ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈ ವೇಳೆ ಮಾತನಾಡಿದ ರೈತ ಸಿದ್ದು ಹೆಬ್ಬಾಳ, ಜಮೀನಿನಲ್ಲಿ ಬೆಳೆದ ತೊಗರಿ ಬೆಳೆ ಬರಗಾಲ ಪರಿಹಾರಕ್ಕಾಗಿ ಮಾಡಿದ ಸರ್ವೆ ಕಾರ್ಯ ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಆರ್ ಅಧಿಕಾರಿಗಳು ನೈಜ ಬೆಳೆ ಬೆಳೆದಿದ್ದರೂ ಸಮರ್ಪಕ ಸಮೀಕ್ಷೆ ನಡೆಸದೇ ಪಾಳು ಎಂದು ತಪ್ಪಾಗಿ ನಮೂದಿಸಿ ಬೇಜವಾಬ್ದಾರಿ ಕರ್ತವ್ಯ ನಿರ್ವಹಿಸಿದ್ದರಿಂದ ಸರಕಾರದಿಂದ ರೈತರಿಗೆ ನೀಡುವ ಬೆಳೆ ಪರಿಹಾರದಿಂದ ವಂಚಿತಾಗಿದ್ದಾರೆ. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಕಾರಣ ಮೇಲಧಿಕಾರಿಗಳು ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನನಗೆ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಾಹಿತಿ ತಿಳಿದ ಗ್ರೇಡ್-೨ ತಹಸೀಲ್ದಾರ್ ಜಿ.ಎನ್.ಕಟ್ಟಿ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದುಕೊಂಡರು. ಈ ವೇಳೆ ಪ್ರಗತಿಪರ ರೈತ ಸಂಗಮೇಶ ಒಣರೊಟ್ಟಿ ಸೇರಿದಂತೆ ಹಲವರು ರೈತ ಮುಖಂಡರು ಇದ್ದರು.