ಬೆಳೆ ಸಮೀಕ್ಷೆ ಪ್ರಾರಂಭ; ರೈತರಿಗೆ ತುಸು ನೆಮ್ಮದಿ

KannadaprabhaNewsNetwork |  
Published : Sep 23, 2026, 01:30 AM IST
22ಕೆಪಿಡಿವಿಡಿ02 | Kannada Prabha

ಸಾರಾಂಶ

ಮುಂಗಾರು ಮಳೆ ಕೊರತೆಯಿಂದ ಬೆಳೆ ಒಣಗಿ ನಿಂತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರಕಾರ ಈಗಾಗಲೇ ದೇವದುರ್ಗ ಮತ್ತು ಅರಕೇರಾ ಪ್ರದೇಶಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಬೆಳೆಹಾನಿ ಸಮೀಕ್ಷೆ ಪ್ರಾರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ಮುಂಗಾರು ಮಳೆ ಕೊರತೆಯಿಂದ ಬೆಳೆ ಒಣಗಿ ನಿಂತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರಕಾರ ಈಗಾಗಲೇ ದೇವದುರ್ಗ ಮತ್ತು ಅರಕೇರಾ ಪ್ರದೇಶಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಬೆಳೆಹಾನಿ ಸಮೀಕ್ಷೆ ಪ್ರಾರಂಭಗೊಂಡಿದೆ.

ತಹಸೀಲ್ದಾರ್‌ ಲಾಗಿನ್ ಮೂಲಕ ನೇಮಕಗೊಂಡಿರುವ (ಪ್ರೆವೈಟ್ ರೆಸಿಡೆಂಟಿ) ಖಾಸಗಿ ನಿವಾಸಿ ಸಿಬ್ಬಂದಿಗಳು ಈಗಾಗಲೇ ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಶೇ.88ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದ್ದು, ಸೆ.30ರೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳಬೇಕಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಮಾಡುವದರ ಬದಲು 2017-18ರಿಂದ ಗೌರವಧನದ ಮೂಲಕ ನೇಮಕಗೊಂಡಿರುವ ಖಾಸಗಿ ನಿವಾಸಿ ಸಿಬ್ಬಂದಿಗಳಿಂದ ಬೆಳೆ ಸಮೀಕ್ಷೆ ಕಾರ್ಯ ಮಾಡಲಾ ಗುತ್ತಿದೆ. ಹತ್ತಿ, ಮೆಣಸಿನ ಕಾಯಿ, ತೊಗರಿ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿ, ರೈತರಿಗೆ ಆರ್ಥಿಕ ನಷ್ಟಕ್ಕೆ ಗುರಿ ಮಾಡಿವೆ. ಬೆಳೆ ಸಮೀಕ್ಷೆ ಕಾರ್ಯ ನಡೆದಿರುವದರಿದ ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಬೆಳೆ ಸಮೀಕ್ಷೆ ಸಂಪೂರ್ಣ ಮಾಹಿತಿ ಪಡೆಯಲು ‘ಬೆಳೆದರ್ಶಕ’ ಎಂಬ ಆ್ಯಪ್‌ನಲ್ಲಿ ಪ್ರತಿಯೊಬ್ಬರೂ ತಿಳಿಯಬಹುದಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ಮಾಡಲಾಗಿದೆಯೇ, ಇಲ್ಲವೇ? ಸಮೀಕ್ಷೆ ಮಾಡುವವರು ಹಾನಿ ಪ್ರಮಾಣ ಮತ್ತು ಬೆಳೆಗಳನ್ನು ನಮೂದಿಸುವಲ್ಲಿ ಲೋಪಗಳು ಆಗಿದೆಯೇ? ಎಂಬ ಮಾಹಿತಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಯಲ್ಲಿ ಲೋಪಗಳು ಕಂಡು ಬಂದಲ್ಲಿ ಆಕ್ಷೇಪಣೆ ಸಲ್ಲಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ. ರೈತರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಅಧಿಕಾರಿಗಳು ಸೂಚಿಸಿದ್ದಾರೆ.

ಬೆಳೆ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ಎಫ್ಐಡಿ (ರೈತರ ಗುರುತಿನ ಚೀಟಿ) ಮಾಡಿಸಿರಬೇಕು.ಪರಿಹಾದ ಧನ ನೇರವಾಗಿ ರೈತರ ಬ್ಯಾಂಕ್ ಅಕೌಂಟ್‌ಗೆ ಜಮೆಗೊಳ್ಳುತ್ತದೆ. ಬೆಳೆ ಸಮೀಕ್ಷೆ ಆಗಿರುವುದಕ್ಕೆ ಯ್ಯಾಪ್ ಮೂಲಕವಾಗಲಿ ಅಥವಾ ನೇಮಕಗೊಂಡಿರುವ ಖಾಸಗಿ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು ಎಂದು ದೇವದುರ್ಗ ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕ ಹೇಳಿದರು.

ವಾರಬಂಧಿ ಪದ್ಧತಿಯಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ದೊರಕುತ್ತಿಲ್ಲ. ನೀರಿನ ಅಭಾವದಿಂದ ಬೆಳೆಗಳು ಫಲ ಕೊಡುವದು ಅನುಮಾನ ಎಂಬ ಸ್ಥಿತಿಗೆ ತಲುಪಿದ್ದು, ಡಿಸೆಂಬರ್ ಅಂತ್ಯದ ವರೆಗೆ ವಾರಬಂಧಿ ಪದ್ಧತಿ ಕೈಬಿಟ್ಟು ನಿರಂತರ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ದೇವದುರ್ಗ ರೈತ ಸಂಘ ಅಧ್ಯಕ್ಷ ಸಿಪ್ಪತಗೇರಾ ಹನುಮಂತ್ರಾಯ ನಾಯಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ೬ ಸಾವಿರ ತಾಲೂಕುಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಗುರಿ: ಮಧುಸೂದನ ಸಾಯಿ
ರೈತರ ವಿಶ್ವಾಸ ಗಳಿಸುವಲ್ಲಿ ಕಾರ್ಖಾನೆಗಳು ವಿಫಲ: ಜಿಲ್ಲಾಧಿಕಾರಿ ಡಾ.ಕುಮಾರ