ್ಳಿ, ಹಿರಿಯ ವಕೀಲ ಕೆ.ಎನ್. ಹೆಗಡೆ, ಸಿ.ಎಸ್. ಗಾಣಿಗೇರ, ಗುಡ್ಡಪ್ಪ ಕಾತೂರ, ಜ್ಯೋತಿ ಪಾಟೀಲ್, ಕೆ.ಎಸ್. ಗುಲ್ಬಾನವರ್, ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಂದನಕುಮಾರ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಮಹಿಳಾ ಸಬಲೀಕರಣದ ಯೋಜನಾಧಿಕಾರಿ ವನಜಾ ನಾಯಕ ಉಪಸ್ಥಿತರಿದ್ದರು. ರಾಜಶೇಖರ ಹುಬ್ಬಳ್ಳಿ ಸ್ವಾಗತಿಸಿದರು. ರಾಜು ಹಂಚಿನಮನಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಎರಡನೇ ಬೆಳೆಗಿಲ್ಲ ತುಂಗಭದ್ರಾ ನೀರು
ಬಿಹಾರ ಜನರಿಂದ ಕಾಂಗ್ರೆಸ್‌ಗೆ ತಕ್ಕ ಉತ್ತರ: ಜಿ.ಐ. ಹೆಗಡೆ